Advertisement
ನಿರ್ದೇಶನ ನೀಡಿ: ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಸಂಖ್ಯೆಯಲ್ಲಿ ಕೈದಿಗಳನ್ನು ಇರಿಸುವುದು, ಜೈಲು ಸಿಬ್ಬಂದಿ ನೇಮಕಾತಿ, ಅಲ್ಲಿನ ವ್ಯವಸ್ಥೆ ಹಾಗೂ ಮೂಲ ಸೌಕರ್ಯ ಕುರಿತು ಆಯಾ ರಾಜ್ಯ ಸರ್ಕಾರಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಸರ್ಕಾರಗಳು ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕೆಂದು 2018ರ ಮೇ 8ರಂದು ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಈ ಆದೇಶ ನೀಡಲಾಗಿದೆ.
Related Articles
Advertisement
ಸರ್ಕಾರ ಏನು ಹೇಳಿತ್ತು?: ರಾಜ್ಯದಲ್ಲಿ ಕೇಂದ್ರ, ಜಿಲ್ಲಾ, ತಾಲೂಕು ಹಾಗೂ ಬಯಲು ಬಂದೀಖಾನೆ ಸೇರಿ 60 ಕಾರಾಗೃಹಗಳಲ್ಲಿ 13,622 ಕೈದಿಗಳ ಸಾಮರ್ಥ್ಯ ವಿದ್ದು, ಸದ್ಯ 15,257 ಕೈದಿಗಳಿದ್ದಾರೆ. ಒಟ್ಟು ಸಾಮರ್ಥ್ಯಕ್ಕಿಂತ 1,635 ಕೈದಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದರಲ್ಲಿ 2019ರ ಜು.22ರವರೆಗಿನ ಮಾಹಿತಿಯಂತೆ 14,616 ಪುರುಷ ಹಾಗೂ 641 ಮಹಿಳೆ ಸೇರಿ ಒಟ್ಟು 15,257 ಕೈದಿಗಳಿದ್ದಾರೆ.
9 ಕೇಂದ್ರ ಕಾರಾಗೃಹಗಳ ಸಾಮರ್ಥ್ಯ 7,817 ಇದ್ದರೆ, ಸದ್ಯ 10,397 ಕೈದಿಗಳಿದ್ದಾರೆ. ಬೆಂಗಳೂರು, ಮಂಗಳೂರು, ಹಾಸನ ಮತ್ತು ಬೀದರ್ ಜಿಲ್ಲೆಯಲ್ಲಿ ಹೊಸ ಕೇಂದ್ರ ಕಾರಾಗೃಹ ಸ್ಥಾಪಿಸಲಾಗುತ್ತಿದೆ ಎಂದು ಈ ಹಿಂದೆ ಸಲ್ಲಿಸಿದ ಪ್ರಮಾಣಪತ್ರಗಳಲ್ಲಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ಸಲ್ಲಿಸಿತ್ತು.