Advertisement

24 ಗಂಟೆಯೊಳಗೆ ನೀರು ತಲುಪಿಸಲು ಒತ್ತಾಯ

05:42 PM Sep 06, 2022 | Team Udayavani |

ದೇವದುರ್ಗ: ಕಳೆದ ಹದಿನೈದು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದ ಅನ್ವರ ಸಮೀಪದಲ್ಲಿರುವ ಎನ್‌ಆರ್‌ ಬಿಸಿ ಅರಕೇರಾ 9ಎ ಡಿಸ್ಟ್ರಿಬ್ಯೂಟರ್‌ ಕಾಲುವೆಯ ಮೇಲ್ಭಾಗದ ಮಣ್ಣು ಕುಸಿದಿದ್ದು, ದುರಸ್ತಿಗೊಳಿಸುವಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎ.ರಾಜಶೇಖರ ನಾಯಕ ಆರೋಪಿಸಿದರು.

Advertisement

ಘಟನಾ ಸ್ಥಳಕ್ಕೆ ರೈತರೊಂದಿಗೆ ಭೇಟಿ ನೀಡಿ ಅವರು ಮಾತನಾಡಿದರು. ದೇವರಗುಡ್ಡ, ಗಲಗ, ಮೂಡಲಗುಂಡ, ಸರಕಲಗುಡ್ಡ, ಅನ್ವರ, ಅಡಕಲಗುಡ್ಡ, ಆಲ್ಕೋಡ, ಶಾವಂತಗಲ್‌, ವಡವಟ್ಟಿ, ನಾರಬಂಡ, ಎ.ಜಿ ಕಾಲೋನಿ, ಉಲಕಬಂಡಾ ತಾಂಡ, ಉಣಚೇಡ, ಮುರ್ಕಿಗುಡ್ಡ, ಕ್ಯಾದಿಗ್ಗೇರಾ, ಮರಾಠ, ಜಾಗೀರ್‌ ಜಾಡಲದಿನ್ನಿ, ರೇಕಲಮರಡಿ, ನಾಗೋಲಿ, ನವಲಕಲ್‌ ಸೇರಿ ಇನ್ನಿತರ ಹಳ್ಳಿಗಳ ರೈತರು ಕಾಲುವೆ ನೀರನ್ನೇ ಅವಲಂಬಿಸಿದ್ದಾರೆ. ಕೆಳ ಹಾಗೂ ಮೇಲ್ಭಾಗದ ರೈತರ ಜಮೀನುಗಳಿಗೆ ಕಳೆದ ಒಂದು ವಾರದಿಂದ ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಈಗಾಗಲೇ ಲಕ್ಷಾಂತರ ರೂ. ವ್ಯಯಿಸಿ ಹತ್ತಿ, ಭತ್ತ, ತೊಗರಿ, ಮೆಣಸಿನಕಾಯಿ ಸೇರಿ ಹಲವು ಬೆಳೆಗಳನ್ನು ಬೆಳೆದಿದ್ದು, ಉತ್ತಮ ಫಸಲು ಕಂಡಿದ್ದ ರೈತರು ಕಂಗಾಲಾಗಿದ್ದಾರೆ. ಇದರಿಂದ ನೂರಾರು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. 24 ಗಂಟೆಯೊಳಗೆ ರೈತರ ಜಮೀನುಗಳಿಗೆ ನೀರು ತಲುಪಿಸಬೇಕು. ನಿರ್ಲಕ್ಷ್ಯ ವಹಿಸಿದ್ದಲ್ಲಿ ಎನ್‌ಆರ್‌ಬಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ನಿಂಗಪ್ಪ ಅನ್ವರ, ಸಾಹೇಬ ಗೌಡ ಅನ್ವರ, ಅಯ್ಯಪ್ಪ ಅನ್ವರ, ಹನುಮಂತ ಗುಡದನಾಳ ಗಲಗ, ನಿಂಗಪ್ಪ ಅನ್ವರ, ಶಿವಪ್ಪ ಬಂಡೆಹೊಲ ಆಲ್ಕೋಡ, ಯಲ್ಲಪ್ಪ ಕಂಬಾರ ಅಲ್ಕೋಡ, ಎಂ.ಕುಪ್ಪಯ್ಯ ಭೋವಿ ಆಲ್ಕೋಡ, ನರಸಪ್ಪ ಶಾವಂತಗಲ್‌, ಲಿಂಗಣ್ಣ ಹವಲ್ದಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next