Advertisement

ರಾಜ್ಯಪಾಲರ ನಿರ್ಧಾರಕ್ಕೆ ಕಾಂಗ್ರೆಸ್‌, ಜೆಡಿಎಸ್‌ ಕೆಂಡಾಮಂಡಲ

06:00 AM May 18, 2018 | Team Udayavani |

ಬೆಂಗಳೂರು: ಅತ್ತ ರಾಜಭವನದದ ಅಂಗಳದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರ ಪ್ರಮಾಣ ವಚನ ಸಮಾರಂಭ ನಡೆಯುತ್ತಿದ್ದರೆ, ಇತ್ತ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಗುರುವಾರ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

Advertisement

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ, ಎಐಸಿಸಿ ಮುಖಂಡರಾದ ಗುಲಾಂ ನಬಿ ಆಝಾದ್‌, ಅಶೋಕ್‌ ಗೆಹೊÉàಟ್‌, ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಸೇರಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ನೂತನ ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬೆಳಗ್ಗೆ 9 ರಿಂದ 12 ಗಂಟೆವರೆಗೆ, ಮೂರು ತಾಸು ಧರಣಿ ಕುಳಿತು ಪ್ರತಿಭಟನೆ ನಡೆಸಿದ ಎರಡೂ ಪಕ್ಷಗಳ ಶಾಸಕರು ಮತ್ತೆ ತಾವು ತಂಗಿರುವ ರೆಸಾರ್ಟ್‌ ಮತ್ತು ಹೋಟೆಲ್‌ಗ‌ಳಿಗೆ ಪ್ರತ್ಯೇಕವಾಗಿ ತೆರಳಿದರು.

ಏನೇನಾಯ್ತು?
– ಕೈಗೆ ಕಪ್ಪು ಪಟ್ಟಿ, ಗಾಂಧಿ ಟೋಪಿ ಧರಿಸಿ ಪ್ರತಿಭಟನೆ
– ಎರಡೂ ಪಕ್ಷಗಳ ನಾಯಕರಿಂದ ಕುಳಿತಲ್ಲೇ ಸಮಾಲೋಚನೆ
– ಕೇಂದ್ರದ ಕೈಗೊಂಬೆಯಂತೆ ನಡೆದುಕೊಂಡ ರಾಜ್ಯಪಾಲರು ಎಂದು ಆರೋಪ
– ವಿಜಯನಗರ ಶಾಸಕ ಆನಂದ್‌ ಸಿಂಗ್‌, ಮಸ್ಕಿ ಶಾಸಕ ಪ್ರತಾಪ್‌ ಗೌಡ ಪಾಟೀಲ್‌ ಗೈರು
– ಬಿಜೆಪಿಯ 15 ಶಾಸಕರು ನಮ್ಮೊಂದಿಗೆ ಬರುತ್ತಾರೆ ಎಂದ ಎಚ್‌ಡಿಕೆ
– ಧರಣಿ ಮುಗಿಸಿ ನೇರ ರೆಸಾರ್ಟ್‌ನತ್ತ ಹೆಜ್ಜೆ ಹಾಕಿದ ಕೈ, ಜೆಡಿಎಸ್‌ ನಾಯಕರು

Advertisement

Udayavani is now on Telegram. Click here to join our channel and stay updated with the latest news.

Next