Advertisement
ಸಾವಿರಾರು ಮಂದಿ ನೌಕರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದರಿಂದ ಆಡಳಿತ ವ್ಯವಸ್ಥೆಯೂ ಕುಸಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿಯವರು ಧರಣಿ ನಿರತರ ಜತೆ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದರು.
Related Articles
ಶೂನ್ಯ ವೇಳೆಯಲ್ಲಿ ಜೆಡಿಎಸ್‌ನ ಲಿಂಗೇಶ್ ವಿಷಯ ಪ್ರಸ್ತಾವಿಸಿ 2006ರ ಅನಂತರ ಜಾರಿಗೆ ಬಂದಿರುವ ನೂತನ ಪಿಂಚಣಿ ವ್ಯವಸ್ಥೆಯಿಂದ 2.28 ಲಕ್ಷ ನೌಕರರು ಅತಂತ್ರ ಗೊಂಡಿದ್ದಾರೆ. ಅವರಿಂದ ಕಡಿತಗೊಳ್ಳುವ ಹಣ ಜೂಜಿಗೆ ಬಳಸಲಾಗುತ್ತಿದೆ. ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡಿರುವುದು ದುರಂತ. ತತ್‌ಕ್ಷಣ ರಾಜ್ಯ ಸರಕಾರ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಮುಂದಾಗಿ ನೌಕರರಿಗೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
Advertisement
ಇದಕ್ಕೆ ಜೆಡಿಎಸ್‌ನ ಸಾ.ರಾ.ಮಹೇಶ್, ಶಿವಲಿಂಗೇಗೌಡ, ಎ.ಟಿ. ರಾಮಸ್ವಾಮಿ, ಕಾಂಗ್ರೆಸ್‌ನ ಅಂಜಲಿ ಲಿಂಬಾಳ್ಕರ್ ಸೇರಿ ಹಲವು ಸದಸ್ಯರು ಧ್ವನಿಗೂಡಿಸಿದರು.
ಸರಕಾರದಿಂದ ಭರವಸೆಹಳೇ ಪಿಂಚಣಿ ವ್ಯವಸ್ಥೆಯ ಮರುಜಾರಿಗೆ ವಿಧಾನ ಪರಿಷತ್‌ನಲ್ಲಿ ಆಗ್ರಹಿಸಲಾಯಿತು. ಪರಿಷತ್ ನಲ್ಲಿ ಜೆಡಿಎಸ್‌ನ ಮರಿತಿಬ್ಬೇಗೌಡ, ಬಿಜೆಪಿಯ ಎಸ್.ವಿ. ಸಂಕನೂರು ಸೇರಿ ಇನ್ನಿತರರು ಪ್ರಸ್ತಾವಿಸಿದ ವಿಷಯಕ್ಕೆ ಉತ್ತರಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ ಸಿಎಂ ಬಸವ ರಾಜ ಬೊಮ್ಮಾಯಿ ಅವರು ಚರ್ಚಿಸುತ್ತಿದ್ದಾರೆ. ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದರು. ಅದೇ ರೀತಿ ಅನುದಾನಿತ ಶಾಲೆಯ ಎಲ್ಲ ಬಗೆಯ ಸಿಬಂದಿಯನ್ನು ಪಿಂಚಣಿ ವ್ಯವಸ್ಥೆ ವ್ಯಾಪ್ತಿಗೆ ತರುವ ಕುರಿತು ಆರ್ಥಿಕ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಲಾಗುವುದು ಎಂದರು. ಅದಕ್ಕೂ ಮುನ್ನ ಮಾತನಾಡಿದ ಸದಸ್ಯರು, ಹೊಸ ಪಿಂಚಣಿ ವ್ಯವಸ್ಥೆಯಿಂದಾಗಿ ನಿವೃತ್ತಿ ಬಳಿಕ ನೌಕರರಿಗೆ ಕಡಿಮೆ ಮೊತ್ತದ ಪಿಂಚಣಿ ಬರುತ್ತಿದೆ. ಹಾಗಾಗಿ ಜನಪ್ರತಿನಿಧಿಗಳ ಮಾದರಿಯಲ್ಲಿಯೇ, ಸರ ಕಾರಿ ನೌಕರರನ್ನೂ ಹಳೇ ಪಿಂಚಣಿ ವ್ಯವಸ್ಥೆಗೆ ಒಳಪಡಿಸಿ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದು ಮಾಡಬೇಕು ಎಂದರು.