Advertisement

ವಸತಿ ಯೋಜನೆಯಲ್ಲಿ ಗೊಂದಲ-ಪ್ರತಿಭಟನೆ

03:16 PM Nov 23, 2017 | Team Udayavani |

ಸಿದ್ದಾಪುರ: ಕರಾವಳಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತಾ ಆಳ್ವಾರ ಪ್ರಯತ್ನ, ಶ್ರಮದಿಂದ ಬಸವ ವಸತಿ ಯೋಜನೆಯಲ್ಲಿ ತಾಲೂಕಿಗೆ 87 ಮನೆಗಳು ವಸತಿ ಸಚಿವರ ವಿವೇಚನಾ ಕೋಟಾದಲ್ಲಿ ಮಂಜೂರಾಗಿದ್ದು, ಅದನ್ನು ಮುಂಚಿತವಾಗಿ ಆಯ್ಕೆ ಮಾಡಿದ ಫಲಾನುಭವಿಗಳಿಗೆ ನೀಡುವಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಗೊಂದಲ ಸೃಷ್ಟಿಸುತ್ತಿದ್ದಾರೆ. ಬಿಜೆಪಿ ಜನಪ್ರತಿನಿಧಿಗಳ ಮಾತು ಕೇಳಿ ಮನೆಹಂಚಿಕೆ ಮಾಡುತ್ತಿಲ್ಲ. ಈ ಕುರಿತು ಸರಕಾರದ ಆದೇಶ ಪಾಲಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು
ಎಂದು ತಾಪಂ ಸ್ಥಾಯಿ ಸಮಿತಿ ಮಾಜಿ ಉಪಾಧ್ಯಕ್ಷ, ಕಾಂಗ್ರೆಸ್‌ ಧುರೀಣ ವಸಂತ ನಾಯ್ಕ ಎಚ್ಚರಿಸಿದರು.

Advertisement

ಅವರು ತಾಪಂ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿ ವಸತಿ ಸಚಿವರಿಂದ ವಸತಿ ಮಂಜೂರಾಗಿಬೇಕಾದರೇ ಅರ್ಹ ಫಲಾನುಭವಿಗಳ ಯಾದಿ ಕೊಡಲಾಗಿತ್ತು. ಸಚಿವರ ವಿವೇಚನಾ ಕೋಟಾದಲ್ಲಿ ಅವರ ಹೆಸರಿಗೆ ಮನೆ ಮಂಜೂರಾಗಿವೆ. ಹಾಗಿದ್ದರೂ ಬಿಜೆಪಿಯ ಕೆಲವು ಚುನಾಯಿತ ಸದಸ್ಯರು ಅಧಿಕಾರಿಗಳ ದಿಕ್ಕು ತಪ್ಪಿಸುತ್ತಿದ್ದಾರೆ. ತಾಲೂಕಿನ ಗ್ರಾಪಂ ಅಧ್ಯಕ್ಷರ ಒಕ್ಕೂಟದ ಅಧ್ಯಕ್ಷ ವೀರಭದ್ರ ನಾಯ್ಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು. 

ಜಿಪಂ ಸದಸ್ಯೆ ಸುಮಂಗಲಾ ನಾಯ್ಕ ಮಾತನಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿಯೇ ಮಂಜೂರಾದ ಮನೆಗಳಿಗೆ ತಡೆ ಮಾಡುತ್ತಿರುವದು ಸರಿಯಲ್ಲ. ಅಧಿಕಾರಿಗಳು ಸರಕಾರದ ಆದೇಶ ಪಾಲಿಸಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್‌ ಪ್ರಮುಖ, ವಕೀಲ ಸತೀಶ ನಾಯ್ಕ ಶಿರಸಿ ಮಾತನಾಡಿ, ಅರ್ಹರನ್ನು ಕಡೆಗಣಿಸಿ ಈಗ ತಮಗೆ ಬೇಕಾದವರಿಗೆ ಕೊಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಸರಕಾರದಿಂದ ಮಂಜೂರಾದ ಶೇ.60ರಷ್ಟು ಮನೆಗಳು ಶಾಸಕರ ಕಚೇರಿಯಲ್ಲೇ ಹಂಚಿಕೆಯಾಗುತ್ತವೆ. ಈಗ ಮಂಜೂರಿಯಾದ ಒಂದೇಒಂದು ಮನೆಯನ್ನು ಬೇರೆಯವರಿಗೆ ಕೊಡಲು ಬಿಡೋದಿಲ್ಲ ಎಂದರು.

ತಾಪಂ ಇಓ ಎಸ್‌.ಎಸ್‌. ಭಟ್ಟ ಮನವಿ ಸ್ವೀಕರಿಸಿ ಈಗಾಗಲೇ ಪಿಡಿಓಗಳಿಗೆ ಸೂಕ್ತ ನಿರ್ದೇಶನ ನೀಡಿದ್ದೇನೆ ಎಂದರು. ತಾಪಂ ಸದಸ್ಯ ನಾಸಿರ್‌ಖಾನ್‌, ವಿವೇಕ ಭಟ್ಟ, ಪ್ರಮುಖರಾದ ಸುಬ್ರಾಯಭಟ್ಟ ಗಡಿಹಿತ್ಲು, ಮುನಾವರ್‌ ಗುರ್ಖಾರ್‌, ಚಂದ್ರಕಾಂತ ನಾಯ್ಕ, ರಾಘವೇಂದ್ರ ನಾಯ್ಕ ಬೆಳಸೆ, ನಾಗರಾಜ ಮುಡೇಶ್ವರ, ವಿವೇಕ ಪೂಜಾರಿ, ರಾಘವೇಂದ್ರ ಭಟ್ಟ, ಲಲಿತಾ ನಾಯ್ಕ ಹಾಗೂ
ಫಲಾನುಭವಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next