Advertisement
ಶುಕ್ರವಾರ ಸಂಜೆ, ಲಿಂಗಸುಗೂರಿನಲ್ಲಿ ನಡೆದ ರಂಭಾಪುರಿ ಧರ್ಮ ಪೀಠ ಪರಂಪರೆಯ ಐತಿಹಾಸಿಕ ಶರನ್ನವರಾತ್ರಿ ದಸರಾ ದರ್ಬಾರ್ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಕುಷ್ಟಗಿ ಮಾರ್ಗವಾಗಿ ತೆರಳುವ ಸಂಧರ್ಭದಲ್ಲಿ ಕುಷ್ಟಗಿ ಬಿಜೆಪಿ ಕಾರ್ಯಕರ್ತರು ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹೊಸ ಸರ್ಕಾರ ಬಂದಾಗಿನಿಂದಲೂ ಅವಾಂತರಗಳು ನಡೆಯುತ್ತಿವೆ. ರಾಜ್ಯದಲ್ಲಿ ಭೀಕರ ಬರಗಾಲ ಇದೆ. ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಮೆಕ್ಕೆಜೋಳ, ರಾಗಿ, ಜೋಳ ಬೆಳೆ ಇಲ್ಲದೇ ಪರಿತಪಿಸುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ರಾಜ್ಯ ಸರ್ಕಾರ ಅಗತ್ಯವೇನು ಅರಿಯದೇ ರೈತರಿಗೆ ಸದ್ಯದ ಅವಶ್ಯಕತೆಯ ಬಗ್ಗೆ ಚರ್ಚಿಸಿಲ್ಲ ಸರ್ಕಾರದ ಆದ್ಯತೆ ಮಂತ್ರಿಗಳು ಶಾಸಕರೇ ಹೊರತು ರೈತರು, ಬಡವರು, ಜನಸಾಮಾನ್ಯರಲ್ಲ. ಇದು ನಮ್ಮ ರಾಜ್ಯದ ದುರದೃಷ್ಟವಾಗಿದೆ ಎಂದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿದ್ದು ಕೇಂದ್ರ ಸಕರ್ಾರ ಬೇಕಿದ್ದರೆ ರಾಜ್ಯ ಸರಕಾರವು ಸರಿಯಾಗಿ ನಡೆದುಕೊಳ್ಳಬೇಕಿದೆ. ಕೇಂದ್ರ ಸರಕಾರವು ನೇರವಾಗಿ ದೇಶದಲ್ಲಿರುವ ಬಡವರಿಗೆ ರೈತರಿಗೆ ನೇರವಾಗಿ ಅವರ ಖಾತೆಗೆ ಜಮೆ ಮಾಡುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 6ಸಾವಿರ ರೂ. ಪ್ರತಿ ಫಲಾನುಭವಿಗೆ ನೀಡಲಾಗುತ್ತಿತ್ತು. ಸಿದ್ದರಾಮಯ್ಯ ಸರಕಾರ, ಯಡಿಯೂರಪ್ಪಸರಕಾರದ ಅವಧಿಯಲ್ಲಿ ನೀಡಲಾಗುವ 4ಸಾವಿರ ರೂ. ಅದನ್ನು ಬಂದ್ ಮಾಡಿದ್ದಾರೆ ಹೀಗಾಗಿ ಕೇಂದ್ರ ಸರಕಾರವನ್ನು ಧೂಷಿಸುವ ರಾಜ್ಯ ಸರಕಾರದ ನಡೆ ಸರಿ ಅಲ್ಲ. ಬದಲಿಗೆ ಈಗಿನ ರಾಜ್ಯ ಸರಕಾರ ಸದ್ಯ ಬರಗಾಲದ ಪರಿಸ್ಥಿತಿಯಲ್ಲಿ ರೈತರಿಗೆ ಏನು ಮಾಡಬೇಕೆಂದು ಯೋಜಿಸಲಿ ಎಂದರು.
Related Articles
Advertisement