Advertisement

Lok Sabha Elections ನಂತರ ಕಾಂಗ್ರೆಸ್‌ ಸರ್ಕಾರ ಮತ್ತಷ್ಟು ಬಲಿಷ್ಠ: ಡಿಕೆಶಿ

08:57 PM Apr 17, 2024 | Team Udayavani |

ಬೆಂಗಳೂರು: ಸಾರ್ವತ್ರಿಕ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ ಎಂಬ ಪ್ರತಿಪಕ್ಷಗಳ ಕೂಗಿನ ಬೆನ್ನಲ್ಲೇ ಚುನಾವಣೆ ನಂತರ ಈ ಸರ್ಕಾರ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Advertisement

ಬೆಂಗಳೂರು ಪ್ರಸ್‌ಕ್ಲಬ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಧ್ಯಮದೊಂದಿಗಿನ ಸಂವಾದದಲ್ಲಿ ಭಾಗವಹಿಸಿ ಮಾತನಾಡಿ, 136 ಸ್ಥಾನಗಳನ್ನು ಗೆದ್ದು ಬೀಗುತ್ತಿರುವ ಈ ಕಾಂಗ್ರೆಸ್‌ ಸರ್ಕಾರ ಅತ್ಯಂತ ಭದ್ರವಾಗಿದೆ. ಲೋಕಸಭಾ ಚುನಾವಣೆಯು ಸರ್ಕಾರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಸರ್ಕಾರ ಪತನವೂ ಆಗುವುದಿಲ್ಲ. ಬದಲಿಗೆ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗ್ಯಾರಂಟಿಗಳು ನಮ್ಮ ಸರ್ಕಾರದ ವೋಟ್‌ ಬ್ಯಾಂಕ್‌ ಅಲ್ಲ; ಬಡ ಮಹಿಳೆಯರ ಬದುಕಿನ ಬ್ಯಾಂಕ್‌ ಎಂದು ವಿಶ್ಲೇಷಿಸಿದ ಅವರು, ಗ್ಯಾರಂಟಿ ಯೋಜನೆಗಳ ಮೂಲಕ ಹೆಣ್ಣುಮಕ್ಕಳಿಗೆ ಶಕ್ತಿ ತುಂಬಿದ್ದೇವೆ. ಅವರು ಗೌರವದಿಂದ ಬದುಕುವಂತೆ ಮಾಡಿದ್ದೇವೆ. ಆದರೆ ಕೆಲವರು ಅಗೌರವದಿಂದ ಮಾತನಾಡುತ್ತಾರೆ. ಅಂತಹವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತೀಕ್ಷ್ಣವಾಗಿ ಹೇಳಿದರು.

ನಾವು ನುಡಿದಂತೆ ನಡೆದಿದ್ದೇವೆ. ಆ ಮೂಲಕ ಜನರ ಬಳಿ ಹೋಗುವ ಅರ್ಹತೆ ಮತ್ತು ನೈತಿಕತೆಯೂ ನಮಗಿದೆ. ಆದರೆ, ಬಿಜೆಪಿಗೆ ಮತದಾರರ ಬಳಿ ಹೋಗುವ ನೈತಿಕತೆಯೂ ಇಲ್ಲ ಎಂದರು.

ಅವ್ರೇನು ಸತ್ಯಹರಿಶ್ಚಂದ್ರನ ಮೊಮ್ಮಕ್ಕಳೇ?:
ಈಗ ಚುನಾವಣೆಯಲ್ಲಿ ಸೋಲಿನ ಭೀತಿ ಕಾಡುತ್ತಿರುವುದರಿಂದ ಐಟಿ, ಇಡಿಯಂತಹ ಸಂಸ್ಥೆಗಳಿಂದ ರಾಜಕೀಯವಾಗಿ ಕಿರುಕುಳ ನೀಡಲಾಗುತ್ತಿದೆ. ಇವರ ಕಡೆಯವರು (ಬಿಜೆಪಿಗೆ) ಏನು ಸತ್ಯಹರಿಶ್ಚಂದ್ರನ ಮೊಮ್ಮಕ್ಕಳೇ? ಸ್ವತ್ಛವಾಗಲು ವಾಷಿಂಗ್‌ ಮಷಿನ್‌ ಇಟ್ಕೊಂಡಿದ್ದಾರಾ? ಬೇಕಾದರೆ, ನಾವೇ ಪಟ್ಟಿ ಕೊಡ್ತೀವಿ ಕ್ರಮ ಕೈಗೊಳ್ಳುತ್ತಾರಾ ಎಂದು ಡಿಕೆಶಿ ಕೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next