ನವದೆಹಲಿ: ಇನ್ನು ಮುಂದೆ ನವದೆಹಲಿಯಲ್ಲಿರುವ ಕಾಂಗ್ರೆಸ್‌ನ ಪ್ರಧಾನ ಕಚೇರಿ 24, ಅಕ್ಬರ್ ರಸ್ತೆಯಲ್ಲಿ ಇರುವುದಿಲ್ಲ. ಶೀಘ್ರದಲ್ಲಿಯೇ ರೈಸಾನಾ ರಸ್ತೆಯಲ್ಲಿ ಇರುವ ಕಟ್ಟಡಕ್ಕೆ ಕಾಂಗ್ರೆಸ್‌ನ ಪ್ರಧಾನ ಕಚೇರಿ, ಸೇವಾ ದಳ ಸ್ಥಳಾಂತರಗೊಳ್ಳಲಿದೆ. ಅದಕ್ಕೆ ಪೂರಕವಾಗಿರುವ ಚಟುವಟಿಕೆಗಳು ಈಗಾಗಲೇ ಶುರುವಾಗಿವೆ.
ಹಾಲಿ ಕಟ್ಟಡದಲ್ಲಿ ಈಗಾಗಲೇ ಭಾರತೀಯ ಯುವ ಕಾಂಗ್ರೆಸ್ ಮತ್ತು ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ)ದ ಕಚೇರಿಗಳನ್ನು ಹೊಂದಿದೆ. 24 ಅಕ್ಬರ್ ರಸ್ತೆಯಲ್ಲಿರುವ ಕಟ್ಟಡವನ್ನು ತೆರವುಗೊಳಿಸುವಂತೆ ಈಗಾಗಲೇ ಕೇಂದ್ರ ಸರ್ಕಾರ ಹಲವು ಬಾರಿ ನೋಟಿಸ್ ನೀಡಿತ್ತು. ಜತೆಗೆ 2013ರಿಂದ ಅದು ಬಾಡಿಗೆಯನ್ನೇ ನೀಡಿರಲಿಲ್ಲ.
ಇಷ್ಟು ಮಾತ್ರವಲ್ಲ ನವದೆಹಲಿಯಲ್ಲಿರುವ ಕೇಂದ್ರ ನವದೆಹಲಿಯಲ್ಲಿರುವ ಚಾಣಕ್ಯಪುರಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿರುವ ಪಕ್ಷದ ಮತ್ತೂಂದು ಕಚೇರಿಯನ್ನು ಶುಕ್ರವಾರ (ಏ.15)ದ ಒಳಗಾಗಿ ತೆರವುಗೊಳಿಸಲು ಮುಂದಾಗಿದೆ.
ಕೇಂದ್ರ ಸರ್ಕಾರದ ವತಿಯಿಂದವೇ ಕಾಂಗ್ರೆಸ್‌ಗೆ ಕಚೇರಿಗಳನ್ನು ಹೊಂದುವ ನಿಟ್ಟಿನಲ್ಲಿ ದೀನ್‌ದಯಾಳ್ ಮಾರ್ಗದಲ್ಲಿ ಜಮೀನನ್ನು 2010ರಲ್ಲಿಯೇ ನೀಡಲಾಗಿತ್ತು. ಸದ್ಯ ಆ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ಸ್ವಂತ ಕಟ್ಟಡದ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದೆ.
ಇನ್ನುಳಿದ ಸಣ್ಣಪುಟ್ಟ ಕೆಲಸಗಳು ಪೂರ್ತಿಗೊಂಡು ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್‌ನ ಪ್ರಧಾನ ಕಚೇರಿ ಕಾರ್ಯನಿರ್ವಹಿಸಲಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದ ವಸತಿ ವಿಭಾಗ ಹಾಲಿ ಕಟ್ಟಡಗಳನ್ನು ತೆರವುಗೊಳಿಸುವಂತೆ ಬಹು ಹಿಂದೆಯೇ ನೋಟಿಸ್ ನೀಡಿತ್ತು.