Advertisement

ಬೇಡ ಜಂಗಮ ಮುಖಂಡರ ಬಂಧನಕ್ಕೆ ಖಂಡನೆ

05:30 PM Jul 10, 2022 | Team Udayavani |

ಚಿತ್ತಾಪುರ: ಬೆಂಗಳೂರಿನ ಫೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಬೇಡ ಜಂಗಮ ಸಮಾಜದ ಬೃಹತ್‌ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಜಂಗಮ ಸಮಾಜದ ಮುಖಂಡರನ್ನು ತಡೆದು ಬಂಧಿಸಿರುವುದು ಸಂವಿಧಾನ ವಿರೋಧಿ ಚಟುವಟಿಕೆಯಾಗಿದೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಖಂಡಿಸಿದರು.

Advertisement

ಪಟ್ಟಣದಲ್ಲಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬೇಡ ಜಂಗಮ ಸಮಾಜದವರು ಆರ್ಥಿಕವಾಗಿ ಬಡವರಾಗಿದ್ದಾರೆ. ಸಂವಿಧಾನಬದ್ಧ ಹಕ್ಕಿಗಾಗಿ ಬಹುದಿನಗಳಿಂದ ಹೋರಾಟ ಮಾಡಲಾಗುತ್ತಿದೆ. ಶಾಂತಿಯುತವಾಗಿ ಹೋರಾಟ ನಡೆಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಪತ್ರ ಸಲ್ಲಿಸುವ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಆದರೆ ಹೋರಾಟದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುತ್ತಿದ್ದ ಮುಖಂಡರನ್ನು ಬಂಧಿಸಿರುವುದು ಕಾನೂನು ವಿರೋಧಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ವಿಳಂಬ ನೀತಿ ಅನುಸರಿಸದೇ ಸಂಬಂಧಪಟ್ಟ ಇಲಾಖೆ ಮೂಲಕ ಬೇಡ ಜಂಗಮ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯಾಧ್ಯಕ್ಷ ಬಿ.ಡಿ. ಹಿರೇಮಠ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ಅವಕಾಶ ಕೊಡದೇ ಶೀಘ್ರ ಆದೇಶ ಮಾಡಬೇಕು ಎಂದು ಆಗ್ರಹಿಸಿದರು. ವಿರೂಪಾಕ್ಷಯ್ಯ ಮಠಪತಿ ತೋಟಯ್ಯ, ರಾಜಶೇಖರ ಸ್ವಾಮಿ, ಶಿವಪುತ್ರಯ್ಯ ಸ್ವಾಮಿ ನಾಲವಾರ, ಬಸಯ್ಯ ಸ್ವಾಮಿ ಹಿರೇಮಠ, ವೀರಭದ್ರಯ್ಯ ಸ್ವಾಮಿ, ತೋಟ್ಟಯ್ಯ, ಹಂಪಯ್ಯ, ರಾಜಶೇಖರ ಸ್ವಾಮಿ ಕೊಲ್ಲೂರ, ಬಸಯ್ಯ ಸ್ವಾಮಿ, ನಂದಿಕೋಲ ಮಠ ರಾವೂರ, ಕರಬಸಯ್ಯಶಾಸ್ತ್ರೀ, ಮಂಜುನಾಥ ಶಾಸ್ತ್ರೀ, ವಿರೂಪಾಕ್ಷಿ ಸ್ವಾಮಿ ದಿಗ್ಗಾಂವ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next