ಶಿವಮೊಗ್ಗ: ಸಿದ್ದರಾಮಯ್ಯನವರ ಸರ್ವಾಧಿಕಾರಿ ಧೋರಣೆಯಿಂದ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ಲೋಕಸಭೆ ಚುನಾವಣೆಯಲ್ಲೂ ಹೀನಾಯವಾಗಿ ಸೋತಿತ್ತು. ಹೀಗಿದ್ದೂ ನಾನೇ ಮುಂದಿನ ಸಿಎಂ ಆಗುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇದನ್ನು ನೋಡಿದರೆ ಕಾಂಗ್ರೆಸ್ ನಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲ ಅನಿಸುತ್ತಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸಿಎಂ ಕನಸು ಕಾಣುತ್ತಿದ್ದು ಅದು ನನಸಾಗದು. ಸಿದ್ದರಾಮಯ್ಯ ಹಗಲು ಹಾಗೂ ರಾತ್ರಿ ಎರಡು ವೇಳೆಯಲ್ಲೂ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ರಾಜ್ಯದ ಶೇ.60 ರಷ್ಟು ಗ್ರಾ.ಪಂ ಚುನಾವಣೆಯಲ್ಲಿ ಗೆದ್ದಿದೆ. ಮುಂದಿನ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ ಗೆಲ್ಲುವ ಗುರಿ ಹೊಂದಿದ್ದೇವೆ. ಜೊತೆಗೆ ವಿಧಾನಸಭೆಯಲ್ಲೂ ಗೆಲ್ಲುವ ನಿಟ್ಟಿನಲ್ಲಿ ಪಕ್ಷ ನಿಲುವು ತೆಗೆದುಕೊಂಡಿದೆ ಎಂದರು.
ಇದನ್ನೂ ಓದಿ:ರಾಷ್ಟ್ರೀಯ ಪಕ್ಷಗಳು JDS ಮುಖಂಡರ ಕಾಲು ಹಿಡಿಯುವುದು ಬಿಟ್ಟು ಮರ್ಯಾದೆ ಉಳಿಸಿಕೊಳ್ಳಲಿ: HDK
Related Articles
ವಿಧಾನ ಪರಿಷತ್ ವಿಸರ್ಜನೆ ಕುರಿತ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದು ಘಟನೆಯಿಂದಾಗಿ ವಿಧಾನ ಪರಿಷತ್ ವಿಸರ್ಜಿಸುವುದು ಸರಿಯಲ್ಲ. ಅದಕ್ಕೆ 115 ವರ್ಷದ ಇತಿಹಾಸ ಇದೆ.ಈಗಾಗಲೇ ಒಂದು ಸಮಿತಿ ರಚನೆಯಾಗಿದೆ. ಅಂದಿನ ಘಟನೆ ನಿಜಕ್ಕೂ ಕಪ್ಪು ಚುಕ್ಕೆ. ಎಲ್ಲರೂ ಕೂಡ ಕ್ಷಮೆ ಕೇಳಿದ್ದಾರೆ. ಹಾಗೆಂದ ಮಾತ್ರಕ್ಕೆ ದೇಶಕ್ಕೆ ಮಾದರಿಯಾಗಿರುವ ಸದನವನ್ನು ರದ್ದು ಮಾಡುವ ಅಭಿಪ್ರಾಯ ಸರಿಯಲ್ಲ. ಅಂದಿನ ಘಟನೆಗೆ ಹಲವರು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಏನು ಮಾಡಬೇಕು ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಮತ್ತೆ ಇಂತಹ ಘಟನೆ ಆಗದಂತೆ ನೋಡಿಕೊಳ್ಳಬೇಕು. ತನಿಖೆಯಿಂದ ಸತ್ಯಾಂಶ ಹೊರಬರಲಿ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.