ಲಕ್ನೋ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬುಲ್ಡೋಜರ್‌ನಾಥ್( ಬುಲ್ಡೋಜರ್‌ಗಳ ಅಧಿಪತಿ) ಎಂದು ಕಾಂಗ್ರೆಸ್ ಭಾನುವಾರ ಬಣ್ಣಿಸಿದ್ದು, ಲಕ್ನೋದಲ್ಲಿ ಪಕ್ಷವು ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಓಡಲು ಬಯಸಿದ ಹುಡುಗಿಯರ ಕನಸುಗಳನ್ನು ಪುಡಿಮಾಡಿದ್ದಾರೆ ಎಂದು ಆರೋಪಿಸಿದೆ.
ಲಕ್ನೋ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ವತಿಯಿಂದ “ಲಡ್ಕಿ ಹೂ, ಲಡ್ ಸಕ್ತಿ ಹೂ” ಚುನಾವಣಾ ಪ್ರಚಾರದ ಅಡಿಯಲ್ಲಿ ರೇಸ್ ನಡೆಸಲು ಅವಕಾಶ ನೀಡದ ನಂತರ ಕಾಂಗ್ರೆಸ್ ಆಕ್ರೋಶ ಹೊರ ಹಾಕಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಯುಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಹುಡುಗಿಯರು ಇದನ್ನು ಸಹಿಸುವುದಿಲ್ಲ ಮತ್ತು ಅವರ ಹಕ್ಕುಗಳಿಗಾಗಿ ಹೋರಾಡುತ್ತಾರೆ ಎಂದು ಹೇಳಿದ್ದಾರೆ.
ಬುಲ್ಡೋಜರ್‌ನಾಥ್’ನ ವಿಧ್ವಂಸಕ ಸರ್ಕಾರವು ಯುವಕರ ಕನಸುಗಳನ್ನು ಪದೇ ಪದೇ ತುಳಿಯುತ್ತದೆ. ಕೆಲವೊಮ್ಮೆ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ, ಕೆಲವೊಮ್ಮೆ ನೇಮಕಾತಿಯನ್ನು ಘೋಷಿಸದೆ ಮತ್ತು ಕೆಲವೊಮ್ಮೆ ಅವರ ವಿರುದ್ಧ ಬಲಪ್ರಯೋಗ ಮಾಡುವ ಮೂಲಕ,” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
“ಈ ಬಾರಿ, ಯೋಗಿ ಅವರ ಮಹಿಳಾ ವಿರೋಧಿ ಬುಲ್ಡೋಜರ್ ಧೈರ್ಯಶಾಲಿ ಹುಡುಗಿಯರ ಕನಸುಗಳ ಮೇಲೆ ಓಡಿದೆ” ಎಂದು ಪಕ್ಷ ಹೇಳಿದೆ.