ಮುಂಡಗೋಡ: ಪಟ್ಟಣದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಶುಕ್ರವಾರ ಮತ್ತೆ 50 ವಿದ್ಯಾರ್ಥಿಗಳಿಗೆ ಮಂಗನ ಬಾವು ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡಿಸಿ ಸೂಚನೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮೂರು ದಿನ ಶಾಲೆಗೆ ರಜೆ ಘೋಷಿಸಿದ್ದಾರೆ.
Advertisement
ಕಳೆದ ಮೂರು ದಿನಗಳ ಹಿಂದೆ ಎಂಟು ವಿದ್ಯಾರ್ಥಿಗಳಲ್ಲಿ ಮಂಗನಬಾವು ಕಾಣಿಸಿಕೊಂಡಿತ್ತು. ನಂತರ ಪ್ರತಿದಿನ ಒಬ್ಬರಿಂದಒಬ್ಬರಿಗೆ ಹರಡುತ್ತ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿದೆ. ಶಂಕಿತ ಮಂಗನಬಾವು ಕಾಯಿಲೆ ತೀವ್ರಗೊಂಡ
ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಶಿರಸಿ ಸಹಾಯಕ ಕಮಿಷನರ್ ಕೆ.ವಿ. ಕಾವ್ಯಾರಾಣಿ, ತಹಶೀಲ್ದಾರ್ ಶಂಕರ ಗೌಡಿ, ತಾಪಂ ಇಒ ಟಿ.ವೈ.ದಾಸನಕೊಪ್ಪ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ವಸತಿ ಶಾಲೆಗೆ ಶುಕ್ರವಾರ ಭೇಟಿ ನೀಡಿದರು.
ಆರೋಗ್ಯವಾಗುವರೆಗೂ ಅವರ ಮೇಲೆ ಪಾಲಕರು ನಿಗಾ ವಹಿಸಬೇಕು ಎಂದು ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ|
ಸ್ವರೂಪರಾಣಿ ಪಾಟೀಲ ವಸತಿ ಶಾಲೆ ಪ್ರಾಚಾರ್ಯರಿಗೆ ಸೂಚಿಸಿದರು. ಎಸಿ ಭೇಟಿ
ಶಿರಸಿ ಉಪವಿಭಾಗಧಿಕಾರಿ ಕೆ.ವಿ. ಕಾವ್ಯಾರಾಣಿ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ವೈದ್ಯರು, ಶಿಕ್ಷಕರಲ್ಲಿ ಮಾಹಿತಿ ಪಡೆದುಕೊಂಡರು. ಅಡುಗೆ ಕೋಣೆ, ಮಕ್ಕಳ ಕೊಠಡಿಗಳನ್ನು ವೀಕ್ಷಿಸಿ, ಸ್ವತ್ಛತೆಗೆ ಹೆಚ್ಚಿನ ಒತ್ತು ನೀಡುವಂತೆ ಶಿಕ್ಷಕರಿಗೆ ಸೂಚಿಸಿದರು.
Related Articles
ಕರೆದುಕೊಂಡು ಹೋಗಲು ಶಾಲೆಯತ್ತ ದೌಡಾಯಿಸಿದರು. ಇನ್ನೂ ಕೆಲವು ವಿದ್ಯಾರ್ಥಿಗಳಿಗೆ ಪಾಲಕರನ್ನು ಫೋನ್ ಮೂಲಕ
ಕರೆಸಿ ಮಕ್ಕಳನ್ನು ಮನೆಗೆ ಕಳಿಸಿಕೊಡಲಾಯಿತು.
Advertisement
ವಿದ್ಯಾರ್ಥಿಗಳು ಈ ಕಾಯಿಲೆಯಿಂದ ಹೆದರುವ ಅವಶ್ಯಕತೆಯಿಲ್ಲ. ವೈದ್ಯರು ನೀಡುವ ಸಲಹೆಗಳನ್ನು ಪಾಲಿಸಬೇಕು. ದ್ರವರೂಪದ ಆಹಾರ ಸೇವಿಸಬೇಕು. ಬಿಸಿ ನೀರು ಕುಡಿಯಬೇಕು. ಕೆಲವರಿಗೆ ಗಂಟಲು ಕೆರೆದು ಜ್ವರ ಬರುತ್ತದೆ. ಚಳಿಗಾಲದಲ್ಲಿಬರುವುದು ಸಾಮಾನ್ಯ. ಮಂಗನ ಬಾವು ಬಗ್ಗೆ ಈಗಾಗಲೇ ಐದು ವಿದ್ಯಾರ್ಥಿಗಳ ರಕ್ತ ಹಾಗೂ ಗಂಟಲಿನ ದ್ರವ ತೆಗೆದು
ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಮಕ್ಕಳಿಗೆ ಮುಂಜಾಗ್ರತಾ ಕ್ರಮವಾಗಿ ಔಷಧಿ, ಮಾತ್ರೆ ನೀಡುತ್ತಿದ್ದೇವೆ.
ಡಾ| ಕಿರಣಕುಮಾರ ಮಕ್ಕಳ ತಜ್ಞ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಶಾಲೆಗೆ ಮೂರು ದಿನ ರಜೆ ನೀಡಲಾಗಿದೆ. ಮಕ್ಕಳನ್ನು ಪಾಲಕರ ಜತೆ ಮನೆಗೆ ಕಳಿಸಬೇಕು. ಗುಣಮುಖರಾದ ನಂತರ ಶಿಕ್ಷಕರು ಸೂಚನೆ ನೀಡಿದ ನಂತರ ಮರಳಿ ಶಾಲೆಗೆ ಬರಬೇಕು. ಶಂಕರ ಗೌಡಿ ತಹಶೀಲ್ದಾರ್, ಮುಂಡಗೋಡ