Advertisement

ಕಲಾಪಗಳಿಂದ ಕಾಂಗ್ರೆಸ್‌ ಪಲಾಯನ: ಅಶ್ವತ್ಥ ನಾರಾಯಣ

03:59 PM Aug 08, 2021 | Team Udayavani |

ರಾಮನಗರ: ದೇಶವನ್ನು ಕಾಡುತ್ತಿರುವ ಕೋವಿಡ್‌ ಸೋಂಕು, ಆರ್ಥಿಕ ಸಮಸ್ಯೆಗಳು ಮುಂತಾದ ವಿಚಾರಗಳಲ್ಲಿ ಸಂಸತ್ತಿನ ಸದನದಲ್ಲಿ ಚರ್ಚೆ ನಡೆಸದೆ ಕಾಂಗ್ರೆಸ್‌ ಪಲಾಯನ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಲಿಖಿತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Advertisement

ಕೋವಿಡ್‌ ಸೋಂಕು, ಸೋಂಕಿನ ಹಿನ್ನೆಲೆಯಲ್ಲಿ ಉದ್ಭವವಾಗಿರುವ ಆರ್ಥಿಕ ಸಮಸ್ಯೆಗಳು, ಉತ್ಪಾದನಾ ಕ್ಷೇತ್ರದ ಸವಾಲುಗಳು, ಆಫ‌ಘಾನಿಸ್ಥಾನದಲ್ಲಿನ ಬೆಳೆವಣಿಗೆ, ಪಾಕಿಸ್ತಾನ ಮತ್ತು ಚೀನಾದ ಷಡ್ಯಂತ್ರಗಳಿಂದಾಗಿ ದೇಶದ ಮೇಲೆ ಆಗಬಹುದಾದ ಪರಿಣಾಮಗಳು ಹೀಗೆ
ಅನೇಕ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆಗಳಿಂದ ಜು. 19ರಿಂದ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪೆಗಾಸಸ್‌ ಮತ್ತು ರೈತರ ಸಮಸ್ಯೆಗಳ ಕುರಿತು ವಿರೋಧ ಪಕ್ಷಗಳ ನಿರಂತರ ಪ್ರತಿಭಟನೆಗಳಿಂದ ಲೋಕಸಭೆ ಮತ್ತು ರಾಜ್ಯಸಭೆಗಳು ಯಾವುದೇ ಮಹತ್ವದ ವ್ಯವಹಾರಗಳನ್ನು ನಡೆಸಲು ವಿಫ‌ಲವಾಗಿದೆ. ಈ ಧೋರಣೆ ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಚಾರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನ ಬೌಧಿಕ ದಿವಾಳಿತನ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತು ಪವಿತ್ರ ದೇವಾಲಯವಿದ್ದಂತೆ, ಸಂಸತ್ತಿನ ಒಳಗೆ ರಾಹುಲ್‌ ಗಾಂಧಿಯ ಅನುಯಾಯಿಗಳು ಮತ್ತು ಪ್ರತಿಪಕ್ಷಗಳು ಅತ್ಯಂತ ಬೇಜವಾಬ್ದಾರಿಯಿಂದ ಕಲಾಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹರಿದು ಹಾಕುತ್ತ ಸಂಸತ್ತಿನ ಕಾರ್ಯನಿರ್ವಹಣೆಗೆ ತಡೆ ಉಂಟು ಮಾಡುತ್ತಿರುವುದು ಅತ್ಯಂತ ಶೋಚನೀಯ ಎಂದಿದ್ದಾರೆ.

ಇದನ್ನೂ ಓದಿ:ಸುಳ್ಳು ಹೇಳಿ ನನ್ನನ್ನು ದಾರಿ ತಪ್ಪಿಸಲಾಗಿತ್ತು:ರಾಜ್ ಕುಂದ್ರಾ ವಿರುದ್ಧ ನಟಿ ಶೆರ್ಲಿನ್ ಆರೋಪ

ಕೇಂದ್ರ ಸರ್ಕಾರ ಅತ್ಯಂತ ಜವಾಬ್ದಾರಿಯಿಂದ ಸದನಗಳು ಸುಸೂತ್ರವಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಬಿಕ್ಕಟ್ಟನ್ನು ಕೊನೆಗೊಳಿಸಲು ಮಾಡಿರುವ ಎಲ್ಲ ಪ್ರಯತ್ನಗಳನ್ನು ವಿಫ‌ಲಗೊಳಿಸಿವೆ.

Advertisement

ಕೇವಲ ಗದ್ದಲ, ಗಲಾಟೆ ಮತ್ತು ಅಸಂವಿಧಾನಿಕ ಪ್ರಕ್ರಿಯೆಗಳ ಮೂಲಕ ವಿರೋಧ ಪಕ್ಷಗಳು ನಡೆಸಿರುವ ಕೃತ್ಯಗಳು ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸಂವಿಧಾನದ ಆಶಯಗಳಿಗೆ ಮಾಡಿರುವ ದ್ರೋಹ ಎಂದರು.

ಸೇವಾಹಿ ಸಂಘಟನ್‌: ಸೇವಾಹಿ ಸಂಘಟನ್‌ ಎಂಬ ಕಾರ್ಯಕ್ರಮ ಹಮ್ಮಿಕೊಂಡಿರುವ ಬಿಜೆಪಿ ಪಕ್ಷವು ದೇಶಾದ್ಯಂತ 60 ಕೋಟಿ ರೂ ಮೌಲ್ಯದ ಆಹಾರ ಪ್ಯಾಕೆಟ್‌ಗಳು, 25 ಕೋಟಿ ಫೇಸ್‌ ಮಾಸ್ಕ್ ಗಳು, 20 ಕೋಟಿ ಹ್ಯಾಂಡ್‌ ಸ್ಯಾನಿಟೈಸರ್‌ಗಳನ್ನು ವಿತರಿಸಿದೆ. ಅನ್ಯ ಪಕ್ಷಗಳು ಕೇವಲ ಹೇಳಿಕೆಗಳಿಗೆ ಸೀಮಿತವಾಗಿರುವ ಸನ್ನಿವೇಶದಲ್ಲಿ ಬಿಜೆಪಿ ತನ್ನ ಲಕ್ಷಾಂತರ ಕಾರ್ಯಕರ್ತರ ಮೂಲಕ ಜನರನ್ನು ‌ ತಲುಪುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next