Advertisement
ಈ ಹಿಂದೆ ಇಲ್ಲಿ ತೂಗು ಸೇತುವೆ ನಿರ್ಮಿಸುವುದಕ್ಕೆಂದು ಯೋಜಿಸಲಾಗಿತ್ತು, ಆದರೆ ಸ್ಥಳೀಯರು ತೂಗುಸೇತುವೆ ಮಾಡಿ ಪ್ರಯೋಜನವಿಲ್ಲ, ಕೇವಲ ಜನರು ಕಾಲ್ನಡಿಗೆಯಲ್ಲಿ ಸಂಚರಿಸುದು ಮಾತ್ರವಲ್ಲ ವಾಹನವೂ ಸಂಚರಿಸುವಂತಹ ಅವಕಾಶ ಬೇಕು ಎಂಬ ಆಗ್ರಹ ಇರಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್ ಇಲ್ಲಿ ಖಾಯಂ ಕಾಂಕ್ರೀಟ್ ಸೇತುವೆಯನ್ನೇ ನಿರ್ಮಿಸಲಿದೆ.
Related Articles
Advertisement
ಸುಲ್ತಾನ್‌ಬತ್ತೇರಿ – ತಣ್ಣೀರುಬಾವಿ ಸೇತುವೆ ನಿರ್ಮಾಣ ಎರಡು ದಶಕಗಳ ಹಿಂದಿನ ಕನಸು. ಆಗಿನ ಶಾಸಕ ಎನ್.ಯೋಗೀಶ್ ಭಟ್ ಅವರಿದ್ದಾಗಲೇ ಯೋಜನೆ ರೂಪಿಸಲಾಗಿತ್ತು. ಆಗ ಸೇತುವೆ ಮೇಲೆ ವಾಹನ ಸಂಚರಿಸುವ ಯೋಜನೆ ಇರಲಿಲ್ಲ, ಕೇವಲ ಪ್ರವಾಸೋದ್ಯಮಕ್ಕೆ ನೆರವಾಗುವ ಹಾಗೂ ಸ್ಥಳೀಯರಿಗೆ ನಡೆದಾಡುವುದಕ್ಕೆ ಮಾತ್ರವೇ ಅವಕಾಶ ವಿತ್ತು. 3 ಮೀಟರ್ ಅಗಲದ ಒಟ್ಟು 410 ಮೀಟರ್ ಉದ್ದದ 12 ಕೋಟಿ ರೂ.ನ ಯೋಜನೆ ಇದಾಗಿತ್ತು. 2012ರಲ್ಲಿ ಪ್ರಾರಂಭಗೊಂಡ ಈ ಯೋಜನೆಗೆ ನದಿ ಪಾತ್ರದಲ್ಲಿ ಪೈಲಿಂಗ್ ಕೆಲಸ ನಡೆದಿದ್ದು, ಬಳಿಕ ಹಣ ಬಿಡುಗಡೆಯಾಗದೆ ಅಲ್ಲಿಗೇ ಸ್ಥಗಿತಗೊಂಡಿತ್ತು.
ಆ ಬಳಿಕ ಮಂಗಳೂರು ಸ್ಮಾರ್ಟ್‌ಸಿಟಿ ಈ ಯೋಜನೆ ಮುಂದುವರಿಸುವುದಕ್ಕೆ ಯೋಜನೆ ರೂಪಿಸಿತ್ತು. ತನ್ನ ಸೀಲಿಂಕ್ ಯೋಜನೆಯಡಿಯಲ್ಲಿ ಈ ಕೆಲಸವನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಹಿಂದೆ ನಡೆದಿರುವ ಸುಮಾರು 1 ಕೋಟಿ ರೂ. ವೆಚ್ಚದ ಕೆಲಸ ಹಾಗೂ ಈಗಿನ ಹೊಸ ಯೋಜ ನೆಯ ಕೆಲಸ ಹೊಂದಾಣಿಕೆಯಾಗದ ಅದನ್ನು ಸೇರಿಸಿಕೊಳ್ಳುವಂತಿಲ್ಲ, ಇದನ್ನು ಪ್ರತ್ಯೇಕ ವಾಗಿಯೇ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಣ್ಣೀರುಬಾವಿ ಹತ್ತಿರವಾಗಲಿದೆ
ಮಂಗಳೂರಿನ ಸುಲ್ತಾನ್‌ಬತ್ತೇರಿ ಸಾಮಾನ್ಯವಾಗಿ ಪ್ರವಾಸಿಗರು ಭೇಟಿ ನೀಡುವ ಪ್ರದೇಶ. ಇದನ್ನು ತಣ್ಣೀರುಬಾವಿಗೆ ಬೆಸೆಯುವುದರಿಂದ ಈ ಭಾಗದಲ್ಲಿ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯಬಹುದುಎನ್ನುವುದು ಇದರ ಮುಖ್ಯ ಉದ್ದೇಶ. ಪ್ರಸ್ತುತ ತಣ್ಣೀರುಬಾವಿಗೆ ಹೋಗುವುದಕ್ಕೆ ಕೂಳೂರು ಮೂಲಕ ಸುತ್ತಾಗಿ ಹೋಗಬೇಕುಅಥವಾ ಬಂದರಿಗೆ ಹೋಗಿ ಅಲ್ಲಿಂದ ಬೆಂಗ್ರೆಗೆ ಫೆರಿ ಮೂಲಕ ಬರಬೇಕು. ಈ ಪ್ರಮೇಯ ತಪ್ಪಿಸಿ, ನೇರವಾಗಿ ನಗರದಿಂದಲೇ ತಣ್ಣೀರುಬಾವಿಗೆ ಹೋಗಿಬರಬಹುದಾಗಿದೆ.
ಬೋ ಸ್ಟ್ರಿಂಗ್ ಸೇತುವೆ
ಇದು ಬೋ ಸ್ಟ್ರಿಂಗ್ ಎಂದರೆ ಬಿಲ್ಲಿನಾಕಾರದ ಕಮಾನಿನ ಸೇತುವೆ. ಸ್ಥಳೀಯರು ವಾಹನ ಸಂಚಾರಕ್ಕೆ ಪೂರಕ ಸೇತುವೆ ಬೇಕು ಎಂಬ ಒತ್ತಾಯ ಇರಿಸಿದ್ದರಿಂದ ಇಲ್ಲಿ ತೂಗು ಸೇತುವೆ ಕೈ ಬಿಡಲಾಗಿದೆ. ಅಂತಿಮ ವಿನ್ಯಾಸ ಇತ್ಯಾದಿಗಳನ್ನು ಟೆಂಡರ್ ಪಡೆಯುವ ಸಂಸ್ಥೆಯೇ ಸಿದ್ಧಪಡಿಸಲಿದೆ.-ಅರುಣ್‌ಪ್ರಭ , ಜಿಎಂ (ತಾಂತ್ರಿಕ), ಮಂಗಳೂರು ಸ್ಮಾರ್ಟ್‌ಸಿಟಿ – ವೇಣುವಿನೋದ್ ಕೆ.ಎಸ್