Advertisement

ಆತ್ಮಹತ್ಯೆಗೆ ಯತ್ನಿಸಿದ ರೈತನ ಬದುಕು ಬದಲಾಯಿಸಿದ ‘ಸಮಗ್ರ ಕೃಷಿ ಪದ್ಧತಿ’: ಸಚಿವರ ಶ್ಲಾಘನೆ

12:29 PM Feb 10, 2022 | Team Udayavani |

ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿದ್ದವನ ಬದುಕನ್ನು ಬದಲಾಯಿಸಿ ಮಾದರಿ ರೈತನನ್ನಾಗಿ ಮಾಡಿದ್ದು “ಸಮಗ್ರ ಕೃಷಿ ಪದ್ಧತಿ. ಇಂತಹ ಮಾದರಿ ರೈತ ‘ದುರ್ಗಪ್ಪ ಅಂಗಡಿ’ಯವರನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಖುದ್ದು ಕಚೇರಿಗೆ ಕರೆಯಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಕಡಿಮೆ ನೀರಿನಲ್ಲಿಯೂ ಕೃಷಿ ಸಾಧನೆ ಮಾಡುವ ಕೋಲಾರದ ರೈತರು ಇಡೀ ರಾಜ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಸಮಗ್ರ ಕೃಷಿ ಪದ್ಧತಿ ಎನ್ನುವುದು ರೈತರನ್ನು ಒಂದಲ್ಲ ಒಂದು ರೀತಿಯಲ್ಲಿ ಕೈಹಿಡಿಯುತ್ತದೆ. ಸಾಲ ಮಾಡಿದೆನೆಂದು ಕೊರಗುವುದನ್ನು ಬಿಟ್ಟು ಅದರಿಂದ ಹೊರಬಂದು ಆದಾಯವನ್ನು ದ್ವಿಗುಣಗೊಳಿಸುವುದು ಹೇಗೆ ಎಂಬುದನ್ನು ದುರ್ಗಪ್ಪ ಅಂಗಡಿ ಮಾಡಿ ತೋರಿಸಿದ್ದಾರೆ. ಇಂತಹ ರೈತರು ಎಲ್ಲಾ ಅನ್ನದಾತರಿಗೂ ಸ್ಫೂರ್ತಿ ಎಂದು ಬಿ.ಸಿ.ಪಾಟೀಲ್ ಶ್ಲಾಘಿಸಿದರು.

ಇದನ್ನೂ ಓದಿ:12 ತಿಂಗಳೂ ಫಿಲ್ಟರ್ ನದ್ದೇ ಸಮಸ್ಯೆ ! ‌ಕೆರೆಯಲ್ಲಿ ಆಗಾಗ ಕೆಟ್ಟು ನಿಲ್ಲುವ ಫಿಲ್ಟರ್

ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದಕ್ಕಾಗಿಯೇ ‘ರೈತರೊಂದಿಗೊಂದು ದಿನ’ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಸಮಗ್ರ ಕೃಷಿ ಪದ್ಧತಿ ರೈತನ ಸಾಧನೆ ಅವನಲ್ಲಿನ ಆತ್ಮಸ್ಥೈರ್ಯ ಹೇಗೆ ಪರಿಣಾಮಕಾರಿ ಮತ್ತು ಸ್ಫೂರ್ತಿದಾಯಕವೆನ್ನುವುದನ್ನು ದುರ್ಗಪ್ಪ ಅಂಗಡಿ ಮಾಡಿ ತೋರಿಸಿದ್ದಾರೆ. ಇಂತಹ ಗಟ್ಟಿಮನಸಿನ ರೈತರೇ ಇತರರಿಗೂ ಮಾದರಿಯಾಗಬಲ್ಲರು. ಅಲ್ಲದೇ ಅನ್ನದಾತನ ಸ್ಫೂರ್ತಿದಾಯಕ ಬದುಕು ವಿಶ್ವವಿದ್ಯಾಲಯದಲ್ಲಿ ಪಠ್ಯವಾಗುವುದೆಂದರೆ ಅದು ನಮ್ಮ ರಾಜ್ಯದ ಅನ್ನದಾತ ಎನ್ನುವುದು ಹೆಮ್ಮೆಯೇ ಸರಿ. ಸಾಧನೆಗೆ ಶೈಕ್ಷಣಿಕ ಅರ್ಹತೆಯೊಂದೇ ಮುಖ್ಯವಲ್ಲ. ಸಾಧಿಸುವ ಛಲ, ದಿಟ್ಟ ನಡೆ ಎಂಬುದನ್ನು ದುರ್ಗಪ್ಪ ಅಂಗಡಿ ಮಾಡಿ ತೋರಿಸಿ ಇತರ ರೈತರಿಗೂ ಸ್ಫೂರ್ತಿದಾಯಕರಾಗಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ ಎಂದು ಬಿ.ಸಿ.ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next