Advertisement
ಕಲಬುರಗಿ ದಕ್ಷಿಣ, ಕಲಬುರಗಿ ಉತ್ತರ, ಕಲಬುರಗಿ ಗ್ರಾಮೀಣ, ಅಫjಲ್‌ಪುರ, ಜೇವರ್ಗಿ, ಚಿತ್ತಾಪುರ, ಸೇಡಂ ಹಾಗೂ ಗುರುಮಿಠಕಲ್ ಸೇರಿ ಒಟ್ಟಾರೆ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲೀಗ ಕಾಂಗ್ರೆಸ್ 6 ಹಾಗೂ ಬಿಜೆಪಿ, ಜೆಡಿಎಸ್ ತಲಾ 1 ವಿಧಾನಸಭೆ ಸದಸ್ಯರ ಬಲ ಹೊಂದಿದೆ. 2019ರ ಚುನಾವಣೆ ವೇಳೆ ಕಾಂಗ್ರೆಸ್ 4, ಬಿಜೆಪಿ 3 ಹಾಗೂ ಜೆಡಿಎಸ್ ಓರ್ವ ಸದಸ್ಯರ ಬಲ ಹೊಂದಿತ್ತು.
Related Articles
Advertisement
1980ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಧರ್ಮಸಿಂಗ್ ಗೆಲುವು ಸಾಧಿಸಿದ್ದರು. ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ರಾಜೀನಾಮೆ ನೀಡಿದರು. ತದನಂತರ ಉಪ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಆಪ್ತ ಕೇರಳದ ಸಿ.ಎ.ಸ್ಟೀಫನ್ ಅವರಿಗೆ ಕ್ಷೇತ್ರ ಬಿಟ್ಟು ಕೊಡಲಾಯಿತು. ತದನಂತರ 1984ರಲ್ಲಿ ಮಾಜಿ ಸಿಎಂ ವೀರೇಂದ್ರ ಪಾಟೀಲ ಈ ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶಿಸಿದರು.
ಜಾತಿ ಲೆಕ್ಕಾಚಾರ ಹೇಗಿದೆ?2009ರ ಮುಂಚೆ ಈ ಕ್ಷೇತ್ರ ಸಾಮಾನ್ಯವಾಗಿತ್ತು. ಅನಂತರ ಮೀಸಲು ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ 5 ಜನ ಎಂಟು ಸಲ ಗೆದ್ದಿದ್ದಾರೆ. ಮುಸ್ಲಿಮರು ಎರಡು ಸಲ, ಎಸ್ಸಿ ಸಮುದಾಯ ಮೂರು ಸಲ, ಇತರರು ಎರಡು ಸಲ ಗೆದ್ದಿದ್ದಾರೆ. ಪ್ರಸ್ತುತ ಒಟ್ಟು 22,68,944 ಮತದಾರರಲ್ಲಿ ಅತಿ ಹೆಚ್ಚು ಲಿಂಗಾಯತ ಸಮುದಾಯದವರೇ ಆಗಿದ್ದಾರೆ. ಎರಡನೇ ಸ್ಥಾನದಲ್ಲಿ ಎಸ್ಸಿ ಹಾಗೂ ಮೂರನೇ ಸ್ಥಾನದಲ್ಲಿ ಮುಸ್ಲಿಂ ಸಮುದಾಯದವರಿದ್ದಾರೆ. ಒಟ್ಟಾರೆ ಕ್ಷೇತ್ರದಲ್ಲಿ ಆರು ಲಕ್ಷ ಲಿಂಗಾಯತರು, 4.50 ಲಕ್ಷ ಎಸ್ಸಿ, 3.90 ಲಕ್ಷ ಮುಸ್ಲಿಂ, 3 ಲಕ್ಷ ಕೋಲಿ ಸಮುದಾಯದವರಿದ್ದಾರೆ. ಡಾ| ಉಮೇಶ ಜಾಧವ (ಹಾಲಿ ಸಂಸದ)
ಪಕ್ಷ-ಬಿಜೆಪಿ 620192
ಗೆಲುವಿನ ಅಂತರ 95452 ಹಣಮಂತರಾವ ಭೈರಾಮಡಗಿ