Advertisement

ಕೈ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಗೆಲ್ಲುವ ವಿಶ್ವಾಸ

10:32 AM Dec 04, 2020 | Suhan S |

ರಾಮನಗರ: ಗ್ರಾಪಂ ಚುನಾವಣೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಪಕ್ಷದ ಬೆಂಬಲಿತ ಅಭ್ಯರ್ಥಿ ಗಳು ಆಯ್ಕೆಯಾಗುವ ವಿಶ್ವಾಸವನ್ನು ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ಹೇಳಿದರು. ತಾಲೂಕಿನ ವಿಭೂತಿಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡಿದ್ದ ವೇಳೆ ಅವರು ವಿಭೂತಿಕೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ತಾವು ಕ್ಷೇತ್ರ ಪ್ರವಾಸ ಕೈಗೊಂಡಿದ್ದು, ಕಾಂಗ್ರೆಸ್‌ ಪಕ್ಷದ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ ಎಂದರು.

Advertisement

ಆಯಾ ಪಂಚಾಯ್ತಿ ವ್ಯಾಪ್ತಿಯ ಕಾರ್ಯಕರ್ತರೇ ಪಕ್ಷದ ಬೆಂಬಲಿತ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಜನರ ಬಗ್ಗೆ ಕಾಳಜಿ ಇರುವಂತಹ, ಗ್ರಾಮ ಅಭಿವೃದ್ಧಿಗೆ ತುಡಿತ ಇರುವ ಮತ್ತು ಸಂಪನ್ಮೂಲವನ್ನು ಸ್ವಯಂ ಕ್ರೋಢೀಕರಿಸಿ ಕೊಳ್ಳುವ ಅಭ್ಯರ್ಥಿಗಳನ್ನು ನಿಲ್ಲಿಸುವಂತೆ ತಿಳಿವಳಿಕೆ ನೀಡಲಾಗಿದೆ. ಅಭ್ಯರ್ಥಿ ಆಯ್ಕೆ ವಿಚಾರ ಆಯಾ ಊರಿನ ಕಾರ್ಯಕರ್ತರ ತೀರ್ಮಾನವೇ ಅಂತಿಮ, ಈ ವಿಚಾರದಲ್ಲಿ ಪಕ್ಷದ ಮುಖಂಡರು ಯಾವ ನಿರ್ಧಾರವನ್ನು ಪ್ರಕಟಿಸುವುದಿಲ್ಲ ಎಂದು ಸ್ಪಷ್ಪಪಡಿಸಿದರು.

ಇಷ್ಟೂ ವರ್ಷಗಳು ಗ್ರಾಪಂ ಚುನಾವಣೆಗೆ ಜೆಡಿ ಎಸ್‌ ಸ್ಪರ್ಧೆಯನ್ನು ಮಾತ್ರ ಎದುರಿಸಬೇಕಿತ್ತು. ಆದರೆ ಈಗ ಬಿಜೆಪಿ ಪಕ್ಷದ ಮುಖಂಡರು ಸಹ ಪಂಚಾಯ್ತಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆಎಂದು ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು ಚುನಾವಣಾ ರಾಜಕೀಯ ಕಾಂಗ್ರೆಸ್‌ ಕಾರ್ಯಕರ್ತರಿಗೆ ಹೊಸದೇನಲ್ಲ. ಅದನ್ನು ಮೆಟ್ಟಿ ನಿಲ್ಲುತ್ತಾರೆ. ಕಾಂಗ್ರೆಸ್‌ ಪಕ್ಷದ ಆಡಳಿತವನ್ನು ಬಿಜೆಪಿ ಸರ್ಕಾರದ ಆಡಳಿತದ ಜತೆ ಜನರ ಹೋಲಿಕೆ ಮಾಡುತ್ತಿದ್ದಾರೆ. ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ ಪ್ರಮಾಣ ಕಡಿತ, ಪೆಟ್ರೋಲ್‌- ಡೀಸಲ್‌ ಬೆಲೆ ಏರಿಕೆ, ಭಾಗ್ಯ ಜ್ಯೋತಿ ಯೋಜನೆಯಲ್ಲಿ ಉಚಿತ ವಿದ್ಯುತ್‌ ನಿಲುಗಡೆ ಹೀಗೆಹಲವಾರು ವಿಚಾರಗಳ ಬಗ್ಗೆ ಜನತೆಗೆ ಸತ್ಯದ ಅರಿವಾಗಿದೆ ಎಂದು ಅವರು ತಮ್ಮ ಪಕ್ಷದ ಬಗ್ಗೆ ಜನರ ಒಲವಿದೆ ಎಂದು ಸೂಚ್ಯಕವಾಗಿ ಹೇಳಿದರು.

ಕಾರ್ಯಕರ್ತರ ಜತೆ ಚರ್ಚೆ:ಇದೇ ವೇಳೆ ಅವರು ವಿಭೂತಿಕೆರೆ ಗ್ರಾಪಂ ಮಾಜಿ ಅಧ್ಯಕ್ಷ ರುಗಳಾದ ಶಿವಲಿಂಗ ಪ್ರಸಾದ್‌, ರಂಗಸ್ವಾಮಿ, ತಾಪಂ ಅಧ್ಯಕ್ಷ ಭದ್ರಯ್ಯ, ಕಾಂಗ್ರೆಸ್‌ ಪ್ರಮುಖರಾದ ವಿ.ಎಚ್‌.ರಾಜು, ಎ.ಬಿ.ಚೇತನ್‌ ಕುಮಾರ್‌, ಲೋಹಿತ್‌ಬಾಬು, ಜಯರಾಮಯ್ಯ, ನರಸಿಂಹಮೂರ್ತಿ, ಶಿವ ಲಿಂಗೇಗೌಡ, ಆರ್‌.ಶಿವಾನಂದ, ಚಂದ್ರಶೇಖರ್‌, ಮುತ್ತುರಾಜ್‌, ಅನಿಲ್‌ ಹಾಜರಿದ್ದರು.

ಇಕ್ಬಾಲ್‌ ಹುಸೇನ್‌, ಅನಿತಾಕುಮಾರಸ್ವಾಮಿ ಪ್ರವಾಸ :  ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡ ಇಕ್ಬಾಲ್‌ ಹುಸೇನ್‌ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ರಾಮನಗರ ತಾಲೂಕುಮತ್ತು ವಿಧಾನಸಭಾಕ್ಷೇತ್ರ ವ್ಯಾಪ್ತಿಮಿಂಚಿನ ಸಂಚಾರ ಕೈಗೊಳ್ಳುತ್ತಿದ್ದಾರೆ. ಅಭ್ಯರ್ಥಿ ಆಯ್ಕೆ ಬಗ್ಗೆ ಒಮ್ಮತದನಿರ್ಧಾರ ತೆಗೆದುಕೊಳ್ಳುವಂತೆ ಅವರು ತಮ್ಮಕಾರ್ಯಕರ್ತರಿಗೆ ಸಲಹೆ ನೀಡುತ್ತಿದ್ದಾರೆ. ವಿಧಾನಸಭೆ ಮತ್ತು ಲೋಕಸಭೆಗೆ ಬೇರು ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಅವಕಾಶ ಇರುವ ಗ್ರಾಪಂಚುನಾವಣೆಯನ್ನು ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸಿದೆ. ಬಹುತೇಕ ಪಂಚಾಯ್ತಿಗಳಲ್ಲಿಮೀಸಲಾತಿ ಅಭ್ಯರ್ಥಿಗಳ ಬಗ್ಗೆ ಗೊಂದಲ ನಿವಾರಣೆ ಯಾಗಿದೆ. ಆದರೆ ಸಾಮಾನ್ಯ ಮೀಸಲಾತಿ ವಿಚಾರದಲ್ಲಿ ಗೋಂದಲಗಳಿವೆ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಹೇಳಿದ್ದಾರೆ. ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದೆ.

Advertisement

ಕಾಂಗ್ರೆಸ್‌ ಮುಕ್ತ ಜಿಲ್ಲೆ ಸಾಧ್ಯವಿಲ್ಲ – ಇಕ್ಬಾಲ್‌ :  ಜಿಲ್ಲೆಯಲ್ಲಿ ಕಾಂಗ್ರೆಸ್‌ ಬೇರು ಮಟ್ಟದಲ್ಲಿ ಬಲವಾಗಿದೆ. ಕಾಂಗ್ರೆಸ್‌ ಮುಕ್ತ ಜಿಲ್ಲೆ ಸಾಧ್ಯವಿಲ್ಲ ಎಂದು ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ಹೇಳಿ ದರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಕ್ತ ಜಿಲ್ಲೆ ಮಾಡುವುದು ಬಿಜೆಪಿಯ ಉದ್ದೇಶ ಎಂದು ಇತ್ತೀಚೆಗಷ್ಟೆ ಡಿಸಿಎಂ ಡಾ.ಸಿ.ಎನ್‌.ಅಶ್ವಥನಾರಾಯಣ ಅವರ ಹೇಳಿಕೆಗೆ ಅವರು ಹೀಗೆ ಪ್ರತಿಕ್ರಿ ಯಿಸಿದರು. ಕಾಂಗ್ರೆಸ್‌ ಸಾಧನೆಯನ್ನು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ಜೊತೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next