Advertisement

ಬೊಂಬೆನಾಡಿನಲ್ಲಿ ಕಾಂಗ್ರೆಸ್‌ ಪಕ್ಷ ಸದೃಢ: ಪಂಚಮಿ ಪ್ರಸನ್ನ ಪಿ.ಗೌಡ

06:24 PM May 28, 2022 | Team Udayavani |

ಚನ್ನಪಟ್ಟಣ: ತಾಲೂಕಿನ ಜನತೆ ಯಾವುದೇ ಸಂದರ್ಭದಲ್ಲಿ ಬಂದು ನನ್ನ ಭೇಟಿ ಮಾಡಿದರೂ, ನನ್ನ ಮನೆಯ ಬಾಗಿಲು ಸದಾ ನಿಮಗಾಗಿ ತೆರೆದಿರುತ್ತದೆ. ನಿಮ್ಮ ನೋವು, ನಲಿವುಗಳಿಗೆ ನಾನು ಸ್ಪಂದಿಸುತ್ತೇನೆ ಎಂದು ಕಾಂಗ್ರೆಸ್‌ ಮುಖಂಡ ಪಂಚಮಿ ಪ್ರಸನ್ನ ಪಿ.ಗೌಡ ತಿಳಿಸಿದರು.

Advertisement

ತಾಲೂಕಿನ ಹೊಂಗನೂರು ಜಿಪಂ ವ್ಯಾಪ್ತಿಯ ಸುಣ್ಣಘಟ್ಟ ಗ್ರಾಮದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಯೋಜಿಸಿದ್ದ ಕಾಂಗ್ರೆಸ್‌ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಹೊಂಗನೂರು, ನೀಲಕಂಠನಹಳ್ಳಿ ಗ್ರಾಮ ಸೇರಿ ಜಿಪಂ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಪಕ್ಷದಿಂದ ದೂರವಾಗಿದ್ದ ಮತ್ತು ಜೆಡಿಎಸ್‌. ಬಿಜೆಪಿ ಪಕ್ಷದ ಮುಖಂಡರನ್ನು ಕಾಂಗ್ರೆಸ್‌ ಪಕ್ಷಕ್ಕೆ ಆಹ್ವಾನ ನೀಡಿದ ಅವರು, ಬೊಂಬೆನಾಡಿನಲ್ಲಿ ಕಾಂಗ್ರೆಸ್‌ ಪಕ್ಷ ಸದೃಢವಾಗಿದೆ. ಯಾವುದೇ ಒತ್ತಡಕ್ಕೆ ಮಣಿಯದೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುಗಾಗಿ ಪಣ ತೊಡಬೇಕೆಂದು ಮನವಿ ಮಾಡಿದರು.

ಪಕ್ಷ ಸಂಘಟನೆ ಮಾಡಿ: ಮುಂದಿನ ವರ್ಷ ಬರುವ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ಕರ್ತರು ಪಕ್ಷ ಸಂಘಟನೆಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುಬೇಕು. ಹಿರಿಯ ಹಾಗೂ ಯುವ ಮುಖಂಡರು ಸೇರಿದಂತೆ ಸರ್ವ ಜನಾಂಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಗೆ ಸಜ್ಜಾಗಬೇಕಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿಜಾಮುದ್ಧಿನ್‌ ಪೌಜ್‌ದಾರ್‌ ಮಾತನಾಡಿ, ಕಳೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾದ ಕೃಷ್ಣಪ್ಪ, ಡಿ.ಟಿ.ರಾಮು, ಸಾದತ್‌ ಅಲಿಖಾನ್‌ ಸೇರಿದಂತೆ ಪಕ್ಷದ ಶಾಸಕರನ್ನು ನೆನಪು ಮಾಡಿಕೊಳ್ಳಬೇಕಾಗಿದೆ. ಮುಂದಿನ ಚುನಾವಣೆ ಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಸನ್ನ ಜಯ ಗಳಿಸುತ್ತಾರೆ ಎಂಬ ವಿಶ್ವಾಸದೆ ಎಂದು ತಿಳಿಸಿದರು.

ಚುನಾವಣೆ ಎದುರಿಸಲು ಸಿದ್ಧ: ಕುಕ್ಕೂಟ ಮಹಾ ಮಂಡಳಿಯ ರಾಜ್ಯಾಧ್ಯಕ್ಷ ಡಿ.ಕೆ. ಕಾಂತರಾಜು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಮತ್ತು ಪ್ರಚಾರ ಸುತಿ ಅಧ್ಯಕ್ಷರಾದ ಎಂ.ಬಿ.ಪಾಟೀಲ್‌ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸಲು ನಾವು ಸಿದ್ಧರಿದ್ದು, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಎಲ್ಲ ಮುನ್ಸೂಚನೆ ಇದೆ ಎಂಬ ಮಾತಿಗಳು ಲಭ್ಯವಿದೆ ಎಂದು ತಿಳಿಸಿದರು.

Advertisement

ರಾಜ್ಯದಲ್ಲೇ ಗಮನಾರ್ಹ: ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುನೀಲ್‌ಕುಮಾರ್‌ ಮಾತನಾಡಿ, ಕಾಂಗ್ರೆಸ್‌ ನಡೆ ಹಳ್ಳಿಯ ಕಡೆ ಎಂಬ ನೂತನ ಕಾರ್ಯಕ್ರಮ ನಮ್ಮ ತಾಲೂಕಿನಲ್ಲಿ ಯಶಸ್ವಿಯಾಗಲಿದ್ದು, ಇದು ಇಡೀ ರಾಜ್ಯದಲ್ಲೇ ಗಮನಾರ್ಹವಾಗಲಿದೆ ಎಂದ ಅವರು, ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಸಂಘಟಿಸುವ ಜವಾಬ್ದಾರಿಯನ್ನು ಉತ್ಸಾಹಿ ಯುವನಾಯಕ ಹಾಗೂ ಸಂಘಟನಾ ಕೌಶಲ್ಯರುವ ಪ್ರಸನ್ನ ಪಿ.ಗೌಡ ವಹಿಸಲಿದ್ದು, ಅವರಿಗೆ ಬೆಂಬಲವಾಗಿ ನಾವೆಲ್ಲರೂ ಸಹಕರಿಸೋಣ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಕೆಪಿಸಿಸಿ ಸದಸ್ಯ ಟಿ.ಕೆ.ಯೋಗೇಶ್‌(ಪಾಪು), ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌. ಆರ್‌. ಪ್ರಮೋದ್‌, ಮಾಜಿ ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಶಿವಮಾಧು, ಹಾಪ್‌ಕಾಮ್ಸ್‌ ನಿರ್ದೇಶಕ  ಬೋರ್‌ವೆಲ್‌ ರಂಗನಾಥ್‌, ಯುವ ಮುಖಂಡ ಚಂದ್ರಸಾಗರ್‌, ತಾಪಂ ಮಾಜಿ ಸದಸ್ಯ ಸುರೇಶ್‌, ಕಾಂಗ್ರೆಸ್‌ ಮುಖಂಡ ಅಕ್ಕೂರು ಹೊಸಹಳ್ಳಿ ಪುಟ್ಟರಾಜು, ಕಾಂಗ್ರೆಸ್‌ ಯುವ ಮುಖಂಡ ವಿವೇಕ್‌, ಎಸ್‌ಸಿ, ಎಸ್ಟಿ ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಸುಣ್ಣಘಟ್ಟ ಪಾಪಣ್ಣ, ಕಾಂಗ್ರಸ್‌ ಮಹಿಳಾ
ಮುಖಂಡರಾದ ಕಾವೇರಮ್ಮ, ಕೋಕಿಲರಾಣಿ, ರೇಣುಕಮ್ಮ, ಯುವ ಮುಖಂಡ ಪ್ರೇಮ್‌ ಚಂದ್ರಸಾಗರ್‌, ಮಾಸ್ತಿಗೌಡ, ಮಾಜಿ ನಗರ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌, ನಗರಸಭೆ ಸದಸ್ಯ ವಾಸಿಲ್‌ ಆಲಿಖಾನ್‌, ಬುಕ್ಕಸಾಗರ ಕುಮಾರ್‌, ಫ‌ರೀದ್‌, ಅಕ್ಕೂರು ಪುಟ್ಟರಾಜು, ವೈಟಿಹಳ್ಳಿ ಶಿವು, ಮಹಾಲಿಂಗ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next