Advertisement
ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕೋವಿಡ್ ಹಾಗೂ ಟ್ವೀಟರ್ ಬ್ಲೂ ಟಿಕ್ ಬಗ್ಗೆ ಟೀಕೆ ಮಾಡಿದ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಟ್ವಿಟರ್ ನಲ್ಲಿ ಬ್ಲೂ ಟಿಕ್ಗಾಗಿ ಜಗಳಾಡುವುದರಲ್ಲಿ ನಿರತವಾಗಿದೆ. ಕೊವಿಡ್ ಲಸಿಕೆ ಬೇಕಾದರೆ ಅವರು ಆತ್ಮನಿರ್ಭರರಾಗಿ ಇರಬೇಕಷ್ಟೆ. ಸ್ವಾವಲಂಬಿಯಾಗಿರಬೇಕು ಅಷ್ಟೇ ಎಂದಿ ಕೇಂದ್ರದ ವಿರುದ್ಧ ತೀವ್ರವಾಗಿ ಟೀಕೆ ಮಾಡಿದ್ದಾರೆ.
ಇದನ್ನೂ ಓದಿ : ಗುಳೇದಗುಡ್ಡ: ರಜೆಯ ಮಜಾದಲ್ಲಿ ಕೋವಿಡ್ ಮರೆತ ಜನ, ಅಂತರವೂ ಇಲ್ಲ, ಕಾಳಜಿಯೂ ಇಲ್ಲ ಟ್ವಿಟರ್ ನಲ್ಲಿ ಬ್ಲೂ ಟಿಕ್ ಆ ಖಾತೆಗಳು ಅಧಿಕೃತವೆಂದುಸೂಚಿಸುವ ಮಾನದಂಡವಾಗಿದೆ. ಕಳೆದೊಂದೆರಡು ದಿನಗಳಿಂಚೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಇನ್ನಿತರ ಕೆಲ ನಾಯಕರ ಟ್ವಿಟರ್ ಖಾತೆಯ ಬ್ಲೂ ಟಿಕ್ ನನ್ನು ಟ್ವಿಟರ್ ಸಂಸ್ಥೆ ತೆಗೆದಿತ್ತು.
Related Articles
Advertisement
ಇನ್ನು, ಈ ಕುರಿತಾಗಿ ಟ್ವಿಟರ್ಗೆ ತಿಳಿಸಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ರಾಜೀವ್ ತುಳಿ ಎಂಬುವರು ಟ್ವೀಟ್ ಮಾಡಿದ್ದರು.
ಟ್ವಿಟರ್ ನಲ್ಲಿ ಯಾವುದೇ ಗಣ್ಯರು ಈ ಬ್ಲೂಟಿಕ್ ಪಡೆಯಬೇಕು ಎಂದರೆ ಅವರು ಅದರಲ್ಲಿ ಸಕ್ರಿಯರಾಗಿರಬೇಕು. ಅವರದ್ದೇ ಅಧಿಕೃತ ಖಾತೆ ಎಂದು ದೃಢೀಕರಿಸಬೇಕು. ಆದರೆ ಇತ್ತೀಚೆಗೆ ಟ್ವಿಟರ್ ಪರಿಶೀಲನೆ ನಡೆಸಿದಾಗ ಕೆಲವು ಖಾತೆಗಳು ತುಂಬದಿನಗಳಿಂದ ಬಳಕೆಯಾಗಿಲ್ಲ ಎಂಬುದು ಗೊತ್ತಾಗಿದೆ. ಹಾಗಾಗಿ ಅಂತಹ ಟ್ವಿಟರ್ ಖಾತೆಗಳ ದೃಢೀಕರಣ ಅಥವಾ ಅಧಿಕೃತ ಮಾನದಂಡವಾದ ಬ್ಲೂ ಟಿಕ್ ನನ್ನು ತೆಗೆದುಹಾಕಿದೆ.
ಆರ್ಎಸ್ಎಸ್ ನ ನಾಯಕ ಮೋಹನ್ ಭಾಗವತ್, ಸುರೇಶ್ ಜೋಶಿ, ಅರುಣ್ ಕುಮಾರ್, ಕೃಷ್ಣನ್ ಗೋಪಾಲ್ ಮತ್ತಿತರರ ವೈಯಕ್ತಿಕ ಟ್ವಿಟರ್ ಖಾತೆಗೆ ಇದ್ದ ಬ್ಲೂಟಿಕ್ ಗಳು ನಿನ್ನೆ (ಜೂನ್ 5) ಬೆಳಗ್ಗೆ ಇಲ್ಲವಾಗಿತ್ತು.
ಇನ್ನು, ಟ್ವಿಟರ್ ಸಂಸ್ಥೆ ಯಾವುದೇ ಖಾತೆಗೆ ಬ್ಲೂಟಿಕ್ ದೃಢಿಕರಣವನ್ನು ನೀಡುವಾಗ ಒಂದು ಹೆಸರಿದ್ದು, ಬಳಿಕ ಆ ಬಳಕೆದಾರರು ಹೆಸರನ್ನು ಬದಲಿಸಿಕೊಂಡರೆ ತಕ್ಷಣವೇ ಅವರಿಗೆ ನೀಡಲಾಗಿದ್ದ ದೃಢೀಕರಣ ಬ್ಲೂ ಟಕ್ ನನ್ನು ಹಿಂಪಡೆಯಲಾಗುತ್ತದೆ ಎಂದು ಟ್ವಿಟರ್ ತನ್ನ ವೆರಿಫಿಕೇಶನ್ ನಿಯಮದಲ್ಲಿ ಉಲ್ಲೇಖಿಸಿದೆ.
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯ ಬ್ಲೂಟಿಕ್ ತೆಗೆದುಹಾಕಿದ್ದ ಟ್ವಿಟರ್, ಆಕ್ಷೇಪಣೆಗಳು ವ್ಯಕ್ತವಾದ ಬೆನ್ನಲ್ಲೇ ಅದನ್ನು ಮತ್ತೆ ನೀಡಿತ್ತು.
ಇದನ್ನೂ ಓದಿ : ರಾಜ್ಯಕ್ಕೆ ತಕ್ಷಣ 50 ಸಾವಿರ ಆಂಪೋಟೆರಿಸಿನ್ ಬಿ ಪೂರೈಸಲು ಈಶ್ವರ ಖಂಡ್ರೆ ಆಗ್ರಹ