Advertisement

ಜನರ ಜೀವದೊಂದಿಗೆ ಕೈ-ದಳ ಚೆಲ್ಲಾಟ: ಬಿಎಸ್‌ವೈ

10:54 PM Nov 27, 2019 | Team Udayavani |

ಹೊಸಕೋಟೆ: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ತಮ್ಮ ಅಧಿಕಾರವಧಿಯಲ್ಲಾಗಲಿ, ಚುನಾವಣಾ ಪ್ರಚಾರದ ಲ್ಲಾಗಲಿ ರಾಜ್ಯದ ಅಭಿವೃದ್ದಿಯ ಬಗ್ಗೆ ಚಕಾರವೆತ್ತದೆ ಸಾಮಾನ್ಯ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

Advertisement

ನಗರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನ ಖಾಜಿ ಹೊಸಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತ ಮಂಜುನಾಥ್‌ ಮೇಲೆ ನಡೆದಿರುವ ಹಲ್ಲೆಯನ್ನು ಉಲ್ಲೇಖೀಸಿ ಚುನಾವಣೆ ಸಂದರ್ಭದಲ್ಲಿ ನಡೆಯುವ ಗೂಂಡಾಗಿರಿಯನ್ನು ಹುಟ್ಟಡಗಿಸಲು ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರದ ಅಸ್ತಿತ್ವಕ್ಕಾಗಿ ಸಚಿವ ಸ್ಥಾನವನ್ನೇ ತ್ಯಾಗ ಮಾಡಿರುವ, ಪ್ರಾಮಾಣಿಕತೆಗೆ ಮತ್ತೂಂದು ಹೆಸರಾಗಿರುವ ಎಂಟಿಬಿ ನಾಗರಾಜ್‌ರನ್ನು ಸೋಲಿಸಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು.

ಕಾಡುಗೊಡಿಯಿಂದ ನಗರಕ್ಕೆ ಮೆಟ್ರೊ ವಿಸ್ತರಣೆ, ಎಲ್ಲಾ ಗ್ರಾಮಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ಒಳಗೊಂಡಂತೆ ಎಂಟಿಬಿ ನಾಗರಾಜ್‌ ಸಲ್ಲಿಸಿರುವ ಎಲ್ಲಾ ಪ್ರಸ್ತಾವನೆಗಳನ್ನೂ ಸಹ ಅಂಗೀಕರಿಸಿ ಮಂಜೂರು ಮಾಡಲಾಗುವುದು. ಇಡೀ ಸಂಚಿವ ಸಂಪುಟವೇ ಎಂಟಿಬಿ ನಾಗರಾಜ್‌ ಪರವಾಗಿ ಪ್ರಚಾರ ಕೈಗೊಂಡಿದ್ದು, ತಾವು ಡಿ.1ಕ್ಕೆ ಮತ್ತೂಮ್ಮೆ ಕ್ಷೇತ್ರಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು. ಜೊತೆಗೆ, ವೀರಶೈವರು ಎಂಟಿಬಿ ನಾಗರಾಜ್‌ ಪರವಾಗಿ ಮತ ಚಲಾಯಿಸಿ ಗೆಲ್ಲಿಸಿದಲ್ಲಿ ಮಾತ್ರ ತಮಗೆ ಈಗ ಮಾಡಿರುವ ಸನ್ಮಾನ ಸಾರ್ಥಕವಾಗಲಿದೆ ಎಂದರು.

ಎಂಟಿಬಿ ನಾಗರಾಜ್‌ ಹಾಗೂ ಡಾ. ಸುಧಾಕರ್‌ ರಾಜೇನಾಮೆಗೂ ಮೊದಲು ನನ್ನನ್ನು ಭೇಟಿ ಮಾಡಿ ಚರ್ಚಿಸಿ ತೀರ್ಮಾನ ಕೈಗೊಂಡಿದ್ದಾರೆ. ಉಪಚುನಾವಣೆ ನಡೆಯುತ್ತಿರುವ ಎಲ್ಲಾ 15 ಸ್ಥಾನಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದ್ದು ಜಾತಿ ಆಧಾರದ ಮೇಲೆ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಿಲ್ಲ.
-ಎಸ್‌.ಎಂ.ಕೃಷ್ಣ , ಮಾಜಿ ಮುಖ್ಯಮಂತ್ರಿ

10-15 ವರ್ಷಗಳ ಹಿಂದೆ ಹೊಡೆದಾಟಕ್ಕೆ ಖ್ಯಾತಿ ಪಡೆದಿದ್ದ ಕ್ಷೇತ್ರದಲ್ಲಿ ಇಂದು ಶಾಂತಿ ಸುವ್ಯವಸ್ಥೆ ನೆಲೆಸಲು ಎಂಟಿಬಿ ನಾಗರಾಜ್‌ ಕಾರಣರಾಗಿದ್ದಾರೆ. ಹಿಂದಿನ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತ ಚಲಾಯಿಸಿರುವ ಮತದಾರರು ಈ ಬಾರಿಯೂ ಸಹ ಎಂಟಿಬಿ ನಾಗರಾಜ್‌ಗೆ ಮತ ನೀಡಬೇಕು. ಮುಂದಿನ ಬಾಕಿ ಉಳಿದಿರುವ ಮೂರೂವರೆ ವರ್ಷಗಳ ಯಡಿಯೂರಪ್ಪ ನೇತೃತ್ವದ ಸರಕಾರವನ್ನು ಭದ್ರಗೊಳಿಸಲು ಮತದಾರರು ಆಶೀರ್ವದಿಸಬೇಕು.
-ಶೋಭಾ ಕರಂದ್ಲಾಜೆ, ಲೋಕಸಭಾ ಸದಸ್ಯೆ

Advertisement
Advertisement

Udayavani is now on Telegram. Click here to join our channel and stay updated with the latest news.

Next