ವಿದರ್ಭ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ರಂಗೇರುತ್ತಿದೆ. ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡಿದ್ದು, “ತಾವು ಅಧಿಕಾರದಲ್ಲಿದ್ದ ಸಮಯದಲ್ಲಿ ಕಾಂಗ್ರೆಸ್ ಸಂವಿಧಾನವನ್ನು ತಿದ್ದುಪಡಿ ಮಾಡಿದ್ದು, ಇದೀಗ ಬಿಜೆಪಿ ವಿರುದ್ದ ಆರೋಪ ಮಾಡುತ್ತಿದೆ” ಎಂದಿದ್ದಾರೆ.
ವಿದರ್ಭದ ವಾರ್ಧಾದಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಗಡ್ಕರಿ ಕಾಂಗ್ರೆಸ್ ವಿರುದ್ದ ಹರಿಹಾಯ್ದರು. ನವೆಂಬರ್ 20ರಂದು ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
“ಬಿಜೆಪಿಗೆ ಲೋಕಸಭೆಯಲ್ಲಿ 400 ಸ್ಥಾನಗಳು ಬಂದರೆ ಸಂವಿಧಾನವನ್ನು ಬದಲಾಯಿಸಲಾಗುತ್ತದೆ ಎಂದು ಅವರು ಭಾವನಾತ್ಮಕ ಹೇಳುತ್ತಿದ್ದರು. ಅವರು ಸುಳ್ಳು ಹೇಳುತ್ತಾರೆ,” ಎಂದು ಗಡ್ಕರಿ ಶನಿವಾರ ಡಿಯೋಲಿಯಲ್ಲಿ ಪ್ರಚಾರದ ಸಂದರ್ಭದಲ್ಲಿ ಹೇಳಿದರು.
ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ಪಕ್ಷವು ಸಂವಿಧಾನದಲ್ಲಿ ತಿದ್ದುಪಡಿ ಮಾಡಿತ್ತು ಎಂದು ಹೇಳಿದರು.
“ಅವರು ಸಂವಿಧಾನವನ್ನು ಬದಲಾಯಿಸಿದಔರು, ಆದರೆ ನಮ್ಮನ್ನು ದೂಷಿಸುತ್ತಾರೆ. ಜನತಾ ಪಕ್ಷವು ಅದನ್ನು ಸರಿಪಡಿಸಿತು. ಇಂದಿರಾ ಗಾಂಧಿಯವರ ಅಧಿಕಾರಾವಧಿಯಲ್ಲಿ ಎಷ್ಟು ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಲಾಯಿತು? ಆದರೆ ಕಾಂಗ್ರೆಸ್ ಇದಕ್ಕೆ ಪ್ರತಿಕ್ರಿಯಿಸಲು ಬಯಸುವುದಿಲ್ಲ” ಎಂದು ಗಡ್ಕರಿ ಹೇಳಿದ್ದಾರೆ.