Advertisement

ಕಾಂಗ್ರೆಸ್‌: ಮನೆ-ಮನೆ ಭೇಟಿ

05:03 PM Oct 25, 2017 | Team Udayavani |

ಈಶ್ವರಮಂಗಲ: ಮೇನಾಲ ಮಾಜಿ ಮಂಡಲ ಪ್ರಧಾನ ಎಂ. ವಿಶ್ವನಾಥ ಶೆಟ್ಟಿ ಅವರ ಮನೆಯಲ್ಲಿ ಕಾಂಗ್ರೆಸ್‌ ವತಿಯಿಂದ ಮನೆ-ಮನೆ ಭೇಟಿ ಕಾರ್ಯಕ್ರಮ ನಡೆಯಿತು.

Advertisement

ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು ಮಾತನಾಡಿ, ನೆಟ್ಟಣಿಗೆಮುಟ್ನೂರು ಗ್ರಾಮ ಕಾಂಗ್ರೆಸ್‌ ಪಕ್ಷದ ಶಕ್ತಿಕೇಂದ್ರವಾಗಿದೆ. ಮುಖ್ಯಮಂತ್ರಿ ಸಿದ್ದ ರಾಮಯ್ಯ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದನ್ನು ಮತದಾರರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಮತ್ತೂಮ್ಮೆ ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿ ಅವರನ್ನು ಗೆಲ್ಲಿಸಿ, ರಾಜ್ಯದಲ್ಲಿ ಮತ್ತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬೇಕು ಎಂದರು.

ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಉಪಾಧ್ಯಕ್ಷ ಶ್ರೀರಾಮ್‌ ಪಕ್ಕಳ ಮಾತನಾಡಿ, ಶಾಸಕಿ ಶಕುಂತಳಾ ಶೆಟ್ಟಿ ಗ್ರಾಮಕ್ಕೆ ಕೋಟ್ಯಂತರ ರೂಪಾಯಿ ಅನುದಾನ ನೀಡಿ ಗ್ರಾಮವನ್ನು ಅಭಿವೃದ್ಧಿಗೊಳಿಸಿದ್ದಾರೆ. ರಾಜ್ಯ ಸರಕಾರದ ಸಾಕಷ್ಟು ಯೋಜನೆಗಳು ಗ್ರಾಮದಲ್ಲಿ ಅನುಷ್ಠಾನಗೊಳ್ಳಲು ಅವರುಕಾರಣರಾಗಿದ್ದಾರೆ ಎಂದರು.

ನೆಟ್ಟಣಿಗೆಮುಟ್ನೂರು ವಲಯ ಕಾಂಗ್ರೆಸ್‌ ಅಧ್ಯಕ್ಷ ಕೆ. ಮಹಮ್ಮದ್‌ ಮೇನಾಲ, ಮಾಜಿ ಮಂಡಲ ಪ್ರಧಾನ ಎಂ. ವಿಶ್ವನಾಥ ಶೆಟ್ಟಿ, ನೆಟ್ಟಣಿಗೆ ಮುಟ್ನೂರು ಗ್ರಾ.ಪಂ. ಅಧ್ಯಕ್ಷೆ ಶಂಕರಿ ಭಂಡಾರಿ, ಗ್ರಾ.ಪಂ. ಮಾಜಿ ಅಧ್ಯಕ್ಷ ರಾಮ ಮೇನಾಲ, ಹಿರಿಯ ಕಾಂಗ್ರೆಸ್‌ ಮುಖಂಡ ಎ. ಮಹಿಳ್ನಾಥ ಶೆಟ್ಟಿ, ಎನ್‌. ಮೂಸಾನ್‌ ಕರ್ನೂರು, ಪಂಚಾಯತ್‌ ಸದಸ್ಯರಾದ ಅಬ್ದುಲ್ಲ ಗಾಳಿಮುಖ, ಎಂ.ಬಿ. ಇಬ್ರಾಹಿಂ, ಸುರೇಶ್‌ ನಾಯ್ಕ, ಕೆ.ಎಂ. ಮಹಮ್ಮದ್‌, ಲಲಿತಾ, ಉಷಾ, ಲೀಲಾವತಿ, ಇಂದಿರಾ, ವಿಜಯ, ವತ್ಸಲಾ, ಆಯಿಷಾ, ಮಾಧವಿ, ಕಾರ್ಯಕರ್ತರಾದ ವಿಕ್ರಮ್‌ ರೈ ಸಾಂತ್ಯ, ಅಬ್ದುಲ್‌ ರಹಿಮಾನ್‌ ಮೇನಾಲ, ಜಯಪ್ರಕಾಶ್‌ ರೈ ನೂಜಿಬೈಲು, ಯೂಸೂಫ್‌ ಹಾಜಿ, ವೀರಪ್ಪ ನಾಯ್ಕ, ಗಿರೀಶ್‌ ರೈ ಮರಕ್ಕಡ, ಎಂ.ಎ. ಅಶ್ರಫ್‌, ರಾಮದಾಸ್‌ ರೈ ಅಡೀಲು, ಮಹಮ್ಮದ್‌ ಗಾಳಿಮುಖ, ಸುಂದರ್‌ ಜಿ., ಮುತ್ತಪ್ಪ ಪೂಜಾರಿ ಕುದ್ರೋಳಿ, ಇ.ಎಚ್‌. ಮಹಮ್ಮದ್‌, ಹಮೀದ್‌ ಗಾಳಿಮುಖ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next