ಬೆಂಗಳೂರು: ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಅವರ ನಿವಾಸಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ತೆರಳಿರುವುದು ತೀವ್ರ ಕುತೂಹಲ ಸೃಷ್ಟಿಸಿದೆ.
ಸಿದ್ದರಾಮಯ್ಯ ಸೂಚನೆ ಅನ್ವಯ ರಮೇಶ್ ಕುಮಾರ್ ಅವರು ಶ್ರೀನಿವಾಸ್ ಗೌಡ ನಿವಾಸಕ್ಕೆ ತೆರಳಿದ್ದಾರೆ. ತಮ್ಮ ಜತೆಯಲ್ಲೇ ಅವರನ್ನು ವಿಧಾನಸೌಧಕ್ಕೆ ಕರೆತಂದು ಮತ ಚಲಾಯಿಸುವುದಕ್ಕೆ ರಮೇಶ್ ಕುಮಾರ್ ಸಿದ್ಧತೆ ನಡೆಸಿದ್ದಾರೆ.
ಅಲ್ಲಿಗೆ ಜೆಡಿಎಸ್ ನ ಒಂದು ಮತ ಕಾಂಗ್ರೆಸ್ ಪರ ಚಲಾವಣೆಯಾಗಲಿದೆ. ಶ್ರೀನಿವಾಸ್ ಗೌಡ ಅವರು ಪಕ್ಷ ತ್ಯಜಿಸುವುದು ಬಹುತೇಕ ಖಚಿತವಾಗಿದ್ದು, ಮುಂದಿನ ಬಾರಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕೋಲಾರದಿಂದ ಸ್ಪರ್ಧಿಸುತ್ತಾರೆ. ಇಲ್ಲವಾದರೆ ಈ ಕ್ಷೇತ್ರವನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಡುತ್ತಾರೆ ಎಂಬ ಚರ್ಚೆ ಈ ಕಾಂಗ್ರೆಸ್ ನಲ್ಲಿ ಬಲವಾಗಿ ನಡೆಯುತ್ತಿದೆ.
ಎಚ್ ಡಿಕೆ ವ್ಯಂಗ್ಯ: ನಮ್ಮ ಪಕ್ಷದ ಶಾಸಕ ಶ್ರೀನಿವಾಸಗೌಡರು ಅಧಿಕೃತವಾಗಿ ಕಾಂಗ್ರೆಸ್ ಗೆ ಮತ ಹಾಕುತ್ತೇನೆ ಎಂದಿದ್ದಾರೆ. ಅವರು ಅಡ್ಡಮತದಾನ ಮಾಡುವಂತೆ ಮಾಡಿದ ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ಅವರಿಗೆ ಅಭಿನಂದನೆಗಳು ಎಂದು ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ಜೆಡಿಎಸ್ ಗೆ ಅಡ್ಡ ಮತದಾನದ ಗುನ್ನ: ಬಿಜೆಪಿ ಗೆಲ್ಲಿಸುವುದಕ್ಕೆ ಅಭಿನಂದನೆಗಳು ಎಂದ ಎಚ್ ಡಿಕೆ
ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಒಳ ಒಪ್ಪಂದವಾಗಿದೆ. ಸಿದ್ದರಾಮಯ್ಯನಿಗೆ ಅಲ್ಪಸಂಖ್ಯಾತ ಶಬ್ದದ ಅರ್ಥ ಗೊತ್ತಿದೆಯೇ ? ಸಿದ್ದರಾಮಯ್ಯನವರು ಬಿಜೆಪಿಯ ಬಿ ಟೀಂ ಎಂಬುದು ಈಗ ಜಗಜ್ಜಾಹಿರಾಗಿದೆ ಎಂದು ಆರೋಪಿಸಿದ್ದಾರೆ.