Advertisement

ಇಳಕಲ್ ಮತ ಪೆಟ್ಟಿಗೆಯಲ್ಲಿ ಗೊಂದಲ: ತನಿಖೆಗೆ ಪಕ್ಷೇತರ ಅಭ್ಯರ್ಥಿ ಆಗ್ರಹ

12:55 PM Jun 15, 2022 | Team Udayavani |

ಬೆಳಗಾವಿ: ವಾಯುವ್ಯ ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಮತ ಎಣಿಕೆಯಲ್ಲಿ ಏರುಪೇರಾಗಿದ್ದು, ಬಾಗಲಕೋಟೆಯ ಇಳಕಲ್ ಮತ ಪೆಟ್ಟಿಗೆಯಲ್ಲಿ ಗೊಂದಲ ನಿರ್ಮಾಣವಾಗಿದೆ.

Advertisement

ಮತ ಪೆಟ್ಟಿಗೆಯಲ್ಲಿ 5 ಹೆಚ್ಚಿನ ಮತವಿರುವ ಆರೋಪವಿದ್ದು, 71 ಮತವಿರುವ ಪೆಟ್ಟಿಗೆಯಲ್ಲಿ 76 ಮತಗಳು ಇವೆ ಎನ್ನಲಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಪರ 5 ಮತಗಳು ಹೆಚ್ಚಾಗಿರುವುದು ಸ್ಪಷ್ಟವಾಗಿದೆ. ಈ ಬಗ್ಗೆ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎನ್. ಬಿ.ಬನ್ನೂರ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಮತಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗಂಭೀರ ಚರ್ಚೆ ಮಾಡಲಾಗುತ್ತಿದ್ದು, ಮತ ಪೆಟ್ಟಿಗೆಯಲ್ಲಿ 5 ಮತ ಹೆಚ್ಚು ಬಂದಿದೆ ಎಂದು ತಿಳಿದಿದೆ.  ಅದಕ್ಕೆ ನಾವು ವಿರೋಧ ಮಾಡಿದ್ದು, ಎಲ್ಲ ಅಭ್ಯರ್ಥಿಗಳು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಸೂಕ್ತ ತನಿಖೆ ಆಗಬೇಕು ಎಂದು ಎನ್.ಬಿ.ಬನ್ನೂರ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ದಾಖಲೆಯ ಎಂಟನೇ ಬಾರಿಗೆ ಮೇಲ್ಮನೆ ಪ್ರವೇಶಿಸಿದ ಬಸವರಾಜ ಹೊರಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next