Advertisement
ಈ ರಸ್ತೆಗೆ ಒಳ ಚರಂಡಿಯೇ ಇಲ್ಲತೆಕ್ಕಟ್ಟೆ – ಕೊಮೆ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಸುಮಾರು 3 ಕಿ.ಮೀ.ರಸ್ತೆ ಸಂಪೂರ್ಣ ಕಿರಿದಾಗಿರುವುದು ಒಂದೆಡೆಯಾದರೆ ಮತ್ತೂಂದೆಡೆಯಲ್ಲಿ ಸಮರ್ಪಕವಾದ ಒಳ ಚರಂಡಿಯ ಕೊರತೆಗಳಿದ್ದರೂ ಕೂಡಾ ಸಂಬಂಧಪಟ್ಟ ಸ್ಥಳೀಯಾಡಳಿತ ಮುಂಗಾರು ಮಳೆ ಆರಂಭದ ಮೊದಲು ಯಾವುದೇ ರೀತಿಯ ಪರ್ಯಾಯ ಕ್ರಮ ಕೈಗೊಳ್ಳದೆ ಇರುವುದರ ಪರಿಣಾಮವಾಗಿ ಇಂದು ರಸ್ತೆಯೇ ಚರಂಡಿಯಾಗಿ ಮಾರ್ಪಟ್ಟಿದೆ ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ತೀವ್ರ ಆಕ್ರೋಶ ವ್ಯಕ್ತವಾದರೂ ಕೂಡಾ ಸ್ಥಳೀಯಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿರುವುದು ಮಾತ್ರ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿರುವುದು ಮಾತ್ರ ವಾಸ್ತವ ಸತ್ಯ.
ಸುಮಾರು 30 ವರ್ಷದ ಹಿಂದೆಯೇ ನಿರ್ಮಾಣವಾಗಿರುವ ಈ ಪ್ರಮುಖ ರಸ್ತೆ ತೇಪೆ ಕಾರ್ಯದಲ್ಲಿಯೇ ಸಂತೃಪ್ತಿ ಕಂಡಿದೆ ಆದರೆ ಇದಕ್ಕೆ ವಿಪರ್ಯಾಸ ಎನ್ನುವಂತೆ ಇಲ್ಲಿನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪ ಸುಮಾರು ನೂರು ಮೀಟರ್ ಕಾಂಕ್ರೀಟ್ ರಸ್ತೆ ಕಾಮಗಾರಿಯು ವರುಷ ಕಳೆಯುವ ಮುನ್ನವೇ ತನ್ನ ಮೂಲ ಸ್ವರೂಪವನ್ನು (ಕಳಪೆ ಕಾಮಗಾರಿ) ಎತ್ತಿ ತೋರಿಸಿರುವುದು ಸಾರ್ವಜನಿಕರ ಚರ್ಚೆಗೆ ಕಾರಣವಾಗಿದೆ. ಜಿಲ್ಲೆಯ ಹೆಚ್ಚಿನ ಕರಾವಳಿ ಸಂಪರ್ಕ ರಸ್ತೆಗಳು ಅಭಿವೃದ್ಧಿ ಕಂಡರೂ ಕೂಡಾ ಇದುವರೆಗೆ ತೆಕ್ಕಟ್ಟೆ- ಕೊಮೆ ಸಂಪರ್ಕರಸ್ತೆ ಮಾತ್ರ ಯಾವುದೇ ರೀತಿಯ ರಸ್ತೆ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದ್ದು ಪರಿಣಾಮವಾಗಿ ಅದೆಷ್ಟೋ ಗ್ರಾಮೀಣ ಭಾಗದಿಂದ ಸ್ಥಳೀಯ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ತೀವ್ರ ತೊಂದರೆ ಆನುಭವಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ತತ್‌ಕ್ಷಣ ಮುಂದಾಗಬೇಕಾದ ಅಗತ್ಯ ಇದೆ.
– ಗ್ರಾಮಸ್ಥರು ಕೊಮೆ