Advertisement

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟಕ್ಕೆ 20 ಸ್ಥಾನ

06:22 AM May 07, 2019 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟಕ್ಕೆ ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನ ಖಚಿತ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಜೆಡಿಎಸ್‌ ಏಳಕ್ಕೆ ಏಳು ಸ್ಥಾನದಲ್ಲಿ ಗೆದ್ದರೂ ಅಚ್ಚರಿಯಿಲ್ಲ. ಫ‌ಲಿತಾಂಶ ಬಿಜೆಪಿಯವರಿಗೆ ಶಾಕ್‌ ನೀಡಲಿದೆ ಎಂದು ಹೇಳಿದರು.

Advertisement

ಬಿಜೆಪಿಯವರಿಗೆ ಲೆಕ್ಕಾಚಾರ ಬರಲ್ಲ. ಇಪ್ಪತ್ತು ಸ್ಥಾನದ ಮೇಲೆ ಗೆಲ್ಲಲಿದ್ದೇವೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಫ‌ಲಿತಾಂಶ ಬರಲಿ ನೋಡ್ತಾ ಇರಿ. ತುಮಕೂರು, ಮಂಡ್ಯ, ಹಾಸನ ಗೆಲುವು ನಮ್ಮದೇ ಎಂದು ತಿಳಿಸಿದರು. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅರಳ್ಳೋ-ಮರಳ್ಳೋ ಎಂಬಂತಾಗಿದೆ. ಪಾಪ ಅವರು ದೊಡ್ಡವರು, ಅವರ ಬಗ್ಗೆ ನಾನ್ಯಾಕೆ ಮಾತನಾಡಲಿ ಎಂದರು.

ಬಿಡಿಎ ಎಂಜಿನಿಯರ್‌ ವರ್ಗಾವಣೆ ಬಗ್ಗೆ ನನ್ನ ಹೆಸರು ಹೇಳಿದ್ದಾರೆ. ನನಗೆ ಆ ಎಂಜಿನಿಯರ್‌ ಯಾರು ಎಂಬುದೇ ಗೊತ್ತಿಲ್ಲ. ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಅವರ ಅಳಿಯನನ್ನೇ ಕಾರ್ಯನಿರ್ವಾಹಕ ಅಭಿಯಂತರ ಮಾಡಿದ್ದೇವೆ. ಶಿವಮೊಗ್ಗಕ್ಕೆ ಈಶ್ವರಪ್ಪ ಶಿಫಾರಸು ಮಾಡಿದವರನ್ನೇ ವರ್ಗಾವಣೆ ಮಾಡಲಾಗಿದೆ. ದ್ವೇಷ ಇದ್ದರೆ ಅವರನ್ನು ನಾನು ಬೇರೆ ಕಡೆ ವರ್ಗಾವಣೆ ಮಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next