Advertisement

ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಗೊಂದಲ

03:01 PM Jun 05, 2020 | Suhan S |

ಹಾವೇರಿ: ಜಿಲ್ಲೆಯಲ್ಲಿ ಕೋವಿಡ್‌-19 ಸೋಂಕು ಗುರುವಾರ ಎಷ್ಟು ಜನರಲ್ಲಿ ದೃಢಪಟ್ಟಿದೆ ಎಂಬ ಮಾಹಿತಿ ಸ್ಪಷ್ಟತೆ ಇಲ್ಲದೇ ಕೆಲಹೊತ್ತು ಗೊಂದಲಕ್ಕೆಡೆ ಮಾಡಿಕೊಟ್ಟ ಪ್ರಸಂಗ ನಡೆಯಿತು.

Advertisement

ಜಿಲ್ಲಾಡಳಿತವು ಗುರುವಾರ ಜಿಲ್ಲೆಯಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ನೀಡಿದರೆ, ರಾಜ್ಯ ಆರೋಗ್ಯ ಇಲಾಖೆ ಬುಲೆಟಿನ್‌ ಮೂಲಕ ಒಬ್ಬರಿಗೆ ಮಾತ್ರ ಸೋಂಕು ದೃಢಪಟ್ಟಿದೆ ಎಂದು ಮಾಹಿತಿ ನೀಡಿತು. ಜಿಲ್ಲಾಡಳಿತ ನೀಡಿದ ಇಬ್ಬರು ಸೋಂಕಿತರ ವಿವರ ಮತ್ತು ರಾಜ್ಯ ಆರೋಗ್ಯ ಇಲಾಖೆ ನೀಡಿದ ಸೋಂಕಿತನ ವಿವರ ಬೇರೆ ಬೇರೆಯಾಗಿತ್ತು. ಜತೆಗೆ ರಾಜ್ಯ ಆರೋಗ್ಯ ಇಲಾಖೆ ನಮೂದಿಸಿದ ಸೋಂಕಿತನ ಮಾಹಿತಿ ಜಿಲ್ಲಾಡಳಿತದ ಬಳಿ ಇರಲಿಲ್ಲ. ಇದುವೇ ಗೊಂದಲಕ್ಕೆ ಕಾರಣವಾಯಿತು.

ಜಿಲ್ಲಾಧಿಕಾರಿಗಳು ರಾಜ್ಯ ಆರೋಗ್ಯ ಇಲಾಖೆಯ ಬುಲೆಟಿನ್‌ ಬರುವ ಮೊದಲೇ ಮುಂಬಯಿಯಿಂದ ಬಂದಿದ್ದ ಮತ್ತೆ ಇಬ್ಬರಿಗೆ ಕೋವಿಡ್‌-19  ಸೋಂಕು ಇರುವುದು ದೃಢಪಟ್ಟಿದೆ. ಶಿಗ್ಗಾವಿ ಮೂಲದ 46 ವರ್ಷದ ಮಹಿಳೆ ಹಾಗೂ ಬಂಕಾಪುರ ಪಟ್ಟಣದ ಕಂಟೇನ್ಮೆಂಟ್‌ ಪ್ರದೇಶದ 63 ವರ್ಷದ ವ್ಯಕಿಗೆ ಸೋಂಕು ದೃಢಪಟ್ಟಿದೆ. ಈ ಸೋಂಕಿತರ ಕ್ರಮಾಂಕ ಬರುವುದೊಂದೇ ಬಾಕಿ ಇದೆ ಎಂದು ತಿಳಿಸಿದ್ದರು.

ಆದರೆ, ಸಂಜೆ ಬಂದ ರಾಜ್ಯ ಬುಲೆಟಿನ್‌ನಲ್ಲಿ ಹಾವೇರಿ ಜಿಲ್ಲೆಯಲ್ಲಿ ಒಂದು ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗಿದೆ. ದೆಹಲಿಯಿಂದ ಬಂದ 30 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ ಎಂದು ಉಲ್ಲೇಖವಿರುವುದು ಗೊಂದಲವುಂಟುಮಾಡಿತು. ಈ ಕುರಿತು ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಗುರುವಾರ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಆದರೆ, ಈ ವಿವರ ಬುಲೆಟಿನ್‌ನಲ್ಲಿ ನಮೂದಾಗಿಲ್ಲ. ನಾಳೆಯ ಬುಲೆಟಿನ್‌ನಲ್ಲಿ ರೋಗಿಯ ಸಂಖ್ಯೆ ನಮೂದಾಗಲಿದೆ. ಗುರುವಾರ ಬುಲೆಟಿನ್‌ ನಲ್ಲಿ ನಮೂದಾಗಿರುವ ಒಂದು ಪ್ರಕರಣ ಜಿಲ್ಲೆಯದಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next