Advertisement

ಕಾಂಗ್ರೆಸ್‌ನಿಂದ ಬಿಜೆಪಿಯ ಲೆಹರ್‌ಸಿಂಗ್‌ ಡೈರಿ’ಬಿಡುಗಡೆ

03:50 AM Feb 26, 2017 | Team Udayavani |

ಬೆಂಗಳೂರು: ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವಿನ “ಡೈರಿ’ ಸಮರ ಮುಂದುವರಿದಿದ್ದು, ” ಗೋವಿಂದರಾಜು ಡೈರಿ’ಗೆ ಪ್ರತ್ಯುತ್ತರ ಎಂಬಂತೆ ಕಾಂಗ್ರೆಸ್‌ ಶನಿವಾರ, ಬಿಜೆಪಿ ವರಿಷ್ಠರಿಗೆ “ಕಪ್ಪ’ ನೀಡಲಾಗಿದೆ ಎನ್ನಲಾಗುವ ಮಾಹಿತಿ ಇರುವ “ಲೆಹರ್‌ಸಿಂಗ್‌ ಡೈರಿ’ ಬಿಡು ಗಡೆ ಮಾಡಿದೆ.

Advertisement

ಬಿಜೆಪಿ ಪಕ್ಷದ ಹಾಲಿ ವಿಧಾನ ಪರಿಷತ್‌ ಸದಸ್ಯ ಹಾಗೂ ಪಕ್ಷದ ರಾಜ್ಯ ಸಹ ಖಜಾಂಚಿ ಲೆಹರ್‌ಸಿಂಗ್‌ ಸಿರೋಯ್‌  ಮನೆ ಮೇಲೆ 2013ರ ನವೆಂ ಬರ್‌ಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ವೇಳೆ ಸಿಕ್ಕಿದೆ ಎನ್ನಲಾದ ಮತ್ತು ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ “ಡೈರಿ’ ಹಾಳೆಯನ್ನು ಕಾಂಗ್ರೆಸ್‌ ಬಿಡು ಗಡೆಗೊಳಿಸಿದೆ. ಇದರಲ್ಲಿ ಬಿಜೆಪಿ ವರಿಷ್ಠರಿಗೆ ಹಣ ನೀಡಿದವರ ಹಾಗೂ ಪಡೆದುಕೊಂಡವರ ಹೆಸರುಗಳನ್ನು ಸಂಕೇತಗಳಲ್ಲಿ ಬರೆಯಲಾಗಿದೆ. 

ವಿಧಾನಸೌಧದ ಕಾಂಗ್ರೆಸ್‌ ಶಾಸಕ ಪಕ್ಷದ ಕಚೇರಿಯಲ್ಲಿ ಶನಿವಾರ ನಡೆದ ಜಂಟಿ  ಪತ್ರಿಕಾಗೋಷ್ಠಿಯಲ್ಲಿ ಡೈರಿ ಬಿಡು
ಗಡೆ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಗೋವಿಂದ ರಾಜು ಡೈರಿ ವಿಚಾರವನ್ನು ಮುಂದಿಟ್ಟು ಕೊಂಡು ಕಾಂಗ್ರೆಸ್‌ ಮೇಲೆ ಸವಾರಿ ಮಾಡಲು ಹೊರಟಿದ್ದ ಬಿಜೆಪಿಯ ಬಣ್ಣ ಲೆಹರ್‌ಸಿಂಗ್‌ ಡೈರಿಯಿಂದ ಈಗ ಬಯಲಾಗಿದೆ ಎಂದು ಆರೋಪಿಸಿದರು. ಜತೆಗೆ, ಯಡಿಯೂರಪ್ಪ ಮೇಲಿನ ಭ್ರಷ್ಟಾಚಾರ ಪ್ರಕರಣಗಳನ್ನು ಸಮರ್ಥಿಸಿ ಕೊಳ್ಳುವ ಧಾಟಿಯಲ್ಲಿ ಲೆಹರ್‌ಸಿಂಗ್‌, 2013ರ ಮೇ 13ರಂದು ಎಲ್‌.ಕೆ. ಆಡ್ವಾಣಿ ಅವರಿಗೆ ಬರೆದ ಪತ್ರವನ್ನು ಸಹ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು.

ಲೆಹರ್‌ಸಿಂಗ್‌ ಅವರದು ಎನ್ನಲಾದ ಡೈರಿಯಲ್ಲಿ “ಸಿಎಂಒ+ಆರ್‌ಎ 67 ಕೋಟಿ, ಎಂ. ನಿರಾಣಿ 128 ಕೋಟಿ, ರೇಣು 13 ಕೋಟಿ, ಜೆಎಸ್‌ 9 ಕೋಟಿ, ಎಸ್‌ಕೆ 3 ಕೋಟಿ, ಎಸ್‌ಆರ್‌ 1.8 ಕೋಟಿ, ಆರ್‌ಎ+ಕೆಎಸ್‌ಈ 31 ಕೋಟಿ, ಡಿವಿಎಸ್‌+ಪಿಎಸ್‌ 11 ಕೋಟಿ, ಇತರ ಕಂಪೆನಿಗಳು ಮತ್ತು ಗುತ್ತಿಗೆದಾರರು 128 ಕೋಟಿ ರೂ. ಸಹಿತ 391.8 ಕೋಟಿ ರೂ. ಸ್ವೀಕರಿಸಲಾಗಿದೆ ಎಂದು ಬರೆಯಲಾಗಿದೆ. 

ಅದೇ ರೀತಿ, ಎಸ್‌ 34 ಕೋಟಿ, ಬಿಎಸ್‌ವೈ 69 ಕೋಟಿ, ನಮೋ 120 ಕೋಟಿ, ಎಸ್‌ಎಸ್‌7 ಕೋಟಿ, ಎಕೆ 18 ಕೋಟಿ, ಎಂ.ಡಿ. ರಾವ್‌ 4.8 ಕೋಟಿ, ಡಿಪಿ 9 ಕೋಟಿ, ಪಾರ್ಟಿ ಫ‌ಂಡ್‌ 90 ಕೋಟಿ, ಮೀಡಿಯಾ (ಪಿಟಿವಿ) 10 ಕೋಟಿ, ಎಚ್‌ವಿ (ದೆಹಲಿ ಎಲೆಕ್ಷನ್‌) 32 ಕೋಟಿ ರೂ. ಈ ರೀತಿ ಒಟ್ಟು 391.8 ಕೋಟಿ ರೂ.ಗಳನ್ನು 

Advertisement

ಕೇಂದ್ರದ ಬಿಜೆಪಿ ನಾಯಕರಿಗೆ ಪಾವತಿಸ ಲಾಗಿದೆ ಎಂದು ಡೈರಿಯ ಹಾಳೆಯಲ್ಲಿ ಕೈಬರಹದಿಂದ ನಮೂದಿಸಲಾಗಿದ್ದು, ಇದರಲ್ಲಿ ಲೆಹರ್‌ಸಿಂಗ್‌ ಅವರ ಹಸ್ತಾಕ್ಷರ ಇದೆ ಎಂದು ಅವರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ ದಿನೇಶ್‌ ಗುಂಡೂರಾವ್‌, ಕಾಂಗ್ರೆಸ್‌ ಸರಕಾರವನ್ನು ಅಸ್ಥಿರಗೊಳಿಸಬೇಕು. ಆ ಮೂಲಕ ಮುಖ್ಯಮಂತ್ರಿ ಹಾಗೂ ಇತರ ಕಾಂಗ್ರೆಸ್‌ ಮುಖಂಡರ ತೇಜೋವಧೆ ಮಾಡಿ, ಕರ್ನಾಟಕದಲ್ಲಿ “ಸಂವಿಧಾನೇತರ ರಾಜಕೀಯ ಬಿಕ್ಕಟ್ಟು’ ಸೃಷ್ಟಿಸಲು ಬಿಜೆಪಿ ವ್ಯವಸ್ಥಿತ ಷಡ್ಯಂತ್ರ ರಚಿಸಿದೆ. ಈ ಷಡ್ಯಂತ್ರಕ್ಕೆ ಕೇಂದ್ರ ಸರಕಾರ, ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮೂವರು ಸಚಿವರ ಬಗ್ಗೆ ದಾಖಲೆಗಳಿವೆ ಎಂದು ಯಡಿಯೂರಪ್ಪ ಡಿಸೆಂಬರ್‌ನಲ್ಲಿ ಹೇಳಿದ್ದರು. ಅದಾದ ಮೇಲೆ ಕಾಂಗ್ರೆಸ್‌ ಸಚಿವರು, ಶಾಸಕರ ಮನೆ ಮೇಲೆ ಐಟಿ ದಾಳಿ ನಡೆಯಿತು. ಅನಂತರ “ಯಡಿಯೂರಪ್ಪ – ಅನಂತಕುಮಾರ್‌’ ನಡುವಿನ ಸಂಭಾಷಣೆ, ಈಗ ಗೋವಿಂದರಾಜು ಡೈರಿ. ಈ ಎಲ್ಲ ಬೆಳವಣಿಗೆಗಳ ಹಿಂದೆ ಬಿಜೆಪಿ ಪಿತೂರಿ ಇರುವುದು ಸಷ್ಟವಾಗುತ್ತದೆ. 

ಬಿಜೆಪಿಯ ಈ ಹುರುಳಿಲ್ಲದ ಆರೋಪಗಳಿಗೆ ಉತ್ತರಿಸಲು ಮುಖ್ಯಮಂತ್ರಿ ಬಳಿ ಸಮಯ ವಿಲ್ಲ ಎಂದು ತಿಳಿಸಿದರು. 

ಗೋವಿಂದರಾಜು ಡೈರಿ ವಿಚಾರ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಲೆಹರ್‌ ಸಿಂಗ್‌ ಡೈರಿ ಹೊರ ಬಂದಿರುವುದರಿಂದ ಈಗ ಅವರೇ ರಾಜೀನಾಮೆ ಕೊಡಲಿ. ಮಾತೆತ್ತಿದರೆ ನೈತಿಕತೆ ಪ್ರಶ್ನೆ ಎತ್ತುವ ಯಡಿಯೂರಪ್ಪ, ಸಹಾರಾ-ಬಿರ್ಲಾ ಡೈರಿಯಲ್ಲಿ ಪ್ರಧಾನಿ ಮೋದಿ ಹೆಸರು ಬಂದಿರುವುದರಿಂದ ಅವರ (ಮೋದಿ) ರಾಜೀನಾಮೆಗೆ ಆಗ್ರಹಿಸಿ ನೈತಿಕತೆಗೆ ಮೇಲ್ಪಂಕ್ತಿ ಹಾಕಲಿ.
 ದಿನೇಶ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next