ಅಹಮದಾಬಾದ್:ಪತ್ನಿಯನ್ನು ಹತ್ಯೆಗೈದ ಆರೋಪದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ರನ್ನು ಬಂಧಿಸಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿರುವುದಾಗಿ ಕ್ರೈಮ್ ಬ್ರ್ಯಾಂಚ್ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:‘ದೊಡ್ಮನೆ’ ಜೊತೆ ಜಯಂತಿ ಒಡನಾಟ ಹೇಗಿತ್ತು ? ನೆನಪುಗಳನ್ನು ಮೆಲುಕು ಹಾಕಿದ ಅಪ್ಪು
ಸಬ್ ಇನ್ಸ್ ಪೆಕ್ಟರ್ ಪತ್ನಿ ಕಳೆದ ಒಂದೂವರೆ ತಿಂಗಳ ಹಿಂದೆ ಗುಜರಾತ್ ನ ವಡೋದರಾ ಜಿಲ್ಲೆಯ ಕರ್ಜಾನಾ ಪ್ರದೇಶದಿಂದ ನಾಪತ್ತೆಯಾಗಿದ್ದರು. ಆದರೆ ಆಕೆಯನ್ನು ಪತಿಯೇ ತನ್ನ ಸಹಚರರ ಜತೆ ಕೂಡಿ ಹತ್ಯೆಗೈದು ಶವವನ್ನು ಸುಟ್ಟುಹಾಕಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ವರದಿ ವಿವರಿಸಿದೆ.
ಕೊಲೆ ಪ್ರಕರಣದಲ್ಲಿ ನೆರವು ನೀಡಿದ್ದ ಕ್ರಿಸ್ಟಿನಾ ಜಡೇಜಾ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ 2020ರಲ್ಲಿ ಕರ್ಜಾನಾ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ನಿಂದ ಸ್ಪರ್ಧಿಸಿರುವುದಾಗಿ ವರದಿ ತಿಳಿಸಿದೆ. ಜೂನ್ 4 ಮತ್ತು 5ರ ರಾತ್ರಿ ಸ್ವೀಟಿ ಪಟೇಲ್ ಅವರನ್ನು ಸಬ್ ಇನ್ಸ್ ಪೆಕ್ಟರ್ ಅಜಯ್ ದೇಸಾಯಿ ಹತ್ಯೆಗೈದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನೆರೆಯ ಭರೂಚ್ ಜಿಲ್ಲೆಯ ಅಟಾಲಿ ಗ್ರಾಮದ ದಾಹೇಜ್ ಹೈವೇ ಸಮೀಪ ಜಡೇಜಾ ಒಡೆತನದ ನಿರ್ಮಾಣ ಹಂತದಲ್ಲಿರುವ ಹೋಟೆಲ್ ಕಟ್ಟಡದಲ್ಲಿ ಇನ್ಸ್ ಪೆಕ್ಟರ್ ಪತ್ನಿಯ ಶವವನ್ನು ಸುಟ್ಟುಹಾಕಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೇಸಾಯಿ ಮತ್ತು ಜಡೇಜಾ ವಿರುದ್ಧ ಕೊಲೆ ಪ್ರಕರಣದಡಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಅಹಮ್ಮದಾಬಾದ್ ಕ್ರೈಮ್ ಬ್ರ್ಯಾಂಚ್ ಇನ್ಸ್ ಪೆಕ್ಟರ್ ಡಿಬಿ ಬರಾದ್ ತಿಳಿಸಿದ್ದಾರೆ.