Advertisement

15ರಿಂದ ಮಹಾದೇವಿಯಕ್ಕಗಳ ಸಮ್ಮೇಳನ

01:47 PM Jul 13, 2017 | |

ಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿರುವ ಜಯನಗರ ಬಡಾವಣೆಯಲ್ಲಿನ ಅನುಭವ ಮಂಟಪದಲ್ಲಿ ಜು.15ರಿಂದ 
ಎರಡು ದಿನಗಳ ಕಾಲ 10ನೇ ಮಹಾದೇವಿಯಕ್ಕಗಳ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬೀದರನ ಅಕ್ಕ ಅನ್ನಪೂರ್ಣತಾಯಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಬಸವ ಸಮಿತಿ ಅಧ್ಯಕ್ಷೆ ಡಾ| ವಿಲಾಸವತಿ ಖೂಬಾ ಹೇಳಿದರು.

Advertisement

ಬುಧವಾರ ಅನುಭವ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿನ ಮಹಿಳೆಯರಲ್ಲಿನ ಅದರಲ್ಲೂ ಗೃಹಿಣಿಯರಲ್ಲಿನ ಸೂಪ್ತ ಪ್ರತಿಭೆ ಹೊರ ಹಾಕುವುದೆ ಸಮ್ಮೇಳನದ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಸಮ್ಮೇಳನಕ್ಕೂ ಮುನ್ನ ಹಲವಾರು ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಜು. 13ರಂದು ಬೆಳಗ್ಗೆ 11:00 ಗಂಟೆಗೆ ವಚನ ಕಂಠಪಾಠ, ಶರಣರ ಜನಪದ ಹಾಡು,
ಶರಣರ ಹಾಡುಗಳ ಅಂತ್ಯಾಕ್ಷರಿ, 14ರಂದು ಶರಣರ ವೇಷಭೂಷಣ ಸ್ಪರ್ಧೆ, ಶರಣರ ಭಾವಗೀತೆ, ನವಣಿ ಧಾನ್ಯದ ಅಡಿಗೆ, ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ ಎಂದರು. ಜು. 15ರಂದು ಬೆಳಗ್ಗೆ 8:00 ಗಂಟೆಗೆ ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮತ್ತು ಷಟಸ್ಥಲ ಧ್ವಜಾರೋಹಣವನ್ನು ಅನಸೂಯಾ ನಡಕಟ್ಟಿ ನೆರವೇರಿಸುವರು. ನಂತರ ಬಡಾವಣೆಯಲ್ಲಿ ಮಹಾದೇವಿಯಕ್ಕಗಳ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 11:00 ಗಂಟೆಗೆ ಅಕ್ಕನ ಬೆಳಗು ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅನಾವರಣಗೊಳಿಸುವರು. ಮಾಜಿ ಸಚಿವೆ ಡಾ| ಲೀಲಾದೇವಿ ಆರ್‌. ಪ್ರಸಾದ್‌ ಆಗಮಿಸಲಿದ್ದಾರೆ. ಅಕ್ಕ ಅನ್ನಪೂರ್ಣ ತಾಯಿ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.

ನಂತರ ಜರುಗುವ ಗೋಷ್ಠಿ-1ರಲ್ಲಿ ವಚನ ನಿರ್ವಚನ ರ್ಯಕ್ರಮ, ಗೋಷ್ಠಿ-2ರಲ್ಲಿ ಫ.ಗು. ಹಳಕಟ್ಟಿ, ಹಡೇìಕರ ಮಂಜಪ್ಪ, ಡಾ| ಬಿ.ಡಿ. ಜತ್ತಿ ಅವರ ಕುರಿತು ಭವಾನಿ ಚಟ್ನಳ್ಳಿ, ಶರಣಮ್ಮ ಪಾಟೀಲ, ಸಂಗೀತಾ ಹಿರೇಮಠ ಅನುಭಾವ ನೀಡಲಿದ್ದು, ಪ್ರಭುಶ್ರೀ ತಾಯಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು. ಜು. 16ರಂದು ಬೆಳಗ್ಗೆ 10:30ಕ್ಕೆ ನಡೆಯಲಿರುವ ಚಿಂತನಾ ಗೋಷ್ಠಿ-3ರಲ್ಲಿ ಡಾ| ಎಂ.ಎಂ. ಕಲಬುರ್ಗಿ, ಡಾ| ವೀರಣ್ಣ ರಾಜೂರ, ಡಾ| ಎಚ್‌. ತಿಪ್ಪೇರುದ್ರಸ್ವಾಮಿ ಅವರ ಕುರಿತು ಡಾ| ಶಾರದಾ ಜಾಧವ್‌, ಡಾ| ಚಂದ್ರಕಲಾ ಬಿದರಿ, ಡಾ| ಚಿತ್ಕಳಾ ಹಿರೇಮಠ ಮಾತನಾಡಲಿದ್ದಾರೆ. ಶಕುಂತಲಾ ಭೀಮಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಆರೋಗ್ಯ ಭಾಗ್ಯ ಗೋಷ್ಠಿ-4ರಲ್ಲಿ ಕ್ಯಾನ್ಸರ್‌- ಕಾರಣ, ಮುನ್ನೆಚ್ಚರಿಕೆ, ಆಹಾರ ನಿಯಂತ್ರಣ ಕುರಿತು ಡಾ| ವಿಜಯಲಕ್ಷ್ಮೀ ದೇಶಮಾನೆ,
ಡಾ| ನಿರ್ಮಲಾ ಕೆಳಮನಿ ಉಪನ್ಯಾಸ ನೀಡಲಿದ್ದಾರೆ. ಇಂದುಮತಿ ನಾಗಠಾಣ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ವೇಳೆಯಲ್ಲಿ ವಚನನೃತ್ಯ, ಹಾಡು, ರೂಪಕ, ವೇಷಭೂಷಣ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.

ಸಂಜೆ 6:00 ಗಂಟೆಗೆ ಸಮಾರೋಪ ಸಮಾರಂಭ (ಮಂಗಲದ ಹರಹು) ಜರುಗಲಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅ ಧಿಕಾರಿ ಹೆಬ್ಸಿಬಾ ರಾಣಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ವಿಜಯಲಕ್ಷ್ಮೀ
ಜತ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಡಾ| ಗಂಗಾಂಬಿಕಾ ಪಾಟೀಲ ಸಮಾರೋಪ ನುಡಿಗಳನ್ನಾಡಲಿದ್ದಾರೆ. ನಂತರ ಶ್ರೀಮತಿ ಶಾರದಾ ಅರವಿಂದ ಜತ್ತಿ ಅವರಿಗೆ ವೈರಾಗ್ಯ ನಿಧಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಈ ಭಾಗದ ನಿವೃತ್ತ ನ್ಯಾಯಾಧೀಶರ ಪತ್ನಿಯರಾದ ಅನ್ನಪೂರ್ಣ ಶಿವರಾಜ ಪಾಟೀಲ, ಶೋಭಾ ನಾಗನಾಥ
ಪಾಟೀಲ, ಸುಧಾ ಭಾರತೇಶ ಹಿರೇಮಠ, ಅನ್ನಪೂರ್ಣ ಚನ್ನಮಲ್ಲಪ್ಪ ಬೆನಕನಳ್ಳಿ, ಗಾಯತ್ರಿ ಬುದ್ಧಿವಂತಗೌಡ ಪಾಟೀಲ ಅವರನ್ನು
ಗೌರವಿಸಲಾಗುವುದು ಎಂದು ತಿಳಿಸಿದರು. 

Advertisement

ಶರಣಮ್ಮ ಕಲಬುರ್ಗಿ, ಅನುಸೂಯಾ ನಡಕಟ್ಟಿ, ಡಾ| ಜಯಶ್ರೀ ದಂಡೆ, ರಂಜನಾ ದೇವಣಿ, ಮಂಜುಳಾ ಹೊಟ್ಟಿ, ಡಾ| ವೀರಣ್ಣ ಬಂಡಪ್ಪ ಕೇಸೂರ್‌, ಎಚ್‌.ಕೆ. ಉದ್ದಂಡಯ್ಯ ಹಾಜರಿದ್ದರು. 

ಅಕ್ಕ ಅನ್ನಪೂರ್ಣ ತಾಯಿ ಸಮ್ಮೇಳನಾಧ್ಯಕೆ
10ನೇ ಮಹಾದೇವಿಯಕ್ಕಗಳ ಸಮ್ಮೇಳನ ಸರ್ವಾಧ್ಯಕ್ಷರಾಗಿರುವ ಅಕ್ಕ ಅನ್ನಪೂರ್ಣತಾಯಿ ಅವರು ತಮ್ಮ ವಿಶಿಷ್ಟ ಪ್ರವಚನದ ಮೂಲಕ ಈಗಾಗಲೇ ಕರ್ನಾಟಕದ ಮನೆ ಮಾತಾಗಿರುವ ಬೀದರನ ಬಸವಗಿರಿ ಅವರು. ಸರಳ, ಸಾದಾ, ಸೀದ ವ್ಯಕ್ತಿತ್ವ.
12ನೇ ಶತಮಾನದ ವಚನಕಾರರ ಧ್ಯೇಯೋದ್ಧೇಶಗಳನ್ನು ಸಾಕಾರ ಗೊಳಿಸುವ ನಿಟ್ಟಿನಲ್ಲಿ ಇಡೀ ನಾಡಿನಾದ್ಯಂತ ಸಂಚರಿಸಿ
ಅವರ ಕನಸುಗಳನ್ನು ಸಾಕಾರ ಗೊಳಿಸುತ್ತಿರುವ ಇವರು ನಿಜಕ್ಕೂ ಬಸವ ಸಂಜಾತರು. ವಚನ ವಿಜಯೋತ್ಸವ ಆಚರಿಸುವ ಮೂಲಕ ವಚನ ಚಳವಳಿಯ ಮೂಲ ಆಶಯ ಮೆರೆಸುತ್ತಿರುವ ಅಕ್ಕ ಅನ್ನಪೂರ್ಣತಾಯಿಯವರು ವಿಶಿಷ್ಟ ಸಾಧಕಿ. ವಚನ ಸಾಹಿತ್ಯಕ್ಕೆ ಸಂಬಂಧಿ ಸಿದಂತೆ ಹಲವು ಕೃತಿಗಳನ್ನು ಬರೆದಿರುವ ಅವರು ಈಗಾಗಲೇ ತಾವೂ ಒಬ್ಬ ಉತ್ತಮ ಲೇಖಕಿ ಎಂಬುದನ್ನು ರುಜುವಾತು ಪಡಿಸಿದ್ದಾರೆ. ಈ ಬಾರಿ ಅವರನ್ನು ಅಕ್ಕ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next