ಚಿಕ್ಕೋಡಿ: ಚಿಕ್ಕೋಡಿ- ಸದಲಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗಣೇಶ ಹುಕ್ಕೇರಿ ಅವರು ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಚಿಕ್ಕೋಡಿ ನಗರದ ಮಿನಿವಿಧಾನಸೌಧ ಕಚೇರಿಯಲ್ಲಿ ಶಾಸಕ ಗಣೇಶ ಹುಕ್ಕೇರಿ ಅವರು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಮಾತನಾಡಿ 38 ವರ್ಷದ ರಾಜಕಾರಣದಲ್ಲಿ 8 ಭಾರಿ ಆಯ್ಕೆಯಾಗಿದ್ದೇನೆ. ಆದರೆ ಗಣೇಶ ಹುಕ್ಕೇರಿಗೆ ಇರುವ ಜನ ಬೆಂಬಲ ನಾನು ಕಂಡಿಲ್ಲ. ನಾವು ಮಾಡಿರುವ ಕಾರ್ಯ ಜನರಿಗೆ ಮುಟ್ಟಿವೆ. ನಾವು ನಿಮ್ಮ ಸೇವಕರು ಎಂದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡುವುದು ಶತಸಿದ್ಧ ಎಂದರು. ಪಕ್ಷದ ಯಾರೇ ಮುಖ್ಯಮಂತ್ರಿಯಾದರೂ ನಾವು ಚಿಕ್ಕೋಡಿ ಜಿಲ್ಲೆ ಮಾಡಿಯೇ ಮಾಡುತ್ತೇವೆ. ಜಿಲ್ಲೆಯ ಎಲ್ಲ ಕಚೇರಿ ಮಂಜೂರು ಮಾಡುತ್ತೇವೆ. ಡಿಸಿಸಿ ಬ್ಯಾಂಕ ಚಿಕ್ಕೋಡಿಗೆ ತರುತ್ತೇವೆ. ಜನರ ಸೇವೆ ಮಾಡುತ್ತೇವೆ ಹೊರತು ಅನಾವಶ್ಯಕ ರಾಜಕಾರಣ ಮಾಡುವುದಿಲ್ಲ ಎಂದರು.
ಮುಂಬರುವ ದಿನಗಳಲ್ಲಿ ಮಹಾಲಕ್ಷ್ಮೀ ಏತ ನೀರಾವರಿ ಯೋಜಎ ಮೂಲಕ ರೈತರಿಗೆ ನೀರು ಕೊಡುತ್ತೇವೆ. ಇಲ್ಲವಾದಲ್ಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಈ ಹಿಂದೆ ಸಂಸದರಾಗಿದ್ದ ರಮೇಶ ಕತ್ತಿ ಏನು ಕೆಲಸ ಮಾಡಿದ್ದಾರೆ ಎಂಬುದು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಚಿತ್ರನಟ ಕರೆದುಕೊಂಡು ನಾಮಪತ್ರ ಸಲ್ಲಿಸಿರುವುದು ಹಾಸ್ಯಾಸ್ಪದವಾಗಿದೆ. ಒಬ್ಭ ಜನಪ್ರೀಯ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ ಎಂಬುದಾಗಿದ್ದಾರೆ ಚಿತ್ರನಟ ಅವಶ್ಯಕ ಇರಲಿಲ್ಲ ಎಂದರು.ಅಭ್ಯರ್ಥಿ ಗಣೇಶ ಹುಕ್ಕೇರಿ ಮಾತನಾಡಿದರು.
ಪುರಸಭೆ ಸದಸ್ಯರಾದ ಶ್ಯಾಮ ರೇವಡೆ, ರಾಮಾ ಮಾನೆ, ಸಾಬೀರ ಜಮಾದಾರ, ಗುಲಾಬ ಬಾಗವಾನ, ಅಣ್ಣಾಸಾಹೇಬ ಹವಲೆ, ರಾಕೇಶ ಚಿಂಚಣಿ, ಅನಿಲ ಪಾಟೀಲ. ಕುಮಾರ ಪಾಟೀಲ, ಮುದ್ದಸರ ಜಮಾದಾರ, ಸತೀಶ ಕುಲಕರ್ಣಿ, ಡಾ.ಎನ್.ಎ.ಮಗದುಮ್ಮ, ನರೇಂದ್ರ ನೇರ್ಲೆಕರ, ಎಚ್.ಎಸ್.ನಸಲಾಪೂರೆ, ರವಿ ಹಂಪನ್ನವರ, ವಿನೋಧ ಮಾಳಗೆ ಮುಂತಾದವರು ಇದ್ದರು.