Advertisement

ಕಾಂಗ್ರೆಸ್‌ ಸರ್ಕಾರ ಬಡವ-ರೈತಪರ

01:09 PM Oct 23, 2017 | Team Udayavani |

ತಿ.ನರಸೀಪುರ: ರಾಜ್ಯದ ಸಹಕಾರಿ ಬ್ಯಾಂಕುಗಳಲ್ಲಿ ರೈತರ ಸಾಲ ಹಾಗೂ ವಿವಿಧ ಬ್ಯಾಂಕುಗಳಲ್ಲಿನ ಅಭಿವೃದ್ಧಿ ನಿಗಮಗಳ ಸಾಲ ಮನ್ನಾ ಮಾಡುವ ಮೂಲಕ ರಾಜ್ಯದಲ್ಲಿ ರೈತಪರ ಮತ್ತು ಬಡವರ ಪರವಾದ ಕಾಂಗ್ರೆಸ್‌ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಯೋಜನೆ ಜಾಗೃತಿ ಸಮಿತಿ ಅಧ್ಯಕ್ಷ ಸುನೀಲ್‌ ಬೋಸ್‌ ಹೇಳಿದರು.

Advertisement

ತಾಲೂಕಿನ ಯರಗನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನಂತರ ನಡೆದ ಮನೆ ಮನೆ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಯೋಜನೆಗಳು ಹಾಗೂ ಜನಪರ ಅಭಿವೃದ್ಧಿ ಕಾರ್ಯಕ್ರಮಗಳ ಕೈಪಿಡಿಗಳನ್ನು ಜನರಿಗೆ ವಿತರಿಸಿ ಮಾತನಾಡಿದರು.

ಹಲವು ಬಾರಿ ಮುಖ್ಯಮಂತ್ರಿಗಳೇ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡುವಂತೆ ಕೇಳಿಕೊಂಡರೂ ಪ್ರಧಾನಮಂತ್ರಿಗಳಿಗೆ ಕೇಳಿಸಲಿಲ್ಲ, ರಾಜ್ಯದ ಬಿಜೆಪಿ ನಾಯಕರೂ ಬಾಯಿ ಬಿಡಲಿಲ್ಲ ಎಂದು ದೂರಿದರು. 

ಮತ ಕೊಟ್ಟು ಅಧಿಕಾರ ನೀಡಿದ ಜನರ ಋಣವನ್ನು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ತೀರಿಸುವ ಕೆಲಸ ಮಾಡಿದ್ದಾರೆ. ಹೀಗಾಗಿ ಕೈ ಕಾರ್ಯಕರ್ತರು ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಜಿಪಂ ಸದಸ್ಯ ಟಿ.ಎಚ್‌.ಮಂಜುನಾಥನ್‌, ತಾಪಂ ಅಧ್ಯಕ್ಷ ಸಿ.ಚಾಮೇಗೌಡ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಲಿಂಗಯ್ಯ, ಮಂಡಲ ಪಂಚಾಯ್ತಿ ಮಾಜಿ ಪ್ರಧಾನ ಎಂ.ಡಿ.ಬಸವರಾಜು, ತಾಪಂ ಸದಸ್ಯರಾದ ಕೆ.ಎಸ್‌.ಗಣೇಶ್‌,  ಎಚ್‌.ಎನ್‌.ಉಮೇಶ,

Advertisement

-ಮಾಜಿ ಸದಸ್ಯ ಕೇತಹಳ್ಳಿ ಮಹದೇವಪ್ಪ, ಕರೋಹಟ್ಟಿ ಗ್ರಾಪಂ ಅಧ್ಯಕ್ಷ ಬಿ.ಎಂ.ಶಿವಕುಮಾರ್‌, ಬೆನಕನಹಳ್ಳಿ ಗ್ರಾಪಂ ಅಧ್ಯಕ್ಷ ಬಿ.ಎನ್‌.ಜಗದೀಶ, ಸದಸ್ಯ ಸುನೀಲ್‌, ಮುಖಂಡರಾದ ರಂಗರಾಮು, ಪುಟ್ಟಮಾದಯ್ಯ(ಕಪ್ಪಣ್ಣ), ಪುಟ್ಟಸ್ವಾಮಪ್ಪನ ರವಿ, ಪರಮೇಶಪ್ಪ, ದಿನೇಶ್‌, ನ್ಯಾಯಬೆಲೆ ಅಂಗಡಿ ನಾಗೇಗೌಡ ಮತ್ತಿತರರಿದ್ದರು.

ಯುವಪಡೆಯಿಂದ ಪಾದಯಾತ್ರೆ: ತಾಲೂಕಿನ ಕೇತಹಳ್ಳಿ ಗ್ರಾಮದಲ್ಲಿ ಭಾನುವಾರ ಯುವ ಕಾಂಗ್ರೆಸ್‌ ಹಾಗೂ ಅಹಿಂದ ಸಂಘಟನೆ ಮುಖಂಡರು ಪಾದಯಾತ್ರೆ ಮೂಲಕ ಮನೆ ಮನೆ ಕಾಂಗ್ರೆಸ್‌ ಕಾರ್ಯಕ್ರಮ ನಡೆಸಿದರು. ಅಹಿಂದ ಯುವ ಘಟಕದ ಜಿಲ್ಲಾಧ್ಯಕ್ಷ ಜೆ.ಅನೂಪ್‌ಗೌಡ, ಯುವ ಕಾಂಗ್ರೆಸ್‌ ಮುಖಂಡ ಮಂಜು ರಾಜಣ್ಣ, ಮುಖಂಡರಾದ ಮಹದೇವ, ಟೈಲರ್‌ ಮಾಧು, ಬಿಲಿಗೆರೆಹುಂಡಿ ಮಹೇಶ, ಮಹದೇವಸ್ವಾಮಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next