Advertisement

ಬಾಂಗ್ಲಾ ಹತ್ಯಾಕಾಂಡಕ್ಕೆ ಖಂಡನೆ

11:16 AM Oct 22, 2021 | Team Udayavani |

ಕಲಬುರಗಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ಮತ್ತು ಹಿಂದೂಗಳನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಹಿಂದೂ ರಕ್ಷಕ ಶಿವಾಜಿ ಬ್ರಿಗೇಡ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

Advertisement

ಬಾಂಗ್ಲಾದೇಶದಲ್ಲಿ ನವರಾತ್ರಿ ಸಂದರ್ಭದಲ್ಲಿ ದುರ್ಗಾಪೂಜೆ ಮಂಟಪಗಳು ಮತ್ತು ಇಸ್ಕಾನ್‌ ಮಂದಿರದ ಮೇಲೆ ಆಕ್ರಮಣ ಮಾಡಲಾಗಿದೆ. ಹಿಂದೂಗಳ ಮೇಲೆ ದಾಳಿ ನಡೆಸಿ, ಹತ್ಯಾಕಾಂಡಕ್ಕೆ ಕಾರಣವಾದ ಮತಾಂಧರ ಮೇಲೆ ಕಠಿಣ ಕ್ರಮಕೊಳ್ಳಲು ಭಾರತ ಸರ್ಕಾರ ಒತ್ತಡ ಹೇರಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ವಿಶ್ವದ್ಯಾಂತ ಇರುವ ಹಿಂದೂಗಳು ರಕ್ಷಣೆಯ ನೈತಿಕ ಜವಾಬ್ದಾರಿ ಭಾರತ ಸರ್ಕಾರದ್ದಾಗಿದೆ. ಈ ನಿಟ್ಟಿನಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ಸುರಕ್ಷತೆಗೆ ಸರ್ಕಾರ, ಅಲ್ಲಿನ ಪ್ರಧಾನಿಗಳೊಂದಿಗೆ ತಕ್ಷಣವೇ ಮಾತುಕತೆ ನಡೆಸಬೇಕು. ಬಾಂಗ್ಲಾದೇಶದಲ್ಲಿ ನಿರಂತರವಾಗಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗೆ ಕಡಿವಾಣ ಹಾಕುವ ಕೆಲಸವಾಗಬೇಕೆಂದು ಒತ್ತಾಯಿಸಿದರು.

1947ರಲ್ಲಿ ಬಾಂಗ್ಲಾದಲ್ಲಿ ಶೇ.28ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇ.8ಕ್ಕೆ ಕುಸಿದಿದೆ. ಹೀಗೆ ಮುಂದುವರಿದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂಖ್ಯೆ ಮತ್ತಷ್ಟು ಕಡಿಮೆ ಆಗಲಿದೆ. ಹೀಗಾಗಿ ಹಿಂದೂಗಳ ಮೇಲಿನ ಹತ್ಯೆ ಮತ್ತು ಅತ್ಯಾಚಾರ ತಡೆಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.

ಕರ್ನಾಟಕದಲ್ಲೂ ಹಿಂದೂ ಕಾರ್ಯಕರ್ತರ ಮೇಲೆ ದಾಳಿ ನಡೆಯುತ್ತಿರುವುದು ಖಂಡನೀಯವಾಗಿದೆ. ತಮಕೂರು ಮತ್ತು ಮಂಗಳೂರಿನಲ್ಲಿ ಬಜರಂಗ ದಳದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಪ್ರತಿಭಟನಾನಿರತರು, ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಗೃಹ ಸಚಿವರು ಮತ್ತು ಕರ್ನಾಟಕದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ಪ್ರತಿಭಟನೆಯಲ್ಲಿ ಬ್ರಿಗೇಡ್‌ ಅಧ್ಯಕ್ಷ ಗುರುಶಾಂತ ಟೆಂಗಳಿ, ಮುಖಂಡರಾದ ಸಂತೋಷ ಬೆನಕನಳ್ಳಿ, ಪ್ರಭು ಯಲಗಾರ, ಶ್ರೀಶೈಲ ಮೂಲಗೆ, ಶಿವರಾಜ ಬಾಳಿ, ಕಿರಣ ಖೆಳೆಗಾಂವಕರ್‌, ಧನರಾಜ ಡೊಂಗರೆ, ಸಚಿನ ವಾಗಮೋರೆ, ರೋಹಿತ, ಶರಣು ಚಿತಕೋಟಿ, ರಾಘು ಗುಂಜೋಟಿ, ಮಲ್ಲು ಶಿವಣಗಿ, ಅರುಣ ವಾಲ್ಮೀಕಿ, ಶ್ರೀನಿವಾಸ ಕುಲಕರ್ಣಿ, ಪ್ರಶಾಂತ, ಗಣೇಶ ಶೀಲವಂತ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next