Advertisement
ಕಾರವಾರದಲ್ಲಿ ಗುರುವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಮಾಡಿದ ಅವರು ಬಿಜೆಪಿ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಜನರು ಬಂದಿದ್ದರು. ಬಿಗಿ ಭದ್ರತಾ ಕಾರಣ ನೀರನ್ನು ಸಹ ಮಾಧ್ಯಮದವರಿಗೆ ಕೊಡಲಾಗದ್ದಕ್ಕೆ ಕ್ಷಮೆಯಾಚಿಸಿದರು. ಪಕ್ಷದ ಅಭ್ಯರ್ಥಿಯೋರ್ವರು, ಅನ್ಯ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಕಣಕ್ಕೆ ನಿಂತಿರುವ ಗೆಳೆಯನ ಗೆಲುವಿಗೆ ಯತ್ನಿಸಿದ ಸುದ್ದಿ ಇದೆಯಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧ್ಯಕ್ಷರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು. ಕಾರವಾರ ಅಭ್ಯರ್ಥಿ ವಿರುದ್ಧ ಪಕ್ಷೇತರನನ್ನು ನಿಲ್ಲಿಸಿದ ಸಂಗತಿಗೂ ಸಹ ವೆಂಕಟೇಶ ನಾಯಕ್ ಉತ್ತರಿಸಿ, ಈ ಬಗ್ಗೆ ಮಾಹಿತಿ ಇಲ್ಲ. ಅಂಥದ್ದೇನು ಪಕ್ಷದಲ್ಲಿ ಇಲ್ಲ ಎಂದರು.
Related Articles
Advertisement
ಬಿಜೆಪಿ ಬಾಗಿಲು ತಟ್ಟಿದ್ದ ಅಸ್ನೋಟಿಕರ್; ಬಿಜೆಪಿ ಬಾಗಿಲು ತಟ್ಟುತ್ತಿದ್ದ ಹಾಗೂ ಈ ಸಲ ಬಿಜೆಪಿ ಟಿಕೆಟ್ ಗೆ ಯತ್ನಿಸಿದ್ದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಇವತ್ತಿನಿಂದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ನಿಂತಿದ್ದರಲ್ಲಾ ಎಂಬ ಪ್ರಶ್ನೆಗೆ ಅವರು ಏನು ಅಂತ ಪಕ್ಷಕ್ಕೆ ಗೊತ್ತಿದೆ. ನಮ್ಮಲ್ಲಿ ಒಮ್ಮೆ ಹೊರ ಹಾಕಿದವರನ್ನು ಒಳಗೆ ತಗೋಳೋದು ಕಷ್ಟ. ಅವರು ಪಕ್ಷಾಂತರಿ. ಅವರ ಹಿನ್ನೆಲೆ ಕಾಂಗ್ರೆಸ್. ಹಾಗಾಗಿ ಅವರ ಬಗ್ಗೆ ನಾವು ಅಷ್ಟು ಯೋಚಿಸುವುದಿಲ್ಲ ಎಂದರು. ಅವರು ಯಾರ ಪ್ರಚಾರ ಮಾಡಿದರೂ ನಮಗೆ ಅಭ್ಯಂತರ ಇಲ್ಲ.ನಮ್ಮ ಅಭ್ಯರ್ಥಿ ಕಾರವಾರದಲ್ಲಿ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದರು .
ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ನಾಗರಾಜ ನಾಯಕ, ಮನೋಜ್ ಭಟ್, ರೇಶ್ಮಾ ಮಾಳ್ಸೇಕರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.