ಇಂಫಾಲ್: ಕಾಂಗ್ರೆಸ್ ನ ಸಾರ್ವಜನಿಕ ಸಭೆ ನಡೆಯುತ್ತಿದ್ದ ವೇಳೆ ಶಸ್ತ್ರಸಜ್ಜಿತ ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆಸಿರುವ ಘಟನೆ ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಂಪಿಸಿಸಿ ಅಧ್ಯಕ್ಷ ಕೆ.ಮೇಘಚಂದ್ರ, ಚಿಂಗೈ ವಿಧಾನಸಭಾ ಕ್ಷೇತ್ರದ ಟೀನೆಮ್ ಗ್ರಾಮದಲ್ಲಿ ಮಂಗಳವಾರ ಸಭೆ ನಡೆಯುತ್ತಿದ್ದ ವೇಳೆ ಉಖ್ರುಲ್ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಆಲ್ಫ್ರೆಡ್ ಕಂಗಮ್ ಆರ್ಥರ್ ಮೇಲೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಹಲ್ಲೆ ನಡೆಸಿ ಗುಂಡಿನ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.
ಮಾಜಿ ಶಾಸಕ ಆಲ್ಫ್ರೆಡ್ ಉಖ್ರುಲ್‌ನ ಪಯೋರಿ ಶಿರುಯಿ ಗ್ರಾಮದ ಟಿಕ್ ವುಡ್‌ಲ್ಯಾಂಡ್ ರೆಸಾರ್ಟ್‌ನಲ್ಲಿ ಸಭೆ ನಡೆಸಿದ ವೇಳೆ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಉಖ್ರುಲ್ ಜಿಲ್ಲೆಯ ಹೊರ ಕ್ಷೇತ್ರದ ಅಭ್ಯರ್ಥಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಮಣಿಪುರದ ಮುಖ್ಯ ಚುನಾವಣಾ ಅಧಿಕಾರಿ ಮತ್ತು ರಾಜ್ಯ ಸರ್ಕಾರವನ್ನು ಎಂಪಿಸಿಸಿ ಒತ್ತಾಯಿಸಿದೆ.
ಚುನಾವಣೆ ಹಿನ್ನೆಲೆಯಲ್ಲಿ ಆಲ್ಫ್ರೆಡ್ ಕಂಗಮ್ ಆರ್ಥರ್ ಅವರು ಕಳೆದ ಮೂರು ದಿನಗಳಿಂದ ಚುನಾವಣಾ ಪ್ರಚಾರದ ಭಾಗವಾಗಿ ಜನರನ್ನು ಭೇಟಿಯಾಗುತ್ತಿದ್ದಾರೆ ಇದರ ನಡುವೆ ಹಲ್ಲೆ ನಡೆದಿರುವುದು ಆತಂಕದ ಸಂಗತಿ ಎಂದು ಪಕ್ಷದ ಕಾರ್ಯಕರ್ತ ಮೇಘಚಂದ್ರ ಹೇಳಿದ್ದಾರೆ.
ಇದನ್ನೂ ಓದಿ: Tragedy: ಕೊಡಲಿಯಿಂದ ಕೊಚ್ಚಿ 2 ಮಕ್ಕಳ ಹತ್ಯೆ ಮಾಡಿದ ಕ್ಷೌರಿಕ ಎನ್ಕೌಂಟರ್ನಲ್ಲಿ ಮೃತ್ಯು