Advertisement

ಅತಿ ಹೆಚ್ಚು ಬಾರಿ ಗೆದ್ದ ಕಾಂಗ್ರೆಸ್‌ ಈ ಬಾರಿ ಕಣದಲ್ಲಿಲ್ಲ

12:25 AM Mar 23, 2019 | Team Udayavani |

ಉಡುಪಿ: ಉಡುಪಿ ಲೋಕಸಭಾ ಕ್ಷೇತ್ರದಿಂದ ಇದುವರೆಗೆ ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದ ಪಕ್ಷ ಕಾಂಗ್ರೆಸ್‌. ಈ ವರೆಗೆ ಒಟ್ಟು 12 ಬಾರಿ ಜಯ ಗಳಿಸಿದೆ. ಚಿಕ್ಕಮಗಳೂರಿನಿಂದಲೂ ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದ್ದು ಕಾಂಗ್ರೆಸ್‌. ಈವರೆಗೆ 10 ಬಾರಿ ಜಯ ಗಳಿಸಿದೆ. ಎರಡು ಉಪಚುನಾವಣೆಗಳಲ್ಲಿ ಗೆದ್ದವರೂ ಕಾಂಗ್ರೆಸ್‌ನವರು; ಒಬ್ಬರು ಇಂದಿರಾ ಗಾಂಧಿ, ಇನ್ನೊಬ್ಬರು ಕೆ.ಜಯಪ್ರಕಾಶ್‌ ಹೆಗ್ಡೆ. ಆದರೆ, ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಇಲ್ಲದೆ ಚುನಾವಣೆ ನಡೆಯುತ್ತಿದೆ.

Advertisement

ಉಡುಪಿಯಿಂದ ಅತಿ ಹೆಚ್ಚು ಬಾರಿ ಆಯ್ಕೆಯಾದವರು ಆಸ್ಕರ್‌ ಫೆರ್ನಾಂಡಿಸ್‌ (ಐದು ಬಾರಿ).ನಂತರದ ಸ್ಥಾನದಲ್ಲಿ ಯು.ಶ್ರೀನಿವಾಸ ಮಲ್ಯ (ಮೂರು ಬಾರಿ), ಜೆ.ಎಂ.ಲೋಬೋ ಪ್ರಭು (ಸ್ವತಂತ್ರ ಪಾರ್ಟಿ), ರಂಗನಾಥ ಶೆಣೈ (ಕಾಂಗ್ರೆಸ್‌), ಟಿ.ಎ.ಪೈ (ಕಾಂಗ್ರೆಸ್‌), ಜಯರಾಮ ಶೆಟ್ಟಿ (ಬಿಜೆಪಿ), ವಿನಯಕುಮಾರ ಸೊರಕೆ (ಕಾಂಗ್ರೆಸ್‌), ಮನೋರಮಾ ಮಧ್ವರಾಜ್‌ (ಬಿಜೆಪಿ), ಡಿ.ವಿ.ಸದಾನಂದ ಗೌಡ (ಬಿಜೆಪಿ), ಕೆ.ಜಯಪ್ರಕಾಶ್‌ ಹೆಗ್ಡೆ (ಕಾಂಗ್ರೆಸ್‌), ಶೋಭಾ ಕರಂದ್ಲಾಜೆ (ಬಿಜೆಪಿ) ಒಂದೊಂದು ಬಾರಿ ಗೆಲುವು ಸಾಧಿಸಿದ್ದಾರೆ. ಉಡುಪಿ ಲೋಕಸಭಾ ಕ್ಷೇತ್ರದ (1951) ಆರಂಭಿಕ ಹೆಸರು ಸೌತ್‌ ಕೆನರಾ (ನಾರ್ತ್‌). ಆಗ ಮದ್ರಾಸ್‌ ಪ್ರಾಂತದ ವ್ಯಾಪ್ತಿಯಲ್ಲಿತ್ತು. ಆಗಿನ ಪ್ರಥಮ ಸಂಸದರು ಯು.ಶ್ರೀನಿವಾಸ ಮಲ್ಯ. 1957ರಲ್ಲಿ ಉಡುಪಿ ಎಂದು ಬದಲಾಯಿತು. 2009ರ ಬಳಿಕ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವಾಯಿತು.

1951ರಿಂದ 1967ರ ವರೆಗೆ ಚಿಕ್ಕಮಗಳೂರು ಕ್ಷೇತ್ರದ ಭಾಗಗಳು ಹಾಸನ ಲೋಕಸಭಾ ಕ್ಷೇತ್ರದೊಂದಿಗೆ ಇತ್ತು. ಆಗಿನ ಕ್ಷೇತ್ರದ ಹೆಸರು ಹಾಸನ-ಚಿಕ್ಕಮಗಳೂರು. ಹಾಸನ-ಚಿಕ್ಕಮಗಳೂರು ಕ್ಷೇತ್ರದ ಪ್ರಥಮ ಲೋಕಸಭಾ ಸದಸ್ಯ ಕಾಂಗ್ರೆಸ್‌ನ ಎಚ್‌.ಸಿದಟಛಿನಂಜಪ್ಪ. ಅವರು 1957ರಲ್ಲಿ ಅವಿರೋಧವಾಗಿ ಆಯ್ಕೆಯಾದರು. 1962ರಲ್ಲಿ ಮತ್ತೆ ಚುನಾಯಿತರಾದರು. ಚಿಕ್ಕಮಗಳೂರು ಪ್ರತ್ಯೇಕ ಲೋಕಸಭಾ ಕ್ಷೇತ್ರ 1967ರಲ್ಲಿ ಆರಂಭವಾಯಿತು. ಪ್ರತ್ಯೇಕ ಲೋಕಸಭಾ ಕ್ಷೇತ್ರದ ಪ್ರಥಮ ಸದಸ್ಯರು ಪಿಎಸ್‌ಪಿಯ ಎಂ.ಹುಚ್ಚೇಗೌಡರು ಮತ್ತು ಕೊನೆಯ ಸಂಸದರು ಬಿಜೆಪಿಯ ಡಿ.ಸಿ. ಶ್ರೀಕಂಠಪ್ಪ. ಚಿಕ್ಕಮಗಳೂರಿನಿಂದ ಕಾಂಗ್ರೆಸ್‌ 10 ಬಾರಿ, ಬಿಜೆಪಿ ಐದು ಬಾರಿ, ಜನತಾದಳ, ಪಿಎಸ್‌ಪಿ ಒಂದು ಬಾರಿ ಗೆದ್ದಿದೆ. ಹಾಸನ ಚಿಕ್ಕಮಗಳೂರು ಕ್ಷೇತ್ರವಿರುವಾಗ ಕಾಂಗ್ರೆಸ್‌ನಿಂದ ಸಿದಟಛಿನಂಜಪ್ಪ ಮೂರು ಬಾರಿ, ಚಿಕ್ಕಮಗಳೂರು ಪ್ರತ್ಯೇಕ ಕ್ಷೇತ್ರವಾದ ಬಳಿಕ ಬಿಜೆಪಿಯ ಡಿ.ಸಿ. ಶ್ರೀಕಂಠಪ್ಪ ಬಿಜೆಪಿಯಿಂದ ಮೂರು ಬಾರಿ ಗೆದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next