ಹಾಗೂ ಜೆಡಿಎಸ್ ನಾಯಕರು ಗುರುವಾರ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
Advertisement
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಎಐಸಿಸಿ ಮುಖಂಡರಾದ ಗುಲಾಂ ನಬಿ ಆಝಾದ್, ಅಶೋಕ್ ಗೆಹೊÉàಟ್,ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ನೂತನ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.
Related Articles
ರೆಸಾರ್ಟ್ ಮತ್ತು ಹೋಟೆಲ್‌ಗಳಿಗೆ ಪ್ರತ್ಯೇಕವಾಗಿ ತೆರಳಿದರು. ಪ್ರತಿಭಟನೆಯಲ್ಲಿ ವಿಜಯನಗರ(ಹೊಸಪೇಟೆ) ಶಾಸಕ ಆನಂದ್ ಸಿಂಗ್ ಹಾಗೂ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಗೈರು ಹಾಜರಾಗಿದ್ದರು. ಪ್ರತಿಭಟನೆ ಸಂದರ್ಭದಲ್ಲಿಯೂ ನಾಯಕರು ಇಬ್ಬರೂ ಶಾಸಕ ರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ, ಇಬ್ಬರೂ ಸಂಪರ್ಕಕ್ಕೆ ಸಿಕ್ಕಿಲ್ಲವೆಂದು ತಿಳಿದು ಬಂದಿದೆ.
Advertisement
ನಾವೆಲ್ಲ ಒಟ್ಟಾಗಿದ್ದೇವೆ: ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಪಾಲರು ಬಹುಮತ ಇಲ್ಲದ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಿ ಪ್ರಮಾದ ಮಾಡಿದ್ದಾರೆ. ಯಡಿಯೂರಪ್ಪ ಭಂಡತನದಿಂದ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಹುಮತ ಸಾಬೀತು ಪಡಿಸುವಲ್ಲಿ ಅವರಿಗೆ ಸೋಲಾಗುತ್ತದೆ. ನಾವೆಲ್ಲರೂ ಒಟ್ಟಾಗಿದ್ದೇವೆ. ಕುಮಾರಸ್ವಾಮಿಯನ್ನು ಸಿಎಂ ಮಾಡಲು ನನಗೇನೂ ಮುಜುಗರವಿಲ್ಲ. ಮುಕ್ತಮನಸ್ಸಿನಿಂದಲೇ ಅವರಿಗೆ ಬೆಂಬಲ ಸೂಚಿಸಿದ್ದೇವೆ. ಎಲ್ಲ ಶಾಸಕರು ನಮ್ಮ ಜತೆಗಿದ್ದಾರೆ. ಆನಂದ್ ಸಿಂಗ್ ಖಾಸಗಿ ಕೆಲಸದ ಮೇಲೆ ದೆಹಲಿಗೆ ಹೋಗಿದ್ದಾರೆ.
ಪ್ರತಾಪ್‌ಗೌಡ ಪಾಟೀಲ್‌ಗೆ ಅನಾರೋಗ್ಯ ಕಾರಣದಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದರು. ಶಾಸಕರ ಖರೀದಿಗೆ ಯತ್ನ: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, 2008ರಲ್ಲಿ ಬಿಜೆಪಿಯವರು 30 ಕೋಟಿ ರೂ.ನೀಡಿ ಶಾಸಕರನ್ನು ಖರೀದಿಸಿದ್ದರು. ಈಗ ದುಡ್ಡು ತೆಗೆದುಕೊಂಡು ಅವರ ಜತೆಗೆ ಹೋಗಲು ಯಾರೂ ಸಿದಟಛಿರಿಲ್ಲ. ಬಿಜೆಪಿಯ ಸುಮಾರು 15 ಶಾಸಕರು ನಮ್ಮ ಜತೆಗೆ ಬರಲು ಸಿದ್ಧರಿದ್ದಾರೆ ಎಂದರು. ಶಾಸಕ ಪ್ರತಾಪಗೌಡ ನಾಟ್ ರೀಚೆಬಲ್
ರಾಯಚೂರು: ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ಸೇರಿಸಲು ಬಿಜೆಪಿ ಆಪರೇಷನ್ ಕಮಲಕ್ಕೆ ಕೈ
ಹಾಕಿದ್ದು, ಜಿಲ್ಲೆಯ ಕಾಂಗ್ರೆಸ್ ಶಾಸಕರು ಗಾಳಕ್ಕೆ ಸಿಲುಕಿದ್ದಾರಾ ಎಂಬ ಸಂಶಯ ಮೂಡಿದೆ. ಕಾಂಗ್ರೆಸ್‌ನಿಂದ
ಸ್ಪ ರ್ಧಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಬುಧವಾರದಿಂದಸಂಪರ್ಕಕ್ಕೆ ಸಿಗದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ, ಶಾಸಕರು ಕಾಂಗ್ರೆಸ್ ಜತೆ ಇರುವುದಾಗಿ ಮುಚ್ಚಳಿಕೆ ನೀಡಿದ್ದಾರೆ. ಆದರೆ, ಈಗ ಸಂಪರ್ಕಕ್ಕೆ ಸಿಗುತ್ತಿಲ್ಲ. ಶುಕ್ರವಾರದೊಳಗೆ ಅವರಿಂದ ಸ್ಪಷ್ಟನೆ ಸಿಗದಿದ್ದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಅವರಿಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಬಿಡಲ್ಲ: ಡಿ.ಎಸ್. ಹೂಲಗೇರಿ
ಲಿಂಗಸುಗೂರು: “ಯಾವುದೇ ಪಕ್ಷಕ್ಕೆ ಹೋಗುವ ಅಗತ್ಯತೆ ನನಗಿಲ್ಲ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ’ ಎಂದು ಶಾಸಕ ಡಿ.ಎಸ್. ಹೂಲಗೇರಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಅವರು, “ಆಪರೇಷನ್ ಕಮಲಕ್ಕೆ ಒಳಗಾಗಿ ದ್ದಾರೆಂದು ವಿರೋಧಿಗಳು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಪಕ್ಷದ ಹೈಕಮಾಂಡ್ ಜತೆಗೆ ನಾನು ಇದ್ದೇನೆ. ಮೊದಲಿನಿಂದಲೂ ಪಕ್ಷದ ನಿಷ್ಠಾವಂತ ಕಾರ್ಯ ಕರ್ತನಾಗಿ ಪಕ್ಷ ಕಟ್ಟುವ ಕೆಲಸ ಮಾಡಿದ್ದೇನೆ. ಯಾವುದೇ ಆಸೆ, ಆಮಿಷಕ್ಕೊಳಗಾಗಿ ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ. ಹೈಕಮಾಂಡ್ ಸೂಚನೆಯಂತೆ ನಾನು ನಡೆದುಕೊಳ್ಳುತ್ತೇನೆ. ಕ್ಷೇತ್ರದ ಜನತೆ ಸುಳ್ಳು ವದಂತಿಗೆ ಕಿವಿಗೊಡಬಾರದು’ ಎಂದರು. ಬಿಜೆಪಿ ಸೇರ್ಪಡೆ ಸುಳ್ಳು: ದರ್ಶನಾಪುರ
ಶಹಾಪುರ: “ನಾನು ಬಿಜೆಪಿಗೆ ಬೆಂಬಲ ನೀಡುವುದಾಗಿ ಹಬ್ಬಿಸಿದ ಸುದ್ದಿ ಸುಳ್ಳು’ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸ್ಪಷ್ಟಪಡಿಸಿದ್ದಾರೆ. “ಉದಯವಾಣಿ’ ಜತೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ದರ್ಶನಾಪುರ ಅವರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆಂದು ಸುಳ್ಳು ವದಂತಿ ಹಬ್ಬಿದ್ದು, ಕಾರ್ಯಕರ್ತರು ಮತ್ತು ಪ್ರಮುಖರಿಂದ ದೂರವಾಣಿ ಕರೆ ಬರುತ್ತಿವೆ. ಕ್ಷೇತ್ರದಲ್ಲಿ ಹಬ್ಬಿರುವ ಸುಳ್ಳು ವದಂತಿಗೆ ಯಾರೂ ಕಿವಿಗೊಡಬಾರದು. 2008ರಿಂದಲೂ ಬಿಜೆಪಿ ಎಷ್ಟೇ ಆಮಿಷ ಒಡ್ಡಿದರೂ ನಾನು ಬಿಜೆಪಿ ಸೇರ್ಪಡೆಗೆ ಮನಸ್ಸು ಮಾಡಿಲ್ಲ. ಪ್ರಸ್ತುತ ಕಾಂಗ್ರೆಸ್‌ನಿಂದ ನಾನು 30 ಸಾವಿರಕ್ಕೂ ಅ ಧಿಕ ಮತಗಳಿಂದ ಗೆಲುವು ಸಾಧಿಸಿದ್ದು, ಜನರ ಆಶೀರ್ವಾದ ಧಿಕ್ಕರಿ ಸುವ ಕೆಲಸ ಮಾಡುವುದಿಲ್ಲ. ಅಲ್ಲದೆ, ಅಧಿಕಾರ ಮತ್ತು ಹಣದ ಆಮಿಷಕ್ಕೆ ನಾನು ಎಂದಿಗೂ ಬಗ್ಗುವವನಲ್ಲ. ಅಧಿಕಾರ ಇರಲಿ, ಬಿಡಲಿ ಕಾಂಗ್ರೆಸ್ ತೊರೆಯುವ ಕೆಲಸ ಮಾಡಲ್ಲ. ಪಕ್ಷಕ್ಕೆ ನಿಷ್ಠಾವಂತನಾಗಿ ಇರುತ್ತೇನೆ ಎಂದು ತಿಳಿಸಿದ್ದಾರೆ.