Advertisement

ಅಲ್ವಾರ್‌ ಗ್ಯಾಂಗ್‌ರೇಪ್‌ ಕೇಸ್‌ ಮುಚ್ಚಿ ಹಾಕಲು ಕಾಂಗ್ರೆಸ್‌ ಯತ್ನಿಸಿತ್ತು

09:15 AM May 12, 2019 | Vishnu Das |

ಹೊಸದಿಲ್ಲಿ : ಅಲ್ವಾರ್‌ನಲ್ಲಿ ದಲಿತ ಮಹಿಳೆಯ ಮೇಲೆ ನಡೆದಿದ್ದ ಗ್ಯಾಂಗ್‌ ರೇಪ್‌ ಪ್ರಕರಣವನ್ನುರಾಜಸ್ಥಾನದ ಕಾಂಗ್ರೆಸ್‌ ಸರ್ಕಾರ ಮುಚ್ಚಿ ಹಾಕಲು ಯತ್ನಿಸಿತ್ತು ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಶನಿವಾರ ಗಂಭೀರ ಆರೋಪ ಮಾಡಿದ್ದಾರೆ.

Advertisement

ಚುನಾವಣೆ ಮುಗಿಯುವ ವರೆಗೆ ಪ್ರಕರಣವನ್ನು ಬಯಲು ಮಾಡದೇ ಮುಚ್ಚಿ ಹಾಕಲು ಸರ್ಕಾರ ಮುಂದಾಗಿತ್ತು. ಸಂತ್ರಸ್ತೆಯ ಕುಟುಂಬದವರಿಗೂ ಬೆದರಿಕೆ ಹಾಕಿತ್ತು. ಈ ಪ್ರಕರಣದಲ್ಲಿ ಸಂತ್ರಸ್ತೆಗೆ ಕಾಂಗ್ರೆಸ್‌ ಸರ್ಕಾರದ ಅಡಿಯಲ್ಲಿ ನ್ಯಾಯ ಸಿಗುವ ಭರವಸೆ ನನಗಿಲ್ಲ. ಸುಪ್ರೀಂ ಕೋರ್ಟ್‌ ಮದ್ಯ ಪ್ರವೇಶ ಮಾಡಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಚುನಾವಣಾ ಆಯೋಗದ ವಿರುದ್ಧವೂ ಆಕ್ರೋಶ
ಚುನಾವಣಾ ಆಯೋಗದ ವಿರುದ್ಧವೂ ಆಕ್ರೋಶ ಹೊರ ಹಾಕಿದ ಮಾಯಾವತಿ, ಮಹಿಳೆಯರ ವಿರುದ್ಧ ಅವಹೇಳನಕಾರಿ, ವಿವೇಕವಿಲ್ಲದೆ ನಿಂದನೆಯ ಭಾಷೆ ಬಳಸುತ್ತಿರುವ ರಾಜಕಾರಣಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಸುಪ್ರೀಂ ಕೋರ್ಟ್‌ ಸ್ವಯಂ ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮಕೈಗೊಂಡು ಭವಿಷ್ಯದಲ್ಲಿ ಅಂತಹ ಹೇಳಿಕೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಅಲ್ವಾರ್‌ನಲ್ಲಿ ಎಪ್ರಿಲ್‌ 26 ರಂದು ಪತಿಯನ್ನು ಥಳಿಸಿ ಐವರು ಕಾಮಾಂಧರು ಮಹಿಳೆಯ ಮೇಲೆ ಬರ್ಬರವಾಗಿ ಗ್ಯಾಂಗ್‌ ರೇಪ್‌ ಎಸಗಿದ್ದರು. ಹೇಯ ಕೃತ್ಯದ ವಿಡಿಯೋವನ್ನೂ ಚಿತ್ರೀಕರಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next