Advertisement

ಕ್ಷೇತ್ರಕಾಗಿ ಬೆಂಗಳೂರಿನ ವಿಧಾನಸೌಧದಲ್ಲೇ ಇರುತ್ತೇನೆ

03:48 PM May 04, 2023 | Team Udayavani |

ಕೋಲಾರ: ವಿರೋಧಿಗಳು ಟೀಕಿಸಿದಂತೆ ನಾನು ಬೆಂಗಳೂರಿನಲ್ಲಿಯೇ ಇರುತ್ತೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ವಿಧಾನಸೌಧದಲ್ಲಿರುತ್ತೇನೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕೊತ್ತೂರು ಮಂಜುನಾಥ್‌ ಟಾಂಗ್‌ ನೀಡಿದರು.

Advertisement

ವಿವಿಧ ಗ್ರಾಮಗಳಲ್ಲಿ ಪ್ರಚಾರದಲ್ಲಿ ತೊಡಗಿರುವ ಅವರು, ಬೆಂಗಳೂರಿನಿಂದ ಬರುತ್ತಾರೆಂಬ ಚುನಾವಣಾ ಪ್ರತಿಸ್ಪರ್ಧಿಗಳು ಮಾಡಿರುವ ಆರೋಪ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಹೌದು ನಾನು ಬೆಂಗಳೂರಿನ ವಿಧಾನಸೌಧದ ಲ್ಲಿರುತ್ತೇನೆ ಎಂದು ಉತ್ತರಿಸಿದರು.

ಅವರು ಆರೋಪಿಸಿದಂತೆ ನಾನು ಮುಳಬಾಗಿ ಲಿನಿಂದಲೇ ಬಂದಿರುವುದು ಸತ್ಯವೇ ಅದರಲ್ಲಿ ಮುಚ್ಚಿಡುವಂತದ್ದೇನು ಇಲ್ಲ.ಆದರೆ, ಆರೊಪ ಮಾಡಿದವರಿಗಿಂತಲೂ ಮುಂಚಿ ತವಾಗಿಯೇ ಕೋಲಾರದಲ್ಲಿ ಮನೆ ಇಟ್ಟುಕೊಂಡಿದ್ದೇನೆ ಎಂದು ತಿರುಗೇಟು ನೀಡಿದರು.

ಪ್ರಚಾರ ಕಾರ್ಯ ಭರದಿಂದ ಸಾಗಿದೆ, ಗ್ರಾಮಾಂತರ ಪ್ರದೇಶದಲ್ಲಿ ಈಗಾಗಲೇ 90ಕ್ಕೂ ಹೆಚ್ಚು ಗ್ರಾಮಗಳನ್ನು ಸುತ್ತಾಡಿ ಪ್ರಚಾರ ನಡೆಸಿದ್ದೇವೆ. ಇನ್ನೂ ಉಳಿದ ಗ್ರಾಮಗಳನ್ನು ವೇಳಾಪಟ್ಟಿಯಂತೆ ಸುತ್ತಾಡುತ್ತಿದ್ದೇನೆ. ಪ್ರತಿ ಬೂತ್‌ ವಾರು ಸಂಘಟನೆಯನ್ನು ಮಾಡುತ್ತಿದ್ದೇವೆ ಎಂದು ವಿವರಿಸಿದರು.

ಕಾಂಗ್ರೆಸ್‌ ಅಧಿಕಾರಕ್ಕೆ: ಪ್ರಧಾನಿ ಮೋದಿ ದೊಡ್ಡವರು ಬಂದು ಪ್ರಚಾರ ನಡೆಸಿ ಹೋಗಿದ್ದಾರೆ. ಅವರ ಪಕ್ಷದ ಕೆಲಸ ಅವರದು, ನಮ್ಮ ಪಕ್ಷದ ಕೆಲಸ ನಮ್ಮದು ಎಂದರಲ್ಲದೆ, ಅವರು ಹಿಂದೆ ಬಂದಾಗ ಆಗಲೂ ಅವರು ಗೆದ್ದಿರಲಿಲ್ಲ, ಈಗಲೂ ಗೆಲ್ಲುವುದಿಲ್ಲ. ತಮ್ಮನ್ನು ಸೇರಿದಂತೆ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಎಂದು ಭವಿಷ್ಯ ನುಡಿದರು.

Advertisement

ಚುನಾವಣಾ ಸ್ಪರ್ಧೆಗೆ ಮುಂಚಿತವಾಗಿಯೂ ಕೋಲಾರದಲ್ಲಿ ತಮಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಇದ್ದರು. ಈಗ ಚುನಾವಣೆಗೆ ಸ್ಪರ್ಧಿಸಿರುವುದರಿಂದ ರಾಜಕೀಯವಾಗಿ ಬೆಂಬಲಿಗರ ಸಂಖ್ಯೆ ಮತ್ತಷ್ಟು ಮುಂದಕ್ಕೆ ಹೋಗಿದೆ ಎಂದರು.

ಕಾರ್ಯಕರ್ತರು ಸಂಘಟಿತರಾಗಿ ಮುನ್ನುಗ್ಗಿ: ಎಂಎಲ್‌ಸಿ ಅನಿಲ್‌ಕುಮಾರ್‌ ಮಾತನಾಡಿ, ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್‌ ಬೆಂಗಳೂರಿನಿಂದ ಬಂದರವಲ್ಲವೇ ಎಂದು ಪ್ರಶ್ನಿಸಿ, ಅವರು ಬೆಂಗಳೂರಿನಿಂದ ಬರಬಹುದು, ನಮ್ಮ ಅಭ್ಯರ್ಥಿ ಮುಳಬಾಗಿಲಿನಿಂದ ಬರಬಾರದೇ ಎಂದರು. ಕಾಂಗ್ರೆಸ್‌ ಅಭ್ಯರ್ಥಿ ಕೊತ್ತೂರು ಮಂಜುನಾಥ್‌ ಪರವಾಗಿ ಎದ್ದಿರುವ ಅಲೆಯನ್ನು ಗಮನಿಸಿ ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿದೆ. ಅದರಿಂದ ಅವರು ಅಪಪ್ರಚಾರವನ್ನು ಸೃಷ್ಟಿಸುತ್ತಿದ್ದಾರೆ, ಕಾಂಗ್ರೆಸ್‌ ಕಾರ್ಯಕರ್ತರು ಕಿವಿಗೊಡಬೇಕಾಗಿಲ್ಲ, ಎದೆಗುಂದಬೇಕಾಗಿಲ್ಲ ಚುನಾವಣಾ ಕಾರ್ಯದಲ್ಲಿ ಸಂಘಟಿತವಾಗಿ ಮುನ್ನುಗ್ಗುತ್ತಿದ್ದಾರೆಂದು ಹೇಳಿದರು.

ವಕ್ಕಲೇರಿ ರಾಜಪ್ಪ, ಅಂಬರೀಷ್‌ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next