Advertisement
ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ವೇಳೆ ಜೆಡಿಎಸ್ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೈತ್ರಿ ಏನಿದ್ದರೂ ಆಡಳಿತಕ್ಕೆ ಮಾತ್ರ ಎಂದು ಫರ್ವಾನು ಹೊರೆಡಿಸಿರುವುದು ರಾಮನಗರ ಕ್ಷೇತ್ರದ ಉಪಚುನಾವಣೆಗೂ ಅನ್ವಯಿಸಲಿದೆ. ಮುಂಬರುವ ಲೋಕಸಭಾ ಚುನಾವಣೆಯ ಮೇಲೂ ಈ ಹೇಳಿಕೆ ಪ್ರಭಾವ ಬೀರಲಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಡಿ.ಕೆ. ಸುರೇಶ್‌ರನ್ನು ಕಟ್ಟಿ ಹಾಕುವ ತಂತ್ರ ಇದು ಎಂಬ ಅಭಿಪ್ರಾಯ ಈಗಾಗಲೆ ಜಿಲ್ಲಾ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ. ದೇವೇಗೌಡರ ಈ ರಾಜಕೀಯ ಸೂಕ್ಷವನ್ನು ಅರಿತಿರುವ ಸಂಸದ ಡಿ.ಕೆ. ಸುರೇಶ್ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಟ್ಟು ಸಡಿಲಾಗದಂತೆ ನೋಡಿಕೊಂಡಿದ್ದಾರೆ ಎನ್ನಲಾಗಿದೆ.
ಅನುಕಂಪದ ಅಲೆ ವರ್ಕೌಟ್ ಆಗಬಹುದು ಎಂಬುದು ಕಾರ್ಯಕರ್ತರ ಅಭಿಪ್ರಾಯ.
Related Articles
ಇನ್ನೊಂದು ವರ್ಷದಲ್ಲಿ ಎದುರಾಗುವ ಲೋಕಸಭಾ ಚುನಾವಣೆಯತ್ತ ಡಿ.ಕೆ.ಶಿವಕುಮಾರ್ ಚಿತ್ತ ನೆಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಹಾಲಿ ಸದಸ್ಯ ಡಿ.ಕೆ.ಸುರೇಶ್ ಮತ್ತೆ ಗೆಲ್ಲಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ. ಹೀಗಾಗಿ ರಾಮನಗರ ಕ್ಷೇತ್ರದ ಬಗ್ಗೆ ಡಿಕೆ ಸಹೋದರರು ಮೃದು ಧೋರಣೆ ತಳೆದು, ಲೋಕಸಭಾ
ಚುನಾವಣೆಯಲ್ಲಿ ಜೆಡಿಎಸ್‌ನ ಸಹಕಾರ ಪಡೆಯಲು ನಿಶ್ವಯಸಿದ್ದಾರೆ ಎನ್ನಲಾಗಿದೆ. ಇದು ಸತ್ಯವಾದರೆ ಇಕ್ಬಾಲ್ ಹುಸೇನ್ ಮತ್ತೆ ಸ್ಪರ್ಧಿಸಲು ಅವಕಾಶ ಕೊಡೋಲ್ಲ ಎಂಬ ಅಭಿಪ್ರಾಯಗಳು ಕಾಂಗ್ರೆಸ್ ಪಾಳಯದಲ್ಲಿ ಕೇಳಿಬಂದಿವೆ. ಕೇವಲ 22636 ಮತಗಳ ಅಂತರದಿಂದ ಸೋಲುಂಡಿರುವುದರಿಂದ ಅವರಿಗೆ ಅನುಕಂಪದ ಅಲೆ ಎದ್ದು ಅನಿತಾ ಅವರ ಗೆಲುವಿಗೆ ತೊಂದರೆ ಆದರೆ? ಎಂಬ ಪ್ರಶ್ನೆಯೂ ಡಿಕೆಶಿ ಸಹೋದರರಿಗೆ ಎದುರಾಗಿದೆ. ಹೀಗಾಗಿ ಇಕ್ಬಾಲ್ ಹುಸೇನ್ ಬದಲಿಗೆ ಬೇರೊಬ್ಬರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
Advertisement
ಬಿ.ವಿ.ಸೂರ್ಯ ಪ್ರಕಾಶ್