Advertisement

ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಕಾಂಗ್ರೆಸ್‌ ಪಾದಯಾತ್ರೆ

06:17 PM Dec 27, 2021 | Team Udayavani |

ಹೊಳೆಆಲೂರ: ಹೋಬಳಿಯ 14 ನವ ಗ್ರಾಮಗಳಲ್ಲಿ 10 ವರ್ಷಗಳ ಹಿಂದೆ ನಿರ್ಮಾಣವಾದ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡದಿರುವುದು, ಹೊಳೆಆಲೂರ ಬದಾಮಿ ಸಂಪರ್ಕಿಸುವ ಮಲಪ್ರಭಾ ಬ್ಯಾರೇಜ್‌ ಹಾಗೂ ಸೇತುವೆ ಕಾಮಗಾರಿ ವಿಳಂಬ, ಹೊಳೆಆಲೂರ ಹೋಬಳಿಯದ್ಯಂತ ಹದಗೆಟ್ಟಿರುವ ಗ್ರಾಮೀಣ ರಸ್ತೆಗಳನ್ನು ಸುಧಾರಣೆ ಮಾಡದಿರುವುದನ್ನು ಖಂಡಿಸಿ ಜನೇವರಿ 3 ರಿಂದ ಗಾಡಗೋಳಿ ನವ ಗ್ರಾಮದಿಂದ ಗದಗ ಜಿಲ್ಲಾ ಧಿಕಾರಿಗಳ ಕಚೇರಿ
ವರಿಗೆ ಬೃಹತ್‌ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಎಪ್‌.ಎಸ್‌.ಚಿಕ್ಕಮಣ್ಣೂರ ಹೇಳಿದರು.

Advertisement

ಪ್ರವಾಸಿ ಮಂದಿರದಲ್ಲಿ ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸುರಿದ ಮಳಯಿಂದ ಹಾನಿಯಾದ ರೈತರಿಗೆ ಸೂಕ್ತ ಬೆಳೆ ಹಾನಿ ಒದಗಿಸದಿರುವುದನ್ನು ಖಂಡಿಸಿ ಗಾಡಗೋಳಿ ನವ ಗ್ರಾಮದಿಂದ ಗದಗ ಜಿಲ್ಲಾಧಿಕಾರಿಗಳ ಕಚೇರಿವರಿಗೆ ಬೃಹತ್‌ ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದರು.

ಗಾಡಗೋಳಿ, ಹೊಳೆಹಡಗಲಿ, ಹೊಳೆಮಣ್ಣೂರ ಸೇರಿದಂತೆ ಈ ಭಾಗದ 14 ನವ ಗ್ರಾಮಗಳಲ್ಲಿ ಸ್ಥಳೀಯ ರಾಜಕೀಯ ಒತ್ತಡಕ್ಕೆ ಒಳಗಾಗಿ ಅರ್ಹ ಬಡ ಪಲಾನುಭವಿಗಳಿಗೆ ಮನೆ ಹಂಚಿಕೆ ಮಾಡದಿರುವುದರಿಂದ ಅವರು ಬೀದಿ ಪಾಲಾಗಿದ್ದಾರೆ ಎಂದು ಹೇಳಿದರು.

ಹೊಳೆಆಲೂರ ಬ್ಲಾಕ್‌ ಯುಥ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಪಾಟೀಲ ಮಾತನಾಡಿ, ಕಳೆದ ಏಳು ತಿಂಗಳ ಹಿಂದೆ ರೋಣ ತಹಶೀಲ್ದಾರ್‌ ಕಾರ್ಯಾಲಯದ ಮುಂದೆ ಮಾಜಿ ಸಚಿವ ಬಿ.ಆರ್‌.ಯಾವಗಲ್ಲ ನೇತೃತ್ವದಲ್ಲಿ ಬಡ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡುವಂತೆ ಆಗ್ರಹಿಸಿ ಸತ್ಯಾಗ್ರಹ ನಡೆಸಿದ ವೇಳೆ, ನಿಮ್ಮ ಹೋರಾಟ ರಾಜಕೀಯ ಪ್ರೇರಿತ ಎಂದು ಟೀಕಿಸಿ, ಅಧಿವೇಶನ ಮುಗಿಸಿ ಒಂದು ವಾರದಲ್ಲಿ ಸ್ವತಃ ನಾನೇ ಗಾಡಗೋಳಿ ಗ್ರಾಮಕ್ಕೆ ಬಂದು ಮನೆ ಹಂಚುತ್ತೇನೆ ಎಂದವರು, 7 ತಿಂಗಳು ಗತಿಸಿದರೂ ಯಾಕೆ ಹಂಚಿಕೆ ಮಾಡಿಲ್ಲ ರಂದು ಪ್ರಶ್ನಿಸಿದರು.

ಈ ಭಾಗದ ಸಾರ್ವಜನಿಕರಿಗೆ ಕುಡಿಯುವ ನೀರು ಹಾಗೂ ರೈತರಿಗೆ ಅನುಕೂಲವಾಗಲೆಂದು ಹಿಂದಿನ ಶಾಸಕರು 3.5 ಕೋಟಿ ವೆಚ್ಚದಲ್ಲಿ ಹೊಳೆಆಲೂರ ಹತ್ತಿರ ಬ್ಯಾರೇಜ್‌ ನಿರ್ಮಾಣಕ್ಕೆ ಹಣ ಮಂಜೂರ ಆಗಿ ಗುತ್ತಿಗೆದಾರರು ಕೆಲಸ ಆರಂಭಿಸಿದ್ದರು. ಮರಳು ಮಾμಯಾಕ್ಕೆ ಆ ಕಾಮಗಾರಿ ನೆನಗುದಿಗೆ ಬಿದ್ದಿದ್ದು 5 ವರ್ಷವಾದರೂ ಸಚಿವರು ಗಮನಿಸುತ್ತಿಲ್ಲ. ಹೊಳೆಆಲೂರ ಹೋಬಳಿಯ ಬಹುತೇಕ ಗ್ರಾಮೀಣ ರಸ್ತೆಗಲ್ಲಿ ತಗ್ಗು ಗುಂಡಿ ಬಿದ್ದು ವಾಹನ ಸವಾರರು ಪರಿತಪ್ಪಿಸುತ್ತಿದ್ದರೂ ಸ್ವತಹಃ ಲೋಕೋಪಯೋಗಿ ಸಚಿವರು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ.

Advertisement

ಮಾಜಿ ಶಾಸಕ ಬಿ.ಆರ್‌.ಯಾವಗಲ್ಲ ಅವರ ಅವಧಿಯಲ್ಲಿ ಮಂಜೂರಾದ ಇಂದಿರಾಗಾಂಧಿ ವಸತಿ ಶಾಲೆ ಕಾಮಗಾರಿ ಐದು ವರ್ಷವಾದರೂ ಕುಂಟುತ್ತಾ ಸಾಗಿದೆ. ನೆರೆ ಹಾವಳಿ ಕಾಲಕ್ಕೆ ಆ ಮಕ್ಕಳನ್ನು ರೋಣಕ್ಕೆ ಸ್ಥಳಾಂತರಿಸಲಾಗಿದ್ದು, ಆ ಶಾಲೆ ಮಕ್ಕಳು ಮೂಲಭೂತ ಸೌಲಭ್ಯ ವಂಚಿತ ಕಟ್ಟಡದಲ್ಲಿ ಸಂಕಷ್ಟದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೂ ಸಚಿವರು ಏಕೆ ಗಮನಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಹೊಳೆಆಲೂರ ಬ್ಲಾಕ್‌ ಕಾಂಗ್ರೆಸ್‌ ಖಜಾಂಚಿ ಬಸನಗೌಡ ಶಿರಗುಂಪಿ, ಜಿಲ್ಲಾ ಕಾಂಗ್ರೆಸ್‌ ಎಸ್‌ಸಿ ಘಟಕದ ಉಪಾಧ್ಯಕ್ಷ ಪ್ರಕಾಶ ಬಜೇಂತ್ರಿ, ಗ್ರಾಪಂ ಸದಸ್ಯ ಪ್ರವೀಣ ಶಲ್ಲಿಕೇರಿ, ಶರಣಪ್ಪ ಜಂಗಣ್ಣವರ, ಎಸ್‌.ವೈ. ಗಾಣಿಗೇರ, ಪ್ರವೀಣ ಜಡಮಳಿ, ಕಾಶಪ್ಪ ಬಳಗಾನೂರ, ಮೌನೇಶ ಭರಮಗೌಡ್ರ, ಬಸವರಾಜ ಗಾಡಗೋಳಿ, ಪ್ರವೀಣ ತಳವಾರ, ಮುತ್ತಪ್ಪ ಹಾಲನ್ನವರ, ಕರಿಯಪ್ಪ ಮಾದರ, ಬ್ಲಾಕ್‌ ಕಾಂಗ್ರೆಸ್‌ ಪಪಂ ಘಟಕ ಅಧ್ಯಕ್ಷ ವೀರಣ್ಣ ತಳವಾರ, ಗ್ರಾಪಂ ಮಾಜಿ ಉಪಾಧ್ಯಕ್ಷ ಸುರೇಶ ಹುಡೇದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next