Advertisement

ಲೋಕಾ ಚುನಾವಣೆ: ಕಾಂಗ್ರೆಸ್‌ ಆಂತರಿಕ ಸಮೀಕ್ಷೆ ಪ್ರಕಾರ ಬಿಜೆಪಿಗೆ ಸೋಲು: ರಾಹುಲ್‌

09:23 AM May 06, 2019 | Sathish malya |

ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಯ ನಾಲ್ಕು ಹಂತಗಳ ಮತದಾನ ಮುಗಿದಿರುವ ಈ ಸಂದರ್ಭದಲ್ಲಿ ತನ್ನ ಪಕ್ಷ ನಡೆಸಿರುವ ಆಂತರಿಕ ಸಮೀಕ್ಷೆ ಪ್ರಕಾರ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಸೋಲಲಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

Advertisement

ಈ ಸಂದರ್ಭದಲ್ಲಿ ಭೀತರಾಗಿರುವ ಪ್ರಧಾನಿ ವಿರೋಧ ಪಕ್ಷಗಳ ದಾಳಿಯನ್ನು ಎದುರಿಸಲು ಅಸಮರ್ಥರಿರುವುದನ್ನು ತಾನು ಕಾಣುತ್ತಿದ್ದೇನೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಪಕ್ಷದ ಇಲ್ಲಿನ ಪ್ರಧಾನ ಕಾರ್ಯಾಲಯದಲ್ಲಿ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಐದು ವರ್ಷಗಳ ಹಿಂದೆ ಮೋದಿಯನ್ನು ಸೋಲಿಸಲಾಗದು ಎಂದು ಹೇಳಲಾಗುತ್ತಿತ್ತು ಮತ್ತು ಮುಂದಿನ 10 – 15 ವರ್ಷಗಳ ಕಾಲ ಆವರೇ ಆಡಳಿತ ನಡೆಸುವರು ಎನ್ನಲಾಗುತ್ತಿತ್ತು; ಆದರೆ ಕಾಂಗ್ರೆಸ್‌ ಈಗ ಅವರನ್ನು ಧ್ವಂಸಗೊಳಿಸಿದೆ ಎಂದು ಹೇಳಿದರು.

ಬಿಜೆಪಿಯ ಟೊಳ್ಳು ಕಟ್ಟಡ ಇನ್ನು ಹದಿನೈದು ದಿನಗಳ ಒಳಗೆ ಕುಸಿದು ಬೀಳಲಿದೆ ಎಂದು ರಾಹುಲ್‌ ಭವಿಷ್ಯ ನುಡಿದರು. ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್‌ ನಾಯಕರಾದ ಪಿ ಚಿದಂಬರಂ, ಅಹ್ಮದ್‌ ಪಟೇಲ್‌, ಆನಂದ್‌ ಶರ್ಮಾ ಮತ್ತು ರಣದೀಪ್‌ ಸುರ್‌ಜೇವಾಲಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next