Advertisement

ಕಂಪ್ಯೂಟರೀಕರಣಕೆ ಜಾನಪ¨

11:01 AM Feb 26, 2018 | Team Udayavani |

ಆಳಂದ: ಕರ್ನಾಟಕದ ಸಮಗ್ರ ಜಾನಪದವನ್ನು ಕಂಪ್ಯೂಟರೀಕರಣಗೊಳಿಸುವ ಯೋಜನೆ ಹೊಂದಲಾಗಿದೆ ಎಂದು ಜಾನಪದ ವಿಶ್ವವಿದ್ಯಾಲಯದ ನೂತನ ಕುಲಪತಿ ಪ್ರೊ| ಡಿ.ಬಿ. ನಾಯಕ ಹೇಳಿದರು.

Advertisement

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ದಕ್ಷಿಣ ಭಾರತದದ ಭಾಷೆಗಳ ಜಾನಪದ ಸಂಘಟನೆ ತಿರುವನಂತಪುರಂ ಮತ್ತು ಕೇಂದ್ರೀಯ ಭಾರತೀಯ ಭಾಷಾ ಸಂಸ್ಥೆ ಮೈಸೂರು ಜತೆಗೊಡಿ ಆಯೋಜಿಸಿದ್ದ ಜಾಗತಿಕ ಜಾನಪದ ಪ್ರಸ್ತುತ ಸಂಶೋಧನೆ ಕುರಿತ ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಜಾನಪದ ಅಧ್ಯಯನವು ವಿಸ್ತಾರವಾಗಿ ಬೆಳೆಯಬೇಕಾಗಿದೆ. ಜಾಗತೀಕರಣ, ತಂತ್ರಜ್ಞಾನ, ಕಂಪ್ಯೂಟರೀಕರಣ ಮತ್ತು ಆಧುನಿಕ ವಿಜ್ಞಾನಗಳ ಬೆಳವಣಿಗೆಯನ್ನು ತನ್ನೊಳಗೆ ಅರಗಿಸಿಕೊಳ್ಳಬೇಕಾಗಿದೆ. ಹಾಗಾದಾಗ ಮಾತ್ರ ಜಾನಪದ ಅಧ್ಯಯನಕ್ಕೆ ಉಜ್ವಲ ಭವಿಷ್ಯವಿದೆ ಎಂದು ಹೇಳಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಏಷ್ಯಾದ ಮೊದಲ ಜಾನಪದ ವಿಶ್ವವಿದ್ಯಾಲಯವಾಗಿದೆ. ಅದರ ಎದುರು ಹಲವಾರು ಸವಾಲುಗಳಿವೆ. ಇವುಗಳನ್ನು ಎದುರಿಸಲು ಕನ್ನಡ ಮತ್ತು ಇತರ ಭಾಷೆಗಳ ಜಾನಪದ ವಿದ್ವಾಂಸರು ಶ್ರಮಿಸಬೇಕಾಗಿದೆ. ಕರ್ನಾಟಕದ ಸಮಗ್ರ ಜಾನಪದವನ್ನು ಕಂಪ್ಯೂಟರೀಕರಣಗೊಳಿಸುವ ಯೋಜನೆಯನ್ನು ಜಾನಪದ ವಿಶ್ವವಿದ್ಯಾಲಯ ಹಾಕಿಕೊಂಡಿದೆ.

ಜತೆಗೆ ಭಾರತೀಯ ಜಾನಪದಗಳ ಅಧ್ಯಯನಕ್ಕೂ ನೆಲೆ ಕಲ್ಪಿಸುವ ಉದ್ದೇಶ ಜಾನಪದ ವಿಶ್ವವಿದ್ಯಾಲಯದ್ದಾಗಿದೆ. ಸಂಪ್ರದಾಯ ಹಾಗೂ ಆಧುನಿಕತೆಯನ್ನು ಆರೋಗ್ಯಕರವಾಗಿ ಬೆಸೆಯುವ ಗುರಿ ವಿಶ್ವವಿದ್ಯಾಲಯದ ಮುಂದಿದೆ ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಚ್‌.ಎಂ. ಮಹೇಶ್ವರಯ್ಯ ಮಾತನಾಡಿ, ಕೇಂದ್ರೀಯ ವಿಶ್ವವಿದ್ಯಾಲಯ ಕನ್ನಡ ಜಾನಪದವನ್ನು ವಿದೇಶಿ ವಿದ್ವಾಂಸರಿಗೆ ಪರಿಚಯಿಸುವ ಮತ್ತು ಹೊಸ ಅಧ್ಯಯನಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಈ ಒಂದು ಸಮ್ಮೇಳನ ಆಯೋಜಿಸಲಾಗಿದೆ.
 
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜಾನಪದ ಸಮಾವೇಶಗಳು ಅದರ ಅಧ್ಯಯನಕ್ಕೆ ಹೊಸ ಬಾಗಿಲುಗಳನ್ನು ತೆರೆಯುತ್ತವೆ. ಹಳೆ ಮತ್ತು ಹೊಸ ವಿದ್ವಾಂಸರು ಒಂದೆಡೆ ಸೇರಿ ಪರಸ್ಪರ ಚರ್ಚಿಸಿ ಮುಂದುವರೆಯುವುದು ಯಾವುದೇ ಅಧ್ಯಯನ ಕ್ಷೇತ್ರಕ್ಕೆ ಅಗತ್ಯವಾಗಿದೆ ಎಂದು ಹೇಳಿದರು. ಪ್ರೊ| ಸರಸ್ವತಿ ವೇಣುಗೋಪಾಲ, ಪ್ರೊ| ಕೈಲಾಸ ಪಟ್ನಾಯಕ್‌, ಪ್ರೊ| ಭಕ್ತವತ್ಸಲರೆಡ್ಡಿ, ಡಾ| ನಸೀಮುದ್ಧೀನ್‌ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next