ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿಯ ಸಂಭ್ರಮಾಚರಣೆ ಮಂಗಳವಾರ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 20 ಮಂದಿ ಸಾಧಕರು, ಕೊರೊನಾ ವಾರಿಯರ್ಸ್‌ಗಳಾಗಿ ದುಡಿದ ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರನ್ನು ಸಮ್ಮಾನಿಸಲಾಯಿತು.
ಆರ್‌ಎಸ್‌ಎಸ್ ಪ್ರಮುಖ ಪಿ.ಎಸ್. ಪ್ರಕಾಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಂಭ್ರಮ ಮತ್ತು ಸಂತೋಷಕ್ಕೆ ಮತ್ತೂಂದು ಹೆಸರು ದೀಪಾವಳಿ. ಮನೆ ಮಂದಿ ಕೂಡಿ ಸಂಭ್ರಮಿಸುವ ಈ ಹಬ್ಬ ಬಾಂಧವ್ಯವನ್ನೂ ಗಟ್ಟಿಗೊಳಿಸುತ್ತದೆ ಎಂದರು.
ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ವ್ಯಕ್ತಿಯ ಬದುಕಿನ ಅಜ್ಞಾನ ದೂರವಾಗಿ ಸುಜ್ಞಾನವನ್ನು ಬೆಳಗುವ ಸಂದೇಶವನ್ನು ಬೆಳಕಿನ ಹಬ್ಬ ದೀಪಾವಳಿ ಸಾರುತ್ತದೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ದೀಪಾವಳಿ ಮತ್ತು ಕರ್ನಾಟಕ ರಾಜ್ಯೋತ್ಸವದೊಂದಿಗೆ ಸಾಧಕ ರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಪ್ರಾಧಿಕಾರವು ನಡೆಸಿದೆ ಎಂದರು.
ಶಾಸಕ ಲಾಲಾಜಿ ಮೆಂಡನ್, ಮೇಯರ್ ಪ್ರೇಮಾನಂದ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ಪ್ರಮುಖರಾದ ಸುರೇಶ್ಚಂದ್ರ ಶೆಟ್ಟಿ, ಕರುಣಾಕರ ಶೆಟ್ಟಿ, ದೇವಿಕಿರಣ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಲೀಲಾವತಿ ಪ್ರಕಾಶ್, ಪ್ರವೀಣ್ ಶೆಟ್ಟಿ, ಸುಧೀರ್ ಶೆಟ್ಟಿ,
ಪೂಜಾ ಪೈ ಮುಂತಾದವರು ಉಪಸ್ಥಿತರಿದ್ದರು.
ಸಾಧಕರಿಗೆ ಸಮ್ಮಾನ
ಸಾಧಕರಾದ ಡಾ| ಶಶಿಕಿರಣ್, ಡಾ| ಭಾಸ್ಕರ ಕೋಟ್ಯಾನ್, ಡಾ| ಸಾವಿತ್ರಿ, ಡಾ| ಗಿರೀಶ್ ಭಾರಧ್ವಾಜ್, ಮೋಹಿನಿ, ಅನಿತಾ, ದುರ್ಗಾಮಣಿ, ಶಕುಂತಳಾ ರಾವ್, ಸುಶ್ಮಿತಾ, ವಿನಯ, ಚಂದ್ರಿಕಾ, ಸಂಧ್ಯಾ, ಚೇತನ್ ಎಚ್.ಕೆ., ಕೃಷ್ಣ, ಚಂದ್ರಹಾಸ್ ಕೆ., ಲೋಕೇಶ್, ಪುರುಷೋತ್ತಮ ಪೂಜಾರಿ, ಗಣೇಶ್ ಕುಲಾಲ್, ಪ್ರೊ| ರಾಮಚಂದ್ರ ಭಟ್ ಅವರನ್ನು ಸಮ್ಮಾನಿಸಲಾಯಿತು.