ಮುಂಬಯಿ : ರಾಜ್ಯಸಭೆಗೆ ಸ್ಥಾನ ಸಿಗದಿರುವ ಬಗ್ಗೆ ನಟಿ, ಕಾಂಗ್ರೆಸ್ ನಾಯಕಿ ನಗ್ಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮಾಡಿ, “ನಮ್ಮ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಜೀ ಅವರು 2003/04 ರಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದಾಗ ಅವರ ಆದೇಶದ ಮೇರೆಗೆ ನನಗೆ ರಾಜ್ಯಸಭೆಯಲ್ಲಿ ಅವಕಾಶ ಕಲ್ಪಿಸಲು ವೈಯಕ್ತಿಕವಾಗಿ ಬದ್ಧರಾಗಿದ್ದರು. ಆಗ ನಾವು ಅಧಿಕಾರದಲ್ಲಿ ಇರಲಿಲ್ಲ. ಅಂದಿನಿಂದ 18 ವರ್ಷಗಳ ಕಾಲ ನನಗೆ ಅವಕಾಶ ಸಿಗಲಿಲ್ಲ. ಇಮ್ರಾನ್ ಅವರು ಮಹಾರಾಷ್ಟ್ರದಿಂದ ಅಭ್ಯರ್ಥಿಯಾಗಿದ್ದಾರೆ. ನಾನು ಕಡಿಮೆ ಅರ್ಹಳೆ ಎಂದು ನಾನು ಕೇಳುತ್ತೇನೆ. ಎಂದು ಅಸಮಾಧಾನ ಹೊರ ಹಾಕಿದ್ದಾರೆ.
“ನನ್ನ 18 ವರ್ಷಗಳ ತಪಸ್ಸು ಇಮ್ರಾನ್ ಭಾಯ್ ಮುಂದೆ ಕಡಿಮೆಯಾಯಿತು” ಎಂದು ನಗ್ಮಾ ಹೇಳಿದ್ದಾರೆ.. ಪಕ್ಷದ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಉತ್ತರ ಪ್ರದೇಶದ ಕವಿ ಇಮ್ರಾನ್ ಪ್ರತಾಪಘರ್ಹಿ ಅವರನ್ನು ಮಹಾರಾಷ್ಟ್ರದಿಂದ ಕಣಕ್ಕಿಳಿಸಲಾಗಿದೆ.
ಇದನ್ನೂ ಓದಿ : ರಾಜ್ಯಸಭಾ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಏಳು ರಾಜ್ಯಗಳ 10 ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಪಕ್ಷ ಭಾನುವಾರ ಪ್ರಕಟಿಸಿದೆ. ಹಲವು ಪ್ರಮುಖ ನಾಯಕರ ಹೆಸರುಗಳು ಪಟ್ಟಿಯಿಂದ ನಾಪತ್ತೆಯಾಗಿದ್ದು, ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ.