ದೇವನಹಳ್ಳಿ: ಪುರಸಭೆ 14ನೇ ವಾರ್ಡ್‌ನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಾಗೂ ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿರುವ ಜನಪರ ಕಾರ್ಯಕ್ರಮಗಳನ್ನು ಪ್ರತಿ ಮನೆಗೆ ತಲುಪಿಸಬೇಕು ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್ ತಿಳಿಸಿದರು.
ಮಾ.29ರಂದು 14ನೇ ವಾರ್ಡ್‌ಗೆ ನಡೆಯುತ್ತಿರುವ ಉಪಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಶಶಿಕಲಾ ಚಂದ್ರಶೇಖರ್ ಪರ ನಗರದ ನಗರೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಹಸಿವು ಮುಕ್ತ ರಾಜ್ಯ ಮಾಡಿದ ಹೆಗ್ಗಳಿಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲುತ್ತದೆ. ಈಗಿನ ಬಿಜೆಪಿ ಸರ್ಕಾರ 7 ಕೇಜಿ ಇದ್ದ ಪಡಿತರ ಅಕ್ಕಿಯನ್ನು 5 ಕೇಜಿಗೆ ಇಳಿಸಿದೆ. ಈ ಮೂಲಕ ಬಡವರ ವಿರೋಧಿ ಸರ್ಕಾರವಾಗಿದೆ ಎಂದು ದೂರಿದರು.
ಶಶಿಕಲಾ ವಾರ್ಡ್‌ನಲ್ಲಿ ಉತ್ತಮ ಕೆಲಸ ಮಾಡುತ್ತಾ ರೆಂಬ ಭರವಸೆ ಇದೆ. ಹಲವು ಮಹಿಳಾ ಸಂಘಕ್ಕೆ ಅಧ್ಯಕ್ಷರಾಗಿ ಹಲವು ಜನಪರ ಕೆಲಸ ಮಾಡುತ್ತಿದ್ದಾರೆ. ಇವರನ್ನು ಈ ವಾರ್ಡ್‌ನ ಜನತೆ ಆಶೀರ್ವದಿಸಿದರೆ ಮತ್ತಷ್ಟು ವಾರ್ಡ್ ಅಭಿವೃದ್ಧಿಗೊಳ್ಳಲಿವೆ ಎಂದು ಹೇಳಿದರು.
ಅಭ್ಯರ್ಥಿ ಶಶಿಕಲಾ ಮಾತನಾಡಿ, ವಾರ್ಡ್‌ನ ಸರ್ವ ತೋಮುಖ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡುತ್ತೇನೆ. ಜನರ ಸಮಸ್ಯೆಗಳಿಗೆ ಸ್ಪಂದಿ ಸುವ ಕೆಲಸ ಮಾಡಲಾಗು ವುದು. 14ನೇ ವಾರ್ಡ್ ಅನ್ನು ಮಾದರಿಯನ್ನಾಗಿಸು ತ್ತೇನೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತೆ ಯಾಗಿ ಹಿರಿಯರ ಮಾರ್ಗದರ್ಶನ, ಮುಖಂಡರು ಮತ್ತು ಕಾರ್ಯಕರ್ತರ ಸಹಕಾರ ದೊಂದಿಗೆ ವಾರ್ಡ್ ನಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಶ್ರಮಿಸಲಾಗುವುದು ಎಂದು ಹೇಳಿದರು.
ಕಸಬಾ ವಿಎಸ್‌ಎಸ್‌ಎನ್ ಅಧ್ಯಕ್ಷ ಜಿ.ಎನ್.ವೇಣು ಗೋಪಾಲ್ ಮಾತನಾಡಿ, ಈಗಾಗಲೇ ಪುರಸಭೆಯಲ್ಲಿ ಶೇ.50 ಮಹಿಳೆಯರಿಗೆ ಮೀಸಲಿಟ್ಟಿದೆ. ಆದರೆ, ಮಹಿಳೆಯರು ವಾರ್ಡ್‌ನಲ್ಲಿ ಉತ್ತಮ ಕೆಲಸ ಕಾರ್ಯ ನಿರ್ವಹಿಸುತ್ತಾರೆಂಬ ಭರವಸೆಯಿಂದ ಕಾಂಗ್ರೆಸ್‌ನಿಂದ ಶಶಿಕಲಾ ಚಂದ್ರಶೇಖರ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ ಎಂದರು.
ಈ ವೇಳೆಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಆರ್.ರವಿಕುಮಾರ್, ಕೆಪಿಸಿಸಿ ಸದಸ್ಯ ಚಿನ್ನಪ್ಪ, ಪುರಸಭಾಧ್ಯಕ್ಷೆ ರೇಖಾ, ಸದಸ್ಯ ವೇಣುಗೋಪಾಲ್, ಮುನಿಕೃಷ್ಣ, ಮಂಜುನಾಥ್, ಪುರಸಭಾ ಮಾಜಿ ಸದಸ್ಯ ಡಿ.ಎನ್.ವೆಂಕಟೇಶ್, ಮುಖಂಡರಾದ ಮುನಿಕೃಷ್ಣ, ಮುನಿರಾಜ್, ನವೀನ್, ನಾಗೇಶ್, ನಯೀಮ್, ಮಂಜುನಾಥ್, ಚಂದ್ರಶೇಖರ್, ಕೆಂಪರಾಜು, ಮಹಿಳೆಯರು ಮತ್ತಿತರರು ಇದ್ದರು.