Advertisement

ಮಂಚಿ ಗ್ರಾ.ಪಂ. ಉಪ ಚುನಾವಣೆ

02:46 PM Dec 21, 2017 | |

ಬಂಟ್ವಾಳ: ಮಂಚಿಯಲ್ಲಿ ಗ್ರಾಮ ಪಂಚಾಯತ್‌ ಸ್ಥಾನವೊಂದಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಡಿ.20ರಂದು ಮಿನಿ ವಿಧಾನಸೌಧದಲ್ಲಿ ನಡೆದಿದ್ದು, ಕಾಂಗ್ರೆಸ್‌ ಬೆಂಬಲಿತ ಮೊಯಿದು ಕುಂಞಿ 463 ಮತ ಪಡೆದು ವಿಜಯಿಯಾದರು. ಅವರ ಸಮೀಪದ ಪ್ರತಿಸ್ಪರ್ಧಿ ಪ್ರಭಾಕರ ಶೆಟ್ಟಿ 356 ಮತಗಳನ್ನು ಗಳಿಸಿದರು. 21 ಮತಗಳು ತಿರಸ್ಕೃತಗೊಂಡಿವೆ.

Advertisement

ಚುನಾವಣಾಧಿಕಾರಿ ಆಹಾರ ಶಾಖೆ ಉಪತಹಶೀಲ್ದಾರ್‌ ವಾಸು ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ.ಮೋಹನ ಕುಮಾರ್‌ ಅವರ ನೇತೃತ್ವದಲ್ಲಿ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ನಡೆಯಿತು.

ವಿಜೇತ ಅಭ್ಯರ್ಥಿ ಮೊದು ಕುಂಞಿ ಅವರನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಭಿನಂದಿಸಿದರು. ಪಾಣೆಮಂಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಬ್ಟಾಸ್‌ ಅಲಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು. ಬಳಿಕ ಮಂಚಿಯಲ್ಲಿ ವಿಜಯೋತ್ಸವ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next