ರಾಯ್ಪುರ: ಎಲ್ಲರನ್ನೂ ಒಳಗೊಳ್ಳುವ ಭಾರತದ ಪರವಾಗಿ ಕಾಂಗ್ರೆಸ್ ತನ್ನ ಸೈದ್ಧಾಂತಿಕ ನಿಲುವಿನಲ್ಲಿ ಸಂಪೂರ್ಣವಾಗಿ ಸ್ಪಷ್ಟವಾಗಿರಬೇಕು. ಬಿಲ್ಕಿಸ್ ಬಾನೋ ಆಕ್ರೋಶ ಮತ್ತು ಗೋವಿನ ಹೆಸರಿನಲ್ಲಿ ಹತ್ಯೆಯಂತಹ ವಿಷಯಗಳಲ್ಲಿ ಪಕ್ಷದ ದನಿ ಇನ್ನೂ ಹೆಚ್ಚು ಗಟ್ಟಿಯಾಗಬಹುದಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಶನಿವಾರ ಹೇಳಿದ್ದಾರೆ.
ಇಲ್ಲಿ ನಡೆದ ಪಕ್ಷದ 85ನೇ ಅಧಿವೇಶನದಲ್ಲಿ ಸರ್ವಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವರು, ಕಾಂಗ್ರೆಸ್ ತನ್ನ ಮೂಲ ತತ್ವಗಳಿಗಾಗಿ ನಿಲ್ಲಬೇಕು ಎಂದರು.
“ಅಂತರ್ಗತ ಭಾರತದ ಪರವಾಗಿ ನಾವು ನಮ್ಮ ಸೈದ್ಧಾಂತಿಕ ನಿಲುವಿನಲ್ಲಿ ಸಂಪೂರ್ಣವಾಗಿ ಸ್ಪಷ್ಟವಾಗಿರಬೇಕು” ಎಂದು ತರೂರ್ ಹೇಳಿದರು.
ಇದನ್ನೂ ಓದಿ:ಸಫಾರಿಗೆ ತೆರಳಿದ್ದವರ ಮೇಲೆ ಘೇಂಡಾಮೃಗ ದಾಳಿ: ಏಳು ಪ್ರವಾಸಿಗರಿಗೆ ಗಾಯ; ವಿಡಿಯೋ ನೋಡಿ
“ನಮ್ಮ ನಂಬಿಕೆಗಳ ಮೇಲೆ ನಾವು ಧೈರ್ಯ ಹೊಂದಿರಬೇಕು. ಬಿಲ್ಕಿಸ್ ಬಾನೋ ಆಕ್ರೋಶ, ಕ್ರಿಶ್ಚಿಯನ್ ಚರ್ಚ್‌ಗಳ ಮೇಲಿನ ದಾಳಿಗಳು, ಗೋರಕ್ಷಕರ ಹೆಸರಿನಲ್ಲಿ ಹತ್ಯೆಗಳು, ಮುಸ್ಲಿಂ ಮನೆಗಳ ಬುಲ್ಡೋಜರ್ ಧ್ವಂಸ ಮುಂತಾದ ವಿಷಯಗಳ ಬಗ್ಗೆ ನಾವು ಹೆಚ್ಚು ಧ್ವನಿ ಎತ್ತಬಹುದಿತ್ತು” ಎಂದು ಅವರು ಹೇಳಿದರು.