Advertisement
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡರು, ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಜನರನ್ನು ಮತ್ತಷ್ಟು ಸಮಸ್ಯೆಗೆ ದೂಡಲಾಗುತ್ತಿದೆ. ತೈಲ ಬೆಲೆ ಏರಿಕೆಯಿಂದ ಇತರೆ ವಸ್ತುಗಳ ಬೆಲೆಯೂ ಸಾಕಷ್ಟು ಏರಿಕೆಯಾಗಿದೆ. ಇದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ರಾಜ್ಯ ಸರ್ಕಾರ ಶೇ.24 ಮತ್ತು 31ರಷ್ಟು ಮಾರಾಟ ತೆರಿಗೆ ವಿ ಧಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50 ರಿಂದ 60 ರೂ. ತೆರಿಗೆ ವಸೂಲಿ ಮಾಡುತ್ತಿವೆ. ಇಂಧನದ ಮೂಲ ಬೆಲೆ 35 ರೂ. ಮಾತ್ರ ಇದೆ. ಆದರೆ, ಸರ್ಕಾರಗಳು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವಿ ಧಿಸುತ್ತಿರುವ ಅಬಕಾರಿ, ಮಾರಾಟ ತೆರಿಗೆಗಳನ್ನು ಶೇ. 50ರಷ್ಟು ಕಡಿಮೆ ಮಾಡಬೇಕೆಂದು ಆಗ್ರಹಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿ, ದರ ಏರಿಕೆ ವಿರೋ ಸಿ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆ ಐದು ದಿನಗಳ ಕಾಲ ತಾಲೂಕು ಮಟ್ಟ, ಜಿಲ್ಲಾ ಪಂಚಾಯತಿ ಮಟ್ಟ, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ಆಯೋಜಿಸಲಾಗುವುದು ಎಂದರು. ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಮನೋಹರ್ ತಹಶೀಲ್ದಾರ್, ರುದ್ರಪ್ಪ ಲಮಾಣಿ, ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಪ್ರಮುಖರಾದ ಡಾ|ಸಂಜಯ ಡಾಂಗೆ, ಆರ್.ಎಂ.ಕುಬೇರಪ್ಪ, ಈರಪ್ಪ ಲಮಾಣಿ, ಎಂ.ಎಂ.ಮೈದೂರು, ಪ್ರಸನ್ನ ಹಿರೇಮಠ, ಜಯಶ್ರೀ ಶಿವಪುರ, ಶಾಂತಾ ಶಿರೂರ, ರಾಧಾ ಸವಣೂರು, ರೇಣುಕಾ ಪುತ್ರನ್ನ, ವಿಶಾಲಾಕ್ಷಿ ಆನವಟ್ಟಿ ಇತರರು ಭಾಗವಹಿಸಿದ್ದರು.