Advertisement

ಆಜಾನ್ ವಿರೋಧಿ ಹೋರಾಟ: ಸಿಎಂ ಭೇಟಿ ಮಾಡಿದ ಕಾಂಗ್ರೆಸ್ ಅಲ್ಪ ಸಂಖ್ಯಾತರ ನಿಯೋಗ

10:30 AM May 09, 2022 | Team Udayavani |

ಆರ್ .ಟಿ. ನಗರ : ರಾಜ್ಯದಲ್ಲಿ ಆಜಾನ್ ವಿಚಾರದಲ್ಲಿ ಶ್ರೀರಾಮ ಸೇನೆ ಸೇರಿ ಕೆಲ ಹಿಂದೂ ಪರ ಸಂಘಟನೆ ಗಳು ಹೋರಾಟಕ್ಕಿಳಿದಿರುವ ವೇಳೆ ಕಾಂಗ್ರೆಸ್ ಅಲ್ಪ ಸಂಖ್ಯಾತರ ನಿಯೋಗ ಸೋಮವಾರ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದೆ.

Advertisement

ಸಿಎಂ ಭೇಟಿ ನಂತರ ಅಲ್ಪಸಂಖ್ಯಾತರ ನಿಯೋಗದ ನೇತೃತ್ವ ವಹಿಸಿದ್ದ ಯು. ಟಿ. ಖಾದರ್ ಹೇಳಿಕೆ ನೀಡಿ, ರಾಜ್ಯದಲ್ಲಿ ಬಹುತೇಕ ಎಲ್ಲ ಜನರು ಶಾಂತಿ ಸೌಹಾರ್ದತೆ ನಿರೀಕ್ಷೆ ಮಾಡುತ್ತಿದ್ದಾರೆ. ಕೆಲವೊಂದು ಶಕ್ತಿ ಗಳು ಕೆಲ ವಿಷಯ ಮುಂದಿಟ್ಟುಕೊಂಡು ಅಶಾಂತಿ ಉಂಟು ಮಾಡಲು ಯತ್ನ ಮಾಡುತ್ತಿದ್ದಾರೆ. ಸರ್ಕಾರ ಶಾಂತಿಯುತ ವಾತಾವರಣ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಸಿಎಂ ಜತೆ ಚರ್ಚೆ ಮಾಡಿದ್ದೇವೆ ಎಂದರು.

ಇದನ್ನೂ ಓದಿ :ವಿಜಯಪುರ ಮತ್ತು ಪಾವಗಡದಲ್ಲಿ  ಆಜಾನ್ ವಿರುದ್ಧ ಭಜನ್ ಅಭಿಯಾನ

ಸಿಎಂ ಕೂಡ ಎಲ್ಲ ರೀತಿಯ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿದ್ದಾರೆ. ಆಜಾನ್ ಬಗ್ಗೆ ಗೃಹ ಸಚಿವರು ಎಲ್ಲಿಯೂ ಹೇಳಿಲ್ಲ. ಆದರೆ ಶಬ್ದ ಮಾಲಿನ್ಯದ ಬಗ್ಗೆ ಕೋರ್ಟ್ ಆದೇಶದಂತೆ ಸರ್ಕಾರದ ನಿಯಮ ರೂಪಿಸಲಿದೆ. ಅದರಂತೆ ಎಲ್ಲರು ಕೂಡ ಪಾಲನೆ ಮಾಡಬೇಕು ಎಂದಿದ್ದಾರೆ ಎಂದು ಖಾದರ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next